ವಾಗ್ದೇವಿ .ಕೆ ರವರ ವಿಶ್ವ ದಾಖಲೆ ಸಾಧನೆ “ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್”ಗೆ ಸೇರ್ಪಡೆ

ದಿನಾಂಕ :15-12-2023 ರಂದು ಶುಕ್ರವಾರ, ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ
ಆರ್ಟ್ ಕಲ್ಚರಲ್ ಎಜ್ಯುಕೇಷನಲ್ ಎನ್‌ಲೈಟ್ ಫೌಂಡೇಷನ್ (ರಿ) ಸಂಸ್ಥಾಪಕೀ ಮತ್ತು ಹೈರೆಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿರುವ
ಡಾ|| ಅಂಬಿಕಾ.ಸಿ ರವರು
ಆಯೋಜಿಸಿದ್ದ ರೂಬಿಕ್ ಕ್ಯೂಬ್ಸ್ ನ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಾಗ್ದೇವಿ ಕೆ. (16 ವರ್ಷ) ಇವರು 22 ವಿವಿಧ ಬಗೆಯ ಮತ್ತು ಆಕಾರಗಳ ರೂಬಿ ಕ್ಯೂಬ್ಸ್ ಗಳನ್ನು (RUBIKS) ಕೇವಲ 36.39 ನಿಮಿಷದಲ್ಲಿ ಬಗೆಹರಿಸಿ ಪ್ರಪ್ರಥಮ ಬಾರಿಗೆ ವಿಶ್ವ ದಾಖಲೆ ನಿರ್ಮಿಸುವ ಉದ್ದೇಶದಿಂದ “ ಹೈರೆಂಜ್ ಬುಕ್ ಆಫ್ ವಲ್ಡ್ ರೆಕಾಡ್ಸ್” ಗೆ ತಮ್ಮ ಸಾಧನೆ ಸೇರ್ಪಡೆಯಾಗಲು
ಡಾ|| ಅಂಬಿಕಾ.ಸಿ ಅವರ ಮಾರ್ಗದರ್ಶನ ಹಾಗೂ ಗಂಡಸಿ ಸದಾನಂದ ಸ್ವಾಮಿ (ನಟ ನಿರ್ಮಾಪಕ ನಿರ್ದೇಶಕ ಮತ್ತು ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾದ ಅಧ್ಯಕ್ಷರು) , ಮತ್ತು ಶ್ರೀಮತಿ ನಾಗಲಕ್ಷ್ಮಿ . ಎನ್ ( ಶ್ರೀ ಅಕಾಡೆಮಿ ಸಂಸ್ಥಾಪಕಿ),
ರವರುಗಳ ಸಹಕಾರದಿಂದ (ವಿಡಿಯೋ , ಫೋಟೋಗ್ರಾಫಿ ಮತ್ತು ಸಾಕ್ಷಿಯನೊಳಗೊಂಡ
ಅರ್ಜಿಯನ್ನು ಸಲ್ಲಿಸಲಾಗಿತ್ತು.
ನಂತರ ವಾಗ್ದೇವಿ ಕೆ ಯವರ ಅರ್ಜಿಯನ್ನು ದಿನಾಂಕ 19:12 :2023 “ಹೈರೇಂಜ್ ಬುಕ್ ಆಫ್ ರೆಕಾರ್ಡ್ಸ್” ರವರು ಅಂಗೀಕರಿಸಿ, ತಮ್ಮ ದಾಖಲಾತಿಗೆ ಸೇರ್ಪಡಿಸಿಕೊಂಡು, ಪ್ರಶಸ್ತಿ , ಪತ್ರ, ಪದಕ ಮತ್ತು ಪಾರಿತೋಷಕಗಳನ್ನು ಕಳುಹಿಸಿಕೊಟ್ಟು, ಈಕೆಯ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಈ ಸಂಭ್ರಮಾಚರಣೆಯನ್ನು ದಿನಾಂಕ: 27:12:2023 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ , ಮಾಧ್ಯಮ ಸುದ್ದಿಗೋಷ್ಠಿ ಮತ್ತು ಪತ್ರಿಕಾ ಪ್ರಕಟಣೆ ಮಾಡುವ ಮುಖಾಂತರ,
ವಾಗ್ದೇವಿ .ಕೆ ರವರ ವಿಶ್ವ ದಾಖಲೆ ಸಾಧನೆಗೆ ದೊರಕಿದ ಪ್ರಶಸ್ತಿ ಪತ್ರಗಳನ್ನು ಗಣ್ಯರ ಮೂಲಕ ಗಂಡಸಿ ಸದಾನಂದ ಸ್ವಾಮಿ ನೀಡಿ , ಗೌರವಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.