ಚರ್ಮಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡಲು ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಅನುದಾನ ನೀಡಲು ಒತ್ತಾಯ ಹಾಗೂ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರನ್ನು ಖಾಯಮ್ಮಾಗಿ ನಿಯೋಜಿಸಲು ಒತ್ತಾಯ.

ಚರ್ಮೋದ್ಯಮವು ಜನಜೀವನದಲ್ಲಿ ಅನಾದಿಕಾಲದಿಂದಲೂ ಹಾಸುಹೊಕ್ಕಾಗಿದೆ. ಈ ಉದ್ಯಮವನ್ನು ವಂಶಪಾರಂಪರಿಕವಾಗಿ ಬೆಳೆಸಿಕೊಂಡು ಬಂದಿರುವ ಪರಿಶಿಷ್ಟ ಜಾತಿಯ ಆದಿಜಾಂಬವ ಜನಾಂಗದ ಸುಮಾರು 50 ಸಾವಿರಕ್ಕೂ ಹೆಚ್ಚು ಕುಶಲ ಕರ್ಮಿಗಳು ತಮ್ಮ ಬದುಕಿಗೆ ಲಿಡ್ಕರ್ ಸಂಸ್ಥೆಯ ಮೇಲೆ ಅವಲಂಬಿತರಾಗಿದ್ದಾರೆ. ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಈ ಸಮುದಾಯದ ಕುಶಲಕರ್ಮಿಗಳ ಉದ್ಯಮವನ್ನು ಉತ್ತಮಗೊಳಿಸಲು ಲಿಡ್ಕರ್ ಸಂಸ್ಥೆಯು ತನ್ನ ಧೇಯೋದ್ದೇಶಗಳನ್ನು ಅರ್ಥವತ್ತಾಗಿ ಅಳವಡಿಸಿಕೊಳ್ಳಬೇಕಾದ ಜರೂರು ಇದೆ. ಚರ್ಮೋದ್ಯಮದಲ್ಲಿ ನೂತನ ತಂತ್ರಜ್ಞಾನ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಚರ್ಮೋತ್ಪನ್ನಗಳನ್ನು ಮತ್ತು ಅವುಗಳ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ.

ಪರಿಶಿಷ್ಟ ಜಾತಿಯ ಚರ್ಮಕುಶಲ ಕರ್ಮಿಗಳ ಬದುಕಿಗೆ ಆಸರೆಯಾಗಲು ಡಾ|| ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ., (ಲಿಡ್ಕರ್) ಸಂಸ್ಥೆಯನ್ನು ಸಬಲಗೊಸುವುದು ಸರ್ಕಾರದ ಕರ್ತವ್ಯ. ಆ ಮೂಲಕ ಚರ್ಮ ಕುಶಲ ಕರ್ಮಿಗಳ ಬದುಕನ್ನು ಹಸನಾಗಿಸಲು ಕಟಿಬದ್ಧವಾಗಬೇಕಾಗಿದೆ.

ಡಾ|| ಬಾಬು ಜಗಜೀವನ್ ರಾಂ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಸಂಸ್ಥೆಯು ಸ್ಥಾಪನೆಯಾದಾಗಿನಿಂದಲೂ ಚರ್ಮ ಕುಶಲಕರ್ಮಿಗಳಿಗೆ ಸಮರ್ಪಕ ತಯಾರಿಕೆಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿದೆ. ಆದರೆ ಉದ್ದೇಶಿತ ಕಾರ್ಯ ಈಡೇರಲಿಲ್ಲ. ಹಲವು ಕುಶಲ ಕರ್ಮಿಗಳಿಗೆ ಹಾಗೂ ಸಮುದಾಯದ ಸಂಸ್ಥೆಗಳಿಗೆ ಉದ್ದೇಶಿತ ಕಾರ್ಯ ಚಟುವಟಿಕೆಗಳಿಗೆ ಪೂರಕವಾದ ತಯಾರಿಕಾ ಚಟುವಟಿಕೆ ಹಮ್ಮಿಕೊಳ್ಳಲಿಲ್ಲ. ಬದಲಾಗಿ ಕುಶಲ ಕರ್ಮಿಗಳೇ ಅಲ್ಲದ ಹಾಗೂ ಪರಿಶಿಷ್ಟ ಜಾತಿಗೆ ಸೇರಿಲ್ಲದ ಹೊರಗಿನ ವ್ಯಕ್ತಿಗಳಿಗೆ ತಯಾರಿಕಾ ಆದೇಶ ನೀಡಿ ನಿಜವಾದ ಕುಶಲ ಕರ್ಮಿಗಳಿಗೆ ಅನ್ಯಾಯ ವೆಸಗಲಾಗುತ್ತಿದೆ.

ಘನ ಸರ್ಕಾರ ಹಾಗೂ ಸಂಸ್ಥೆಗೆ ಹೊಸದಾಗಿ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ಶ್ರೀಮತಿ ಎಂ. ಎಸ್. ವಸುಂಧರಾರವರು ಸಂಸ್ಥೆಯ ಉತ್ಪನ್ನಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡಲು ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಲಿಡ್ಕರ್ ಉತ್ಪನ್ನಗಳತ್ತ ಗ್ರಾಹಕರನ್ನು ಸೆಳೆಯಲು ಗುಣಮಟ್ಟದ ಚರ್ಮೋತ್ಪನ್ನಗಳಿಗೆ ಆದ್ಯತೆ ನೀಡುತ್ತಿರುವುದಲ್ಲದೆ, ಗ್ರಾಹಕರನ್ನು ಆಕರ್ಷಿಸಲು ಖ್ಯಾತ ಚಲನ ಚಿತ್ರ ನಟ ಡಾಲಿ ಧನಂಜಯರವರನ್ನು ಸಂಸ್ಥೆಯ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಿದ್ದಾರೆ ಹಾಗೂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡು ಕುಶಲಕರ್ಮಿಗಳಲ್ಲಿ ಆಶಾಭಾವನೆ ಮೂಡಿಸಿದ್ದಾರೆ ಆದರೆ ಚರ್ಮಕುಶಲಕರ್ಮಿಗಳಿಂದ ಉತ್ಪನ್ನಗಳನ್ನು ಖರೀದಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಸಗಟು ಉತ್ಪನ್ನಗಳ ಬೇಡಿಕೆಯನ್ನು ಪೂರೈಸಲು ಚರ್ಮ ಕುಶಲ ಕರ್ಮಿಗಳಿಗೆ ಹಾಗೂ ಈ ಸಮುದಾಯದ ತಯಾರಿಕಾ ಘಟಕಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ.

ಮೈಸೂರು ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಕರ್ಷಕ ಮತ್ತು ಗುಣಮಟ್ಟದ ಚರ್ಮೋತ್ಪನ್ನಗಳ ಶೋರೂಂ ತೆರೆಯುವ ಮೂಲಕ ತಮಗಿರುವ ವಾಣಿಜ್ಯ ಜ್ಞಾನವನ್ನು ಪ್ರದರ್ಶಿಸಿದ್ದಾರೆ. ಚರ್ಮ ಕುಶಲ ಕರ್ಮಿಗಳ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸುವ ವ್ಯವಸ್ಥಾಪಕ ನಿರ್ದೇಶಕರು ಸರಿಯಾದ ಮಾರ್ಗದರ್ಶಿಯಾಗಿ ದುಡಿಯುತ್ತಾ ಸಂಸ್ಥೆಯ ಮತ್ತು ಕುಶಲ ಕರ್ಮಿಗಳ ಅಭಿವೃದ್ಧಿ ಬಗ್ಗೆ ಚಿಂತನೆಗಳನ್ನು ಹೊಂದಿರುವ ಶ್ರೀಮತಿ ಎಂ. ಎಸ್. ವಸುಂಧರಾದೇವಿರವರನ್ನು ಪ್ರಭಾರ ಬದಲಾಗಿ ಖಾಯಂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಕರ್ತವ್ಯ ನಿಯೋಜನೆ ಮಾಡಬೇಕೆಂದು ಹಾಗೂ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಆ ಮೂಲಕ ಚರ್ಮಕುಶಲಕರ್ಮಿಗಳಿಗೆ ಹಾಗೂ ಈ ಸಮುದಾಯದ ತಯಾರಿಕಾ ಘಟಕಗಳ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ.

ಬೇಡಿಕೆಗಳು :

1. ರಾಜ್ಯ ಸರ್ಕಾರ ಲಿಡ್ಕರ್ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು.

2. ರಾಜ್ಯ ಸರ್ಕಾರವು ಪೊಲೀಸ್ ಇಲಾಖೆ / ಅರಣ್ಯ ಇಲಾಖೆ / ಇತರೆ ಇಲಾಖೆಗಳ ಶೂ / ಇತರೆ ಚರ್ಮ ಉತ್ಪನ್ನಗಳನ್ನು ನಿಗಮದಿಂದ ಖರೀದಿ ಮಾಡಲು ಆದೇಶ ಮಾಡಬೇಕು.

3. ಸರ್ಕಾರದ ಸಮಾಜ ಕಲ್ಯಾಣ ಇಲಾಖೆ / ಹಿಂದುಳಿದ ವರ್ಗಗಳ / ಅಲ್ಪಸಂಖ್ಯಾತ ಮಕ್ಕಳ / ವಸತಿ ಶಾಲೆಗಳ ವಿದ್ಯಾರ್ಥಿಗಳ ಶೂ / ಸಾಕ್ಸ್ / ಬ್ಯಾಗ್ / ಇತರೆ ನಿಗಮದ ಉತ್ಪನ್ನಗಳನ್ನು ಖರೀದಿ ಮಾಡಲು ಆದೇಶ ಮಾಡಬೇಕು.

4. ಲಿಡ್ಕರ್ ನಿಗಮಕ್ಕೆ ಅಗತ್ಯವಾದ ಉತ್ಪನ್ನಗಳ ಖರೀದಿ ಆದೇಶವನ್ನು ಚರ್ಮಕುಶಲಕರ್ಮಿಗಳು ಹಾಗೂ ಪರಿಶಿಷ್ಟಜಾತಿ ಚರ್ಮೋತ್ಪನ್ನ ಘಟಕಗಳಿಂದ ಖರೀದಿಮಾಡಬೇಕು.

5. ಲಿಡ್ಕರ್ ನಿಗಮಕ್ಕೆ ಅನವಶ್ಯಕವಾಗಿ ನೇಮಕವಾಗಿರುವ ಫೇಸ್-1 ತಂಡವನ್ನು ರದ್ದು ಮಾಡಬೇಕು.

6. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾದ ಶ್ರೀಮತಿ ಎಂ.ಎಸ್. ವಸುಂಧರಾರವರನ್ನು ಪ್ರಭಾರ ಹುದ್ದೆಯಿಂದ ಖಾಯಂ ಆಗಿ ನಿಯೋಜನೆ ಮಾಡಬೇಕು ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ

ಎಡತೊರೆ ಎಂ. ನಿಂಗರಾಜ್ ರಾಜ್ಯಾಧ್ಯಕ್ಷರು ರಾಜ್ಯ ಆದಿಜಾಂಬವ ಸಂಘ(ರಿ) +91 82776 38205

ಎಸ್. ಡಿ. ಬಾಲರಾಜು ಅಧ್ಯಕ್ಷರು ಕರ್ನಾಟಕ ರಾಜ್ಯ ಕುಶಲಕರ್ಮಿಗಳ ಸಂಘ +91 99010 89333

ಹನುಮಂತರಾಯಪ್ಪ ಪ್ರಧಾನ ಕಾರ್ಯದರ್ಶಿ

ಮಂಜುನಾಥ್ ಜಂಟಿ ಕಾರ್ಯದರ್ಶಿ ಹಾಜರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.