“ಜಯನಗರದ ಶ್ರೀ ಗುರುರಾಯರಿಗೆ ಸೇವೆ ಸಲ್ಲಿಸಲು ಜೀವನವನ್ನೇ ಮುಡುಪಾಗಿಟ್ಟ ಅಪರೂಪದ ವ್ಯಕ್ತಿ”

“ಜಯನಗರದ ಶ್ರೀ ಗುರುರಾಯರಿಗೆ ಸೇವೆ ಸಲ್ಲಿಸಲು ಜೀವನವನ್ನೇ ಮುಡುಪಾಗಿಟ್ಟ ಅಪರೂಪದ ವ್ಯಕ್ತಿ”
ಬೆಂಗಳೂರಿನ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರುರಾಯರ ಸೇವೆಗೋಸ್ಕರ ಬ್ರಹ್ಮಚಾರಿಯಾಗಿ ಇದ್ದುಕೊಂಡೆ “ಪಾಚಕ” ವೃತ್ತಿಯಲ್ಲಿ 35 ವರ್ಷಗಳ ಕಾಲ ಶ್ರೀ ಹರಿವಾಯುಗುರುಗಳ “ನೈವೇದ್ಯ ಹಸ್ತೋದಕ”ಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತಿಗೂಳ್ಳುತ್ತಿರುವ ಶ್ರೀ ಪಂಚಮುಖಿ ಗುರುರಾಜ್ ಆಚಾರ್ಯರಿಗೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಾದ ಅನುಗ್ರಹ ಪೂರ್ವಕ ಕಳುಹಿಸಿದ ಶ್ರೀ ಗುರುರಾಯರ ಶೇಷ ವಸ್ತ್ರ, ಫಲ ಮಂತ್ರಾಕ್ಷತೆ, ಬೆಳ್ಳಿ ತುಳಸಿ ಮಾಲೆ, ಸುವರ್ಣಲೇಪಿತ ಪದಕ ಹಾಗೂ ಹೆಚ್ಚಿನ ಸಂಭಾವನೆಯನ್ನು ಅನುಗ್ರಹ ಮೂಲಕ ಕಳುಹಿಸಿದ ಶ್ರೀ ಗುರುರಾಯರ ಮಹಾಪ್ರಸಾದವನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರು ಜಯನಗರದ ಶ್ರೀ ಗುರುರಾಯರ ಮುಂಭಾಗದಲ್ಲಿ ಆಚಾರ್ಯರಿಗೆ ಶೇಷ ವಸ್ತ್ರವನ್ನು ಹೊದಿಸಿ, ಫಲ ಮಂತ್ರಾಕ್ಷತೆಯನ್ನು ಕೊಟ್ಟು, ಶ್ರೀ ಗುರುರಾಯರು ಇನ್ನೂ ಹೆಚ್ಚಿನ ಸೇವೆ ಮಾಡಲು ಶಕ್ತಿಯನ್ನು ಕೊಟ್ಟು ಅನುಗ್ರಹಿಸಲಿ ಎಂದು ತಿಳಿಸಿದರು. ರಾಯರ ಸೇವೆ ಮಾಡಿದ ನಾನೇ ಪುಣ್ಯಾತ್ಮ ಎಂಬ ಭಾವನೆಯೊಂದಿಗೆ ಪಂಚಮುಖಿ ಆಚಾರ್ಯರ ಆನಂದಭಾಷ್ಪವೂ ಕಣ್ಣೀರಿನಲ್ಲಿ ತುಂಬಿ ಹರಿಯಿತು. ಶ್ರೀ ಗುರು ರಾಯರಿಗೆ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಪರಮಪೂಜ್ಯ ಶ್ರೀಪಾದಂಗಳವರಿಗೆ ಶಿರಸಾಷ್ಟಾಂಗ ನಮಸ್ಕಾರವನ್ನು ಸಲ್ಲಿಸಿದರು. ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರಿಗೂ ಧನ್ಯವಾದಗಳನ್ನು ತಿಳಿಸಿದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. ಈ ಸಮಯದಲ್ಲಿ ಶ್ರೀಮಠದ ಸಿಬ್ಬಂದಿಗಳು, ಭಗವತ್ ಭಕ್ತರು ಕರತಾಡನವನ್ನು ಮಾಡುತ್ತಾ ರಾಯರ ಸೇವೆ ಮಾಡಿದ ಇವರೇ ಪುಣ್ಯಾತ್ಮರು ಎಂದು ಸಂತೋಷ ಅಭಿಮಾನ ವ್ಯಕ್ತಪಡಿಸಿದರು. ಹಾಗೂ ಇವರ ಸೇವೆಯನ್ನು ಮನಗೊಂಡ ಪರಮಪೂಜ್ಯ ಶ್ರೀಪಾದರು ಇವರ ಸೇವೆಯು ಸದಾ ಹೀಗೆ ಮುಂದುವರೆಯಲಿ ಎಂದು ಅನುಗ್ರಹಿಸಿ ಆಶೀರ್ವದಿಸಿದರು ಎಂದು ವ್ಯವಸ್ಥಾಪಕರು ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.