ಅಮೃತ ಮಹೋತ್ಸವ
ಭಾರತದಲ್ಲಿ ಯೂತ್ ಹಾಸ್ಟೆಲ್ ಸಂಸ್ಥೆಗೆ ಈಗ 75 ವರ್ಷಗಳು

ಯುವ ಉತ್ಸಾಹಿಗಳು ಚಾರಣ ಹಾಗೂ ಇನ್ನಿತರ ಸಾಹಸ ಕಾರ್ಯಗಳಲ್ಲಿ ತೊಡಗುವಂತಹ ಸಂದರ್ಭದಲ್ಲಿ, ಅವರು ಇತರ ಪ್ರದೇಶ ಮತ್ತು ಸ್ಥಳಗಳಿಗೆ ತೆರಳಿದಾಗ, ವಸತಿ ಮತ್ತಿತರ ಸೌಲಭ್ಯಗಳು ಸುಲಭವಾಗಿ ಸಿಗುವ ವ್ಯವಸ್ಥೆಯಾಗಬೇಕು, ಈ ನಾಡಿನ ತುಂಬಾ ಇರುವ ನೆಲ, ಜಲದಲ್ಲಿ ಸಿಗುವ ಪ್ರಕೃತಿದತ್ತ ಪ್ರದೇಶಗಳ ಪರಿಚಯದ ಜೊತೆಗೆ ಸಾಹಸ ಚಟುವಟಿಕೆಗಳಲ್ಲಿ ಯುವ ಸಮುದಾಯವು ಪಾಲ್ಗೊಳ್ಳಬೇಕು ಎನ್ನುವ ಮಹಾನ್ ಧೈಯದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ ಯೂಥ್ ಹಾಸ್ಟೆಲ್, ಯೂತ್ ಹಾಸ್ಟೆಲಿನ ಮೂಲ ಜರ್ಮನಿ,
ಜರ್ಮನಿಯ ಶಾಲಾ ಶಿಕ್ಷಕರಾದ ರಿಚರ್ಡ್ ಹೆರ್ಮನ್ ರವರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ 1909ರಲ್ಲಿ ಅಂತರರಾಷ್ಟ್ರೀಯ ಯೂಥ್ ಹಾಸ್ಟೆಲ್ ಸಂಸ್ಥೆಯು ಪ್ರಾರಂಭಗೊಂಡಿತು. ಇದಾದ 40 ವರ್ಷಗಳ ನಂತರ 1949ರಲ್ಲಿ ಈ ಸಂಸ್ಥೆಯು ಭಾರತದಲ್ಲಿ ಪ್ರಾರಂಭಗೊಳ್ಳುತ್ತದೆ.

ಭಾರತದಲ್ಲಿ ಸ್ವಾತಂತ್ರ್ಯಾ ನಂತರದ ದಿನಗಳು ಅವು. ವಾಸ್ಯತನದಿಂದ ಮುಕ್ತವಾಗಿದ್ದ ರಾಷ್ಟ್ರವು ಆನೇಕ ಬಗೆಯಲ್ಲಿ ಏಳಿಗೆ ಹಾಗೂ ಬೆಳವಣಂಗೆಯನ್ನು ಕಾಣಬೇಕಿತ್ತು. ಆಗ ಶಿಕ್ಷಣ, ಕ್ರೀಡೆ, ಸಾಹಸ, ಮನರಂಜನೆಗಳಿಗೆ ಯಾವ ಕೊರತೆಗಳಿಲ್ಲದಿದ್ದರೂ ಅದರಲ್ಲಿ ಭಾಗಿಯಾಗುವಂತಹ ಯುವ ಮನಸ್ಕರ ಕೊರತೆಯಿತ್ತು, ಇಂತಹ ಸಂದರ್ಭದಲ್ಲಿ ಮೈಸೂರಿನ ಕೆಲವು ಯುವ ಉತ್ಸಾಹಿಗಳು ಯೂತ್ ಹಾಸ್ಟೆಲ್ ಆಂದೋಲನದಲ್ಲಿ ಸಕ್ರಿಯರಾದದ್ದೊಂದು ಪ್ರಮುಖವಾದ ಘಟನೆ. ಮೈಸೂರು តួឯបង់ ps dd, new, 2.0, m, A. donator, L… ponosno, ಹೆಚ್.ಎಲ್. ಹರಿಯಪ್ಪ, ಹೆಚ್.ಆರ್. ಅಬ್ದುಲ್ ಮಜೀದ್, ಎಂ. ಯಮುನಾಚಾರ್ಯ, ಡಾ. ಬಿ. ಕುಪ್ಪುಸ್ವಾಮಿ, ಸೇಂಟ್ ಫಿಲೋಮಿನಾ ಕಾಲೇಜಿನ ಎಸ್.ವಿ. ಶ್ರೀನಿವಾಸರಾವ್, ರೆವರೆಂಡ್ ಫಾದರ್ ಪುರಿ ಹಾಗೂ ರಾಜ್ಯ ವಯಸ್ಕ ಶಿಕ್ಷಣ ಮಂಡಳಿಯ ಎನ್. ಭದ್ರಯ್ಯ ಇವರುಗಳೊಂದಿಗೆ ಮೈಸೂರಿನಲ್ಲಿ ಯೂತ್ ಹಾಸ್ಟೆಲ್ ಬೆಳವಣಿಗೆಯು ಆರಂಭವಾಗಲು ಪ್ರಮುಖವಾಗಿ ಕಾರಣರಾದವರು ಮೈಸೂರು ದಳವಾಯಿ ವಿದ್ಯಾಸಂಸ್ಥೆಯ ಸೈಟ್ ಟೀಚರ್ ಶ್ರೀ ಆರ್.ಜಿ. ಪಡಕಿಯವರು,
ಭಾರತದಲ್ಲೇ ಅಲ್ಲದೆ ಇಡೀ ದಕ್ಷಿಣಾ ವಿಷ್ಯಾದಲ್ಲಿಯೇ ಪ್ರಪ್ರಥಮವಾಗಿ ಯೂತ್ ಹಾಸ್ಟೆಲ್ ಪ್ರಾರಂಭವಾಗಿದ್ದು ಕರ್ನಾಟಕದ ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ಮೇಲ್ಕಂಡ ಅಧ್ಯಾಪಕ ವರ್ಗದವರು ಯೂತ್ ಹಾಸ್ಟೆಲ್ ಆಂದೋಲನದೊಂದಿಗೆ 14.07.1949 ರಂದು ಯೂತ್ ಹಾಸ್ಟೆಲಿನ ಚಟುವಟಿಕೆಗಳನ್ನು ಮೈಸೂರಿನ ಮಹಾರಾಜಾ ಕಾಲೇಜಿನ ಕೊಠಡಿಯೊಂದರಲ್ಲಿ ಆರಂಭಿಸುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಇತರ ಸಂಘಸಂಸ್ಥೆಗಳ ನೆರವು, ದೇಣಿಗೆಯೊಂದಿಗೆ ಸಂಸ್ಥೆಯು ನಿಧಾನವಾಗಿ ಬೆಳವಣಿಗೆ ಕಂಡಿತು. ಅಂದು ಸುಮಾರು 22 ವಿದ್ಯಾಸಂಸ್ಥೆಗಳು ಹಾಸ್ಟೆಲ್ ಸಂಯೋಜನೆಗೆ ಒಳಪಟ್ಟಿದ್ದವು. 1951ರಲ್ಲಿ ಈ ಯೂತ್ ಹಾಸ್ಟೆಲ್ ಸಂಸ್ಥೆಯು ಅಂತರರಾಷ್ಟ್ರೀಯ ಯೂತ್ ಹಾಸ್ಟೆಲ್‌ನ ಸದಸ್ಯತ್ವ ಪಡೆದ ಏಷ್ಯಾದ ಮೊದಲ ರಾಷ್ಟ್ರವಾಗಿ ಗುರುತಿಸಿಕೊಂಡಿತು. ಆರು ವರ್ಷಗಳ ಕಾಲ ಮೈಸೂರಿನಲ್ಲಿದ್ದ ಈ ರಾಷ್ಟ್ರೀಯ ಸಂಸ್ಥೆಯು 1955 ರಲ್ಲಿ ದೆಹಲಿಗೆ ವರ್ಗಾವಣೆಗೊಂಡಿತು. ಮೈಸೂರಿನ ಶ್ರೀ ಆರ್.ಜಿ. ಪಡಕಿಯವರೇ ಈ ರಾಷ್ಟ್ರೀಯ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಮುಂದುವರೆದು ಸತತ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದರು. ಸಂಸ್ಥೆಯನ್ನು ಸ್ಥಾಪಿಸಿದ 14 ಜನ ಮಹನೀಯರುಗಳಲ್ಲಿ ಈಗ ಯಾರೊಬ್ಬರೂ ಇರುವುದಿಲ್ಲ. ಶ್ರೀ ಪಡಕಿಯವರು ಕಡೆಯವರಾಗಿ 2011ರಲ್ಲಿ ನಿಧನ ಹೊಂದಿದರು.
1955ರಿಂದ 1985ರವರೆಗೆ ದೆಹಲಿಯಲ್ಲಿನ ರಾಷ್ಟ್ರೀಯ ಮಟ್ಟದ ಈ ಸಂಸ್ಥೆಯನ್ನು ನಡೆಸಲು ಸ್ವಂತ ಕಟ್ಟಡವಿಲ್ಲದೆ, ತೀವ್ರ ಹಣಕಾಸು ಮುಗ್ಗಟ್ಟನ್ನು ಎದುರಿಸಬೇಕಾದ ಸಂದರ್ಭವದು. ಆದರೆ ಆ ನಂತರದಲ್ಲಿನ ಸಂಸ್ಥೆಯ ಬೆಳವಣರಿಗೆಯು ಇಡೀ ರಾಷ್ಟ್ರದ ಜನತೆಯೇ ಮೆಚ್ಚುವಂತಹದ್ದಾಗಿತ್ತು. ರಾಷ್ಟ್ರೀಯ ಹಿಮಾಲಯ ಚಾರಣ ಕಾರ್ಯಕ್ರಮಗಳು ಆರಂಭಗೊಂಡದ್ದು, ಕೋಟಿ ಕೋಟ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಯೋಜನೆ ಹಾಗೂ ಕಾರ್ಯಕ್ರಮಗಳು, ಅಂತರ ರಾಜ್ಯ ಮಟ್ಟದ ಸೈಕಲ್ ಪ್ರವಾಸ ಕಾರ್ಯಕ್ರಮಗಳು ಈ ಸಂಸ್ಥೆಯಿಂದ ಪರಿಚಯಿಸಲ್ಪಟ್ಟಿತು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ದೆಹಲಿಯ ಚಾಣಕ್ಯಪುರಿ ಪ್ರದೇಶದಲ್ಲಿ ಭವ್ಯವಾಗಿ ರಾಷ್ಟ್ರೀಯ ಯೂಥ್ ಹಾಸ್ಟೆಲ್ ಸಂಸ್ಥೆಯ ಕಟ್ಟಡದ ಸ್ಥಾಪನೆ ಮತ್ತು ಇದರ ಜೊತೆಗೆ ತರಬೇತಿ ಕೇಂದ್ರ ಹಾಗೂ ರಾಷ್ಟ್ರೀಯ ಕಛೇರಿಯು ಸ್ಥಾಪನೆಗೊಂಡಿತು. ಈ ಮಹತ್ತರ ಕಾರ್ಯಗಳ ಹಿಂದೆ ಆಗಿನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶ್ರೀಮತಿ ಶಾಂತಿ ಕಬೀರ್, ಶ್ರೀ ರಾಮ್ ನಿವಾಸ್ ಮಿರ್ದಾ ಮತ್ತು ಶ್ರೀ ಧರ್ಮವೀರ ಇವರುಗಳೊಂದಿಗೆ ಅತ್ಯಂತ ಪ್ರಭಾವಕಾರಿ ಕೆಲಸಗಳೊಂದಿಗೆ ಶ್ರೀ ಪಡತಿಯವರು ಹೆಗಲು ಕೊಟ್ಟು ದುಡಿದಿದ್ದರು.
ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾವು ಒಂದು ಎನ್.ಜಿ.ಒ, ಸಂಸ್ಥೆ, ವಿಶ್ವದ ಸುಮಾರು ತೊಂಭತ್ತು ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತದಲ್ಲಿ ಪ್ರತಿವರ್ಷ ಐವತ್ತಕ್ಕಿಂತ ಹೆಚ್ಚು ವಿಶೇಷ ರಾಷ್ಟ್ರೀಯ ಚಾರಣಗಳು, ಸಾವಿರಾರು
ಸ್ಥಳೀಯ ಚಾರಣಗಳನ್ನು ಈ ಸಂಸ್ಥೆಯು ಏರ್ಪಡಿಸುತ್ತಿದೆ. ಭಾರತದಲ್ಲಿ ಒಂದು ಲಕ್ಷದ ಮೂವತ್ತು ಸಾವಿರಕ್ಕಿಂತ ಹೆಚ್ಚಿಗೆ ಅದೇವ ಸದಸ್ಯರಿದ್ದಾರೆ ಮತ್ತು ವಿಶ್ವಾದ್ಯಂತ ನಾಲ್ಕು ಲಕ್ಷದ ಐವತ್ತು ಸಾವಿರಕ್ಕಿಂತ ಹೆಚ್ಚಿನ ಆಜೀವ ಸದಸ್ಯರಿದ್ದಾರೆ. ನಮ್ಮ ರಾಷ್ಟ್ರದಲ್ಲಿ 23 ರಾಜ್ಯ ಶಾಖೆಗಳು ಹಾಗೂ 300 ಕ್ಕೂ ಹೆಚ್ಚು ಘಟಕಗಳಿದೆ.
ಕರ್ನಾಟಕದಲ್ಲಿ ರಾಜ್ಯ ಯೂತ್ ಹಾಸ್ಟೆಲಿನ ಮುಖ್ಯ ಶಾಖೆಯು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ಸಮುಚ್ಚಯದಲ್ಲಿದೆ. ಈ ರಾಜ್ಯ ಶಾಖೆಯ ಅಡಿಯಲ್ಲಿ 10ಕ್ಕೂ ಹೆಚ್ಚು ಯೂತ್ ಹಾಸ್ಟೆಲ್ ಘಟಕಗಳು ಕಾರ್ಯನಿರ್ವಹಿಸುತ್ತಿದೆ.
ಯೂತ್ ಹಾಸ್ಟೆಲಿನ ಮೂಲಕ ಹಮ್ಮಿಕೊಳ್ಳುವ ಚಾರಣ ಕಾರ್ಯಕ್ರಮಗಳ ಮೂಲಕ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಹ್ಯಾದ್ರಿ ಶ್ರೇಣಿ, ಹೆಸರಾಂತ ಪಶ್ಚಿಮ ಮತ್ತು ಪೂರ್ವ ಘಟ್ಟಗಳು, ಆರಾವಳಿ, ವಿಂಧ್ರಶ್ರೇಣಿ, ನದಿ-ಸಾಗರ ಬಯಲುಗಳು, ಹಿಮಾಲಯ ಹೀಗೆ ಎಲ್ಲ ಬಗೆಯ ಪರಿಸರದಲ್ಲಿ ಬಹಳ ಸುಲಭವಾಗಿ ಪಾಲ್ಗೊಳ್ಳುವ ಅವಕಾಶವನ್ನು ಯೂತ್ ಹಾಸ್ಟೆಲ್ ಒದಗಿಸುತ್ತದೆ, ಯೂತ್ ಹಾಸ್ಟೆಲ್ ಮೂಲಕ ಹಮ್ಮಿಕೊಳ್ಳುವ ಸಾಮಾಜಿಕ ಚಟುವಟಿಕೆ ಕಾರ್ಯಕ್ರಮಗಳೂ ಬಹಳ ಪ್ರಸಿದ್ದಿ ಪಡೆದಿದೆ. ಚಾರಣದ ಮೂಲಕ ಇಲ್ಲೆಲ್ಲಾ ಆಡ್ಡಾಡುವಾಗ ಸೂರ್ಯಾಸ್ತ, ಸೂರ್ಯೋದಯ, ಚಂದ್ರೋದಯ, ಜಲಪಾತಗಳು, ಗಿರಿ- ಶಿಖರಗಳು, ಹಿಮಾವೃತ ಪರ್ವತಗಳು, ನದಿಗಳು, ಕಡಲ ಕಿನಾರೆಗಳು, ನೀರಿನ ಅಲೆಗಳು, ಉದುರುವ ಎಲೆಗಳು, ಭಯ ಹುಟ್ಟಿಸುವ ಆರಣ್ಯಗಳು, ವನ್ಯ ಪಾಣಿಗಳು, ಚಿಟ್ಟೆಗಳು, ಪಕ್ಷಿಗಳು, ಸರೀಸೃಪಗಳು. ಇವೆಲ್ಲವುಗಳ ಜೊತೆಗೆ ಭೂರಮೆಯ ಸುಂದರತೆಯನ್ನು ಸ್ವಚ್ಛಂದತೆಯ ವಿಹಾರದೊಂದಿಗೆ ಆಸ್ವಾದಿಸುವ ಅವಕಾಶ ಪಡೆಯುತ್ತಾರೆ.
ಯೂತ್ ಹಾಸ್ಟೆಲಿನ ಸದಸ್ಯತ್ವದ ವಿವರ ಹೀಗಿದೆ:
ವರ್ಷಕ್ಕೆ: ಎರಡು ವರ್ಷಗಳಿಗೆ – ರೂ. 350/-:
18 ವರ್ಷಗಳು ಒಳಪಟ್ಟವರು ರೂ. 100/- ವರ್ಷಕ್ಕೆ
ಈ ಸಂಸ್ಥೆಯು ಯಾವುದೇ ಲಾಭ-ನಷ್ಟ ಇಲ್ಲದೇ ನಡೆಯುವ ಸಂಸ್ಥೆಯಾಗಿದೆ.
18 ವರ್ಷಗಳು ಮೇಲ್ಪಟ್ಟವರು ರೂ. 200/- ಆಜೀವ ಸದಸ್ಯತ್ವ – ರೂ. 3000/-
ಇದಲ್ಲದೆ ಸಾಮೂಹಿಕವಾಗಿ ಶಾಲಾ ಕಾಲೇಜುಗಳು ಇದರ ಸದಸ್ಯತ್ವವನ್ನು ಪಡೆಯಬಯದು.
City Today News 9341997936
