ಡಿಸೆಂಬರ್ 29 ಕುವೆಂಪು ಹುಟ್ಟಿದ ದಿನವನ್ನು*ಕುವೆಂಪು ಧ್ಯಾನ* ಎಂದು ಆಚರಣೆ

ಡಿಸೆಂಬರ್ 29 ಕುವೆಂಪು ಹುಟ್ಟಿದ ಹಬ್ಬ. ಕೆಲವು ವರ್ಷಗಳಿಂದ ಈ ದಿನವನ್ನು ದಿನದಲ್ಲಿ
*ಕುವೆಂಪು ಧ್ಯಾನ* ಎಂದು ಆಚರಿಸುತಿದ್ದೇವೆ. ವಿಶ್ವಮಾನವ ಧರ್ಮವನ್ನು ರೂಪಿಸಿಕೊಟ್ಟ ಕುವೆಂಪು ಅವರ ವಿಚಾರಗಳನ್ನು ಮನೆ ಮನೆಗೂ ತಲುಪಿಸುವ  ಕೆಲಸ ಮಾಡುತಿದ್ದೇವೆ.
ಯುಗಾದಿ, ಸಂಕ್ರಾಂತಿ, ಗೌರಿ, ಮಾರ್ನವಮಿ ಇತ್ಯಾದಿ ಹಬ್ಬಗಳನ್ನು ಮಾಡುವಂತೆ ನಮ್ಮ ಮನೆಗಳಲ್ಲಿ ಕುವೆಂಪು ಹಬ್ಬವನ್ನು ಮಾಡಬೇಕು.

*ಕುವೆಂಪು ಧ್ಯಾನ* ಮಾಡುವ ಕ್ರಮ

೧. 29 ರಂದು ಮನೆ ಮಂದಿಯೆಲ್ಲ ಒಟ್ಟಿಗೆ ಕುಳಿತುಕೊಳ್ಳಬೇಕು.
೨. ಸಾಧ್ಯವಾದರೆ ಅಕ್ಕಪಕ್ಕದ ಮನೆಯವರನ್ನು, ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಬೇಕು.
೩. ಕುವೆಂಪು ಅವರ ಭಾವಚಿತ್ರ ಅಥವಾ ಯಾವುದಾದರೂ ಒಂದೋ ಎರಡೋ ಪುಸ್ತಕ, ಭಾರತ ಮಾತೆಯ ಫೋಟೋ, ಭೂಪಟ, ರಾಮಕೃಷ್ಣ ಪರಮಹಂಸ, ಶಾರದಾಮಾತೆ, ವಿವೇಕಾನಂದ, ಬುದ್ಧ, ಬಸವಣ್ಣ, ಅಂಬೇಡ್ಕರ್ ಹೀಗೆ ಯಾರಾದರೂ ಮಹಾಪುರುಷರ ಫೋಟೊ ಇಟ್ಟುಕೊಳ್ಳಬೇಕು.
೪. ಅವುಗಳನ್ನು ಹೂವಿನಿಂದ ಅಲಂಕರಿಸಿ, ಸಾಧ್ಯವಾದರೆ ಊದುಬತ್ತಿ ಹಚ್ಚಿ, ದೀಪ ಬೆಳಗಬೇಕು.
೫. ಕುವೆಂಪು ವಿಚಾರಗಳ ಬಗ್ಗೆ ಮಾತನಾಡಬೇಕು.
೬. ಅವರ ಕಥೆ ಕಾದಂಬರಿ, ಕಾವ್ಯ, ಮಹಾಕಾವ್ಯ, ನಾಟಕಗಳಿಂದ ಒಂದೆರಡು ಪುಟಗಳನ್ನು ಓದಿ ಇತರರಿಗೆ ಹೇಳಬೇಕು.
೭. ಮಕ್ಕಳಿಂದ ಕುವೆಂಪು ಪದ್ಯಗಳನ್ನು ಓದಿಸುವುದು, ಹಾಡಿಸುವುದನ್ನು ಮಾಡಬೇಕು.
೮. ಅಲ್ಲಿ ಸೇರಿದ ಮಕ್ಕಳಿಗೆ ಮತ್ತು ದೊಡ್ಡವರಿಗೆ ಸಾಧ್ಯವಾದರೆ ಸಿಹಿ ಹಂಚಬೇಕು.
ಹೆಚ್ಚು ಹಣ ಖರ್ಚು ಮಾಡದೆ ಈ ಹಬ್ಬ ಆಚರಿಸಿ, ಕುವೆಂಪು ಅವರ ವಿಚಾರಗಳನ್ನು ಎಲ್ಲರಿಗೂ ಮುಟ್ಟಿಸಬೇಕು.
೯. ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.

– *ಎಲ್ ಎನ್ ಮುಕುಂದರಾಜ್*

City Today News 9341997936

Leave a comment

This site uses Akismet to reduce spam. Learn how your comment data is processed.