ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್(ರಿ) ಬೆಂಗಳೂರು ಇವರ ಆಯೋಜನೆಯ ಪ್ರತಿಭೋತ್ಸವ “ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು” ಕಾರ್ಯಕ್ರಮ

ದಿನಾಂಕ; 17 ಡಿಸೇಂಬರ್
2023 ಭಾನುವಾರ
ಸ್ಥಳ; ನಯನ ಸಭಾಂಗಣ (ರವೀಂದ್ರ ಕಲಾಕ್ಷೇತ್ರ) ಬೆಂಗಳೂರುನಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು ಹಲವು ಊರುಗಳಿಂದ ಆಗಮಿಸಿದ ಪ್ರತಿಭಾವಂತರು ಚಿತ್ರೋದ್ಯಮದ ಗಣ್ಯರ ಎದಿರು ತಮ್ಮ ಪ್ರತಿಭೆ ಮೆರೆದರು, ಅದರಲ್ಲೂ ವಿಶೇಷವಾಗಿ ಶಿವ. ಗಣಪತಿ ದೇವರ ಸ್ತುತಿಯ ಸಮೂಹ ನೃತ್ಯ ಮತ್ತು ಸ್ತುತಿ ಆರ್ ನಾಡಿಗರ ಪ್ರತಿಭಾ ಪ್ರದರ್ಶನ ಸಭಿಕರ ಮನಸೂರೆಗೊಳಿಸಿದವರು.

ಕುಸುಮಾ ಎಲ್.
ಮಧುಶ್ರೀ,ನಾಗರಾಜ್,ನವೀನ್ , ಇವರುಗಳು ತಮ್ಮ ತಂಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ಉತ್ತಮವಾಗಿ ಪ್ರತಿಭೆ ಮೆರೆಯಲು ಒಬ್ಬರಿಗಿಂತ ಒಬ್ಬರು ಕಷ್ಟ ಪಡುತಿದ್ದಿದ್ದು ಕಾಣಿಸುತಿತ್ತು.

ಗಣ್ಯರಿಂದ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ಪಡೆಯಲು
ಯುವ ಪ್ರತಿಭೆಗಳು ಅತೀ ಉತ್ಸಾಹ ತೋರಿದರು. ಇದರ ಮಧ್ಯ ಎಸ್. ಭಾಸ್ಕರನ್ ನಿರ್ಮಾಣದ
ಹ್ಯಾಟ್ರಿಕ್ ಸೂರ್ಯ ನಿರ್ದೇಶನದ
ತುಂತುರು ಮಳೆ
(TUNTURU MALEY)
ಚಿತ್ರದ ಪೋಸ್ಟರ್ ಅನಾವರಣ ಗೊಳಿಸಿದರು ಎಲ್ಲರೂ ಚಲನಚಿತ್ರಕ್ಕೆ ಶುಭ ಕೋರಿದರು.

ನಟ/ ನಿರ್ಮಾಪಕ/ ನಿರ್ದೇಶಕ.
ಶ್ರೀ ಜಯಸಿಂಹ ಮುಸರಿ
ಅವರ ಪತ್ನಿ ಶ್ರೀಮತಿ
ಲಲಿತಾ ಜಯಸಿಂಹ.
ರೇಣುಕಾದೇವಿ (ಹಿರಿಯ ನಟ ರಾಜೇಶ್ ರವರ ಮಗಳು) ರು￰ದ್ರಾಣಿ (ಹಿರಿಯ ನಟಿ ಮಂಜುಳಾರವರ ತಂಗಿ)
ಗೋವಿಂದೆ ಗೌಡ (GG) ಕಾಮಿಡಿ (ಕಿಲಾಡಿಗಳು ಖ್ಯಾತಿ) ದಿವ್ಯಶ್ರೀ (GG)
ಸತ್ಯಜಿತ್ (ತಮಿಳು ನಟ) ವಂಟೂರು ಶ್ರೀನಿವಾಸ ರೆಡ್ಡಿ
ಎಸ್. ಭಾಸ್ಕರನ್
(ನಿರ್ಮಾಪಕರು ತುಂತುರು ಮಳೆ ಚಿತ್ರ) ಮೋನಿಷಾ ಗಂಗಾಧರನ್, ಚೇತನಾ ಮಂಗನಳ್ಳಿ (ಡಾನ್ಸ್ ಸ್ಕೂಲ್ ಮಾಲೀಕರು)
ಇನ್ನು ಹಲವರು ಭಾಗವಹಿಸಿದ್ದರು

ಹ್ಯಾಟ್ರಿಕ್ ಸೂರ್ಯ ಮತ್ತು ಶಿಲ್ಪಶ್ರೀ ಕಾರ್ಯಕ್ರಮ ತುಂಬಾ ಚಂದವಾಗಿ ನಿರೂಪಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.