ಶ್ರೀ ಬನಶಂಕರಿ ದೇವಿ ಸನ್ನಿಧಾನದಲ್ಲಿ “ ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆ ” ಆಶ್ರಯದಲ್ಲಿ 25ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷವು ಸಹ ಏರ್ಪಡಿಸಿದ್ದು, ದಿನಾಂಕ:29/02/2024ನೇ, ಗುರುವಾರದಂದು ನಡೆಸಲು ವೇದಿಕೆಯು ತೀರ್ಮಾನಿಸಿದೆ.

ಕಳೆದ ಇಪ್ಪತ್ತನಾಲ್ಕು (24) ವರ್ಷಗಳ ಕಾಲ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ವೇದಿಕೆಯು ಆಚರಿಸಿಕೊಂಡು ಬಂದಿದ್ದು, ಈ ಬಾರಿಯು ಸಹ ಅದೇ ರೀತಿ ಸಾಮೂಹಿಕ ವಿವಾಹವನ್ನು ನಡೆಸಲು ವೇದಿಕೆಯು ಉತ್ಸುಕವಾಗಿದೆ. ಕಳೆದ ಇಪ್ಪತ್ತ ನಾಲ್ಕು ವರ್ಷಗಳಲ್ಲಿ ಸರಿ ಸುಮಾರು 1431 ಕ್ಕೂ ಹೆಚ್ಚು ಜೋಡಿಗಳು ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ.
ಬಡವರು,ಹಿಂದುಳಿದ ವರ್ಗಗಳ ಜನರಿಗೆ ವಿವಾಹವು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವುದನ್ನು ವೇದಿಕೆಯು ಮನಗಂಡು ಶ್ರೀ ಬನಶಂಕರಿ ಅಮ್ಮನವರ ಆಶೀರ್ವಾದ ಪಡೆದು ಅಂತಹ ವರ್ಗದ ಜನರಿಗೆ ಸರಳ ಹಾಗೂ ಉಚಿತವಾಗಿ ವಿವಾಹ ನಡೆಸುವ ಸಂಬಂಧಕ್ಕಾಗಿ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಯಿತು.
1999ರಲ್ಲಿ ವೇದಿಕೆಯು ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಚಾಲನೆ ನೀಡಿತು. ಆರಂಭದ ವರ್ಷದಲ್ಲಿ 41 ಜೋಡಿಗಳು ವೈವಾಹಿಕ ಜೀವನಕ್ಕೆ ಪ್ರವೇಶಿಸಿದವು. ಇದರಿಂದ ಪ್ರೇರಣೆಗೊಂಡ ವೇದಿಕೆಯು ಇಂತಹ ಧಾರ್ಮಿಕ, ಸಾಮಾಜಿಕ ಕಾಳಜಿ ಪರ ಕಾರ್ಯಕ್ರಮವನ್ನು ಪ್ರತೀ ವರ್ಷವು ಸಹ ಮುಂದುವರೆಸುವ ಸಂಕಲ್ಪ ಮಾಡಿ ಅದರ ಪರಿಣಾಮ ಇದೀಗ “ಇಪ್ಪತ್ತ ಐದು(25)” ವರ್ಷಕ್ಕೆ ಕಾಲಿರಿಸಲು ಕಾರಣವಾಯಿತು.
ಜಾತಿ, ಮತ, ಭೇಧ ಎಲ್ಲಾ ಸಂಗತಿಗಳನ್ನು ದೂರ ಇರಿಸಿ ಎಲ್ಲಾ ವರ್ಗದ ಜನರನ್ನು ಒಂದೇ ಮದುವೆ ಮಂಟಪದಲ್ಲಿ ಕಲೆ ಹಾಕಿ ಸಾಮೂಹಿಕ ವಿವಾಹ ಮಾಡಲಾಗುತ್ತಿದೆ. ಎಂದಿನಂತೆ ಮಠಾಧೀಶರ ಆಶೀರ್ವಾದ, ಹಿರಿಯ ರಾಜಕಾರಣಿಗಳ ಮಾರ್ಗದರ್ಶನ ಹಾಗೂ ಸೇವಾ ಮನೋಭಾವವುಳ್ಳ ವ್ಯಕ್ತಿಗಳ, ಸಂಸ್ಥೆಗಳ ಸಹಕಾರದೊಂದಿಗೆ ಈ ಬಾರಿ ಹೆಚ್ಚಿನ ಜೋಡಿಗಳ ವಿವಾಹ ಮಹೋತ್ಸವದ -ಗುರಿ ಹೊಂದಲಾಗಿದೆ.
ದಿನಾಂಕ- 29/02/2024ನೇ ಗುರುವಾರ ಬೆಳಗ್ಗೆ 11-12 ರಿಂದ 01-02 ರ ವೃಷಭ ಲಗ್ನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ, ಕನಕಪುರ ಮುಖ್ಯರಸ್ತೆ, ಬನಶಂಕರಿ, ಬೆಂಗಳೂರು, ಇಲ್ಲಿ ಇರುವ ದೇವಾಲಯದ ಪ್ರಾಂಗಣದಲ್ಲಿ ಉಚಿತ ವಿವಾಹ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಹಾಗೂ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವಾಸವಿರುವ ಇಚ್ಛೆಯುಳ್ಳ ವಧು-ವರರ ಬಂಧು, ತಂದೆ-ತಾಯಿಯರು ಮತ್ತು ಪೋಷಕರುಗಳು ದಿನಾಂಕ 22/02/2024 ರೊಳಗೆ ತಮ್ಮ ವಿವಾಹವಾಗಲಿರುವ ವಧು-ವರರ ಹೆಸರುಗಳನ್ನು ನೋಂದಾಯಿಸ ತಕ್ಕದ್ದು. ಆಸಕ್ತ ಪೋಷಕರು ಹಾಗೂ ತಂದೆ-ತಾಯಿಯರು ಹೆಚ್ಚಿನ ಮಾಹಿತಿಗಾಗಿ 080-26712988, 7019073889 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವುದು.
ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಧು-ವರರಿಗೆ ಹಿಂದೂ ಸಂಪ್ರದಾಯದಂತೆ ಸಮವಸ್ತ್ರ, ಬಾಸಿಂಗ, ಕಂಕಣದಾರ, ಹೂವಿನ ಹಾರ, ಮಾಂಗಲ್ಯ, ಕಾಲುಂಗರ, ಪೇಟ ಮತ್ತು ವಧು-ವರರ ಬಂಧು ಬಳಗದವರಿಗೆ, ಅಥಿತಿಗಳಿಗೆ ಹಾಗೂ ಸ್ಥಳೀಯರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀ ಬನಶಂಕರಿ ಸಾಮೂಹಿಕ ವಿವಾಹ ವೇದಿಕೆಯು ಹಮ್ಮಿ ಕೊಂಡಿರುವ “25ನೇ ವರ್ಷದ ಉಚಿತ ಸಾಮೂಹಿಕ ವಿವಾಹ” ಮಹೋತ್ಸವದ ಬಗ್ಗೆ ತಮ್ಮ ಘನ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಿ ಇಚ್ಚೆಯುಳ್ಳ ವಧು-ವರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿ ಕೊಡಬೇಕೆಂದು ತಮ್ಮಲ್ಲಿ ಕೋರುತ್ತೇವೆ.
-ಎ. ಹೆಚ್. ಬಸವರಾಜು ವ್ಯವಸ್ಥಾಪಕರು ಮಾಜಿ ವಿರೋಧಪಕ್ಷದ ನಾಯಕರು, ಬಿಬಿಎಂಪಿ.
-ಜೆ.ಆರ್.ದಾಮೋದರನಾಯ್ಡು.
-ಹೆಚ್.ಕೆ.ಮುತ್ತಪ್ಪ.
-RN ಆರ್.ನಾರಾಯಣಸ್ವಾಮಿ,
-ಸಿ.ಮುತ್ತಪ್ಪ.
City Today News 9341997936
