
ಪರಮಪೂಜ್ಯರಾದ ಕನ್ನೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಪ್ರೇರಣೆಯಲ್ಲಿ ‘ಸಾವಯವ ಕೃಷಿ ಪರಿವಾರ’ ಮತ್ತು ‘ಸುಭಿಕ್ಷಾ ಆರ್ಗ್ಯಾನಿಕ್ ಫಾರ್ಮರ್ಸ್ ಮಲ್ಟಿಸ್ಟೇಟ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್’ ಸಂಸ್ಥೆಗಳು ಈ ಮಹಾಸಮಾವೇಶವನ್ನು ಸಂಘಟಿಸುತ್ತಿವೆ.
ಈ ಮಹಾಸಮಾವೇಶದಲ್ಲಿ ನಾಡಿನ ಎಲ್ಲಾ ಸಂಪ್ರದಾಯಗಳ ಪೂಜ್ಯರಾದ ಮಠಾಧೀಶರು, ಸಂತರು ಹಾಗೂ ಧರ್ಮದರ್ಶಿಗಳು ಭಾಗವಹಿಸಲಿದ್ದಾರೆ ಜೊತೆಗೆ ನಾಡಿನ ಖ್ಯಾತ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಕೃಷಿ – ತೋಟಗಾರಿಕೆ ಮತ್ತು ಪಶುವೈದ್ಯಕೀಯ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ರೈತರು ಪಾಲ್ಗೊಳ್ಳಲಿದ್ದಾರೆ.
ಮಹಾಸಮಾವೇಶವು ಸಾವಯವ ಕೃಷಿ, ಜೀವ ವೈವಿಧ್ಯ, ಗ್ರಾಮ ಜೀವನ ಸುಧಾರಣೆ, ಗೋ ಸಂರಕ್ಷಣೆ, ಪರಿಸರ ಸಂರಕ್ಷಣೆ, ಸಾವಯವ ಮಾರುಕಟ್ಟೆ, ಗ್ರಾಮೀಣ ಯುವ ಜನತೆಯಲ್ಲಿ ಕೃಷಿ ಮಹತ್ವದ ಅರಿವು, ಅವಿವಾಹಿತ ಕೃಷಿ ಕ್ಷೇತ್ರದ ಯುವಕರಿಗೆ ಕಂಕಣ ಭಾಗ್ಯ, ಚಿಕ್ಕ ಹಿಡುವಳಿಯಲ್ಲಿ ಚೊಕ್ಕ ಜೀವನ, ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿ, ನಿರ್ಣಯವನ್ನು ಪ್ರಸ್ತುತಪಡಿಸಿ ಸಾಕಾರದ ಕುರಿತು ಕ್ರಿಯಾ ಯೋಜನೆಯನ್ನು ವ್ಯಕ್ತಗೊಳಿಸಲಿದೆ.
ಸಮಾವೇಶ ಸ್ಥಳದ ಆಕರ್ಷಣೆಗಳು
1. ಒಂದುವರೆ ಎಕರೆಯಲ್ಲಿ 180 ಬೆಳೆಗಳ ಸಂಯೋಜನೆ 2. ಒಂದು ಎಕರೆಯಲ್ಲಿ ವರ್ಷಕ್ಕೆ ಲಕ್ಷ ಮೀರಿಸುವ ಆದಾಯದ ತಾಕು 3. ಭೂಮಿ ಸುಪೋಷಣೆಗೊಳಿಸುವ ಹಲವು ಸಾವಯವ ತಯಾರಿಕೆಗಳು 4. ಚಿಕ್ಕ ಜಾಗದಲ್ಲಿ ಸುಂದರ ಕೊಟ್ಟಿಗೆ 5. ವೈವಿಧ್ಯಮಯ ಮೇವಿನ ತಾಕು 6. ಭಾರತವನ್ನು ಅರಳಿಸುವ ಗುರುಕುಲ ಶಿಕ್ಷಣ 7. ಭಾರತದ ವೈಭವವನ್ನು ಸಾಕ್ಷೀಕರಿಸುವ ಶ್ರೀ ಸಿದ್ಧಗಿರಿ ಮ್ಯೂಸಿಯಂ 8. ಸಮಗ್ರ ಕೃಷಿಯ ಅಂಗಗಳ ಪರಿಚಯ 9. ಕುಟೀರ ಉದ್ಯೋಗಗಳು 10. ಗೋಶಾಲೆ ಮತ್ತು ವೈವಿಧ್ಯಮಯ ಗೋಉತ್ಪನ್ನಗಳು 11. ದೇಶಿ ಬೀಜ ವೈವಿಧ್ಯ 12. ಮಾದರಿ ಸಾವಯವ ಉತ್ಪನ್ನ ಮಾರಾಟ ಮಳಿಗೆ.
ಈ ಮಹಾ ಸಮಾವೇಷವನ್ನು ಸಾರ್ವಜನಿಕರು ಯಶಸ್ವುಗೊಳಿಸಬೇಕಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಸಂಘದ ವತಿಯಿಂದ ಕೋರಿದರು.
City Today News 9341997936
