
ಕರ್ನಾಟಕ ರಾಜ್ಯ ಗಂಗಾಮತ, ಬೆಸ್ತ, ಮೊಗವೀರ, ಕೋಲಿ, ಕಬ್ಬಲಿಗ, ಅಂಬಿಗ ಸಮುದಾಯಕ್ಕೆ ಸೇರಿದ ಮಧ್ವರಾಜ್ ಮಧ್ವರಾಜ್ ರವರಿಗೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದವತಿಯಿಂದ ಭಾರತೀಯ ಜನತಾ ಪಾರ್ಟಿಗೆ ಮನವಿ ಸಲ್ಲಿಸುತ್ತಿದ್ದೇವೆ. ನಮ್ಮ ಮೀನುಗಾರ ಸಮುದಾಯಗಳಾದ, ಮೊಗವೀರ, ಕೋಲಿ, ಕಬ್ಬಲಿಗ, ಗಂಗಾಮತ, ಅಂಬಿಗ ಮುಂತಾದ 39 ಪರ್ಯಾಯ ಪದಗಳಿಂದ ಕರ್ನಾಟಕ ರಾಜ್ಯದಲ್ಲಿ ನಮ್ಮ ಜನಾಂಗವನ್ನು ಗುರುತ್ತಿಸುತ್ತಾರೆ. ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ನಮ್ಮ ಸಮಾಜ ಒಟ್ಟು ರಾಜ್ಯದಲ್ಲಿ 60 ಲಕ್ಷಕ್ಕಿಂತ ಅಧೀಕ ಜನಸಂಖ್ಯೆ ಹೊಂದಿರುತ್ತದೆ. ಈ ಸಮುದಾಯದಲ್ಲಿ ಗುರುತಿಸಿಕೊಂಡು ಮೀನುಗಾರರ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಸರ್ವೊತ್ತಮುಖ ಅಭಿವೃದ್ದಿ ಅತ್ಯವಶ್ಯವಾಗಿದೆ. ಮುಖ್ಯವಾಗಿ ಯುವ ಜನರನ್ನು ಸಂಘಟಿಸುವ ಯುವ ಪೀಳಿಗೆಯಲ್ಲಿ ನಾಯಕತ್ವ ರೂಪಿಸುವ ಪ್ರಮಾಣಿಕತೆ, ಪಾರದರ್ಶಕತೆ ಬದ್ಧತೆ ಪರಿಶ್ರಮ ಸಮಾರ್ಪಣಾ ಮನೋಭಾವದ ಚಿಂತನೆಯುಳ್ಳ ಕ್ರಿಯಾಶೀಲ ಸೃಜನಶೀಲ ಪ್ರಮೋದ್ ಮಧ್ವರಾಜ್ ರವರು ವಿಶೇಷವಾದ ವ್ಯಕ್ತಿಯಾಗಿರುತ್ತಾರೆ.
ಹಿಂದುಳಿದ ಜನಾಂಗದ ಹಾಗೂ ಮೀನುಗಾರರ ಶೈಕ್ಷಣಿಕ ಸಾಮಾಜಿಕ ಅರ್ಥಿಕ ಸಾಂಸ್ಕೃತಿಕ ರಾಜಕೀಯ ಪ್ರಜ್ಞೆಗಳ ಉನ್ನತಿಕರಣ ಸಬಲೀಕರಣ ಮತ್ತು ಅಭಿವೃದ್ದಿಗಾಗಿ ಪ್ರಮೋದ್ ಮಧ್ವರಾಜ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾರೆ. ಮೀನುಗಾರರ ಸಮಸ್ಯೆಗಳು ಹಿಂದುಳಿದ ವರ್ಗಗಳ ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುತ್ತಿರುವ ಪ್ರಮೋದ್ ಮಧ್ವರಾಜ್ ರಾಜಕೀಯ ರಂಗದ ಸಮಚಿತ್ತ ಭಾವದ ರಾಜಕಾರಣಿಯಾಗಿದ್ದಾರೆ.
ಪ್ರಮೋದ್ ಮಧ್ವರಾಜ್, ಓರ್ವ ಪ್ರಕಾಣಿಕ ಶುದ್ಧ ಹಸ್ತ ರಾಜಕಾರಣಿ, ರಾಷ್ಟ್ರದ ದಾರ್ಶನಿಕ ರಾಜಕಾರಣಿ, ಸಂತಸದೃಶ ಜನನಾಯಕ ನರೇಂದ್ರ ಮೋದಿರವರ ಅಭಿವೃದ್ಧಿ ಪರ ಚಿಂಚನೆ ರಾಜಕೀಯ ನಿಲುವು ಮತ್ತು ಘನ ನಾಯಕತ್ವಕ್ಕೆ ಪಾಲಿಸಿಕೊಂಡ ಪ್ರಮೋದ್‌ಮದ್ವರಾಜ್ ಶುದ್ದ ಹಸ್ತ, ಪ್ರಮಾಣಿಕ ರಾಜಕಾರಣಿಗಳ ಸಾಲಿನಲ್ಲಿ ಮೇಲ್ಪಂತಿಯಲ್ಲಿ ನಿಲ್ಲುತ್ತಾರೆ. ನಮ್ಮ ಸಮುದಾಯದ ರಾಜಕೀಯ ನೇತಾರರು ಹಾಗೂ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದಾರೆ. ರಾಜ್ಯದಲ್ಲಿ ನಾವು ನಮ್ಮ ಸಮುದಾಯದಿಂದ ಉಡುಪಿ, ಚಿಕ್ಕಮಗಳೂರು ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧಿಸುವಂತೆ ಕೇವಲ ಒಂದು ಸ್ಥಾನವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನೀಡುವಂತೆ ಪತ್ರಿಕಾ ಹೇಳಿಕೆಯಲ್ಲಿ ಸಂಬಂಧಪಟ್ಟ ಭಾ.ಜ.ಪ ಪ್ರಮುಖರ ಗಮನಕ್ಕೆ ತರಲು ಇಚ್ಚಿಸುತ್ತೇವೆ.
ಶ್ರೀ.ಪ್ರಮೋದ್ ಮಧ್ವರಾಜ್ ರವರು ಹಲವಾರು ಭಾಷೆ ಪರಿಣಿತರಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲವು ಸಾಧಿಸುವ ಸಂಪೂರ್ಣ ಅವಕಾಶ ಆ ಕ್ಷೇತ್ರದಲ್ಲಿ ಅವರಿಗಿದೆ. ರಾಜ್ಯದ ನಮ್ಮ ಸಮಾಜದ ಬಂಧುಗಳು ರಾಜ್ಯ ಸಂಘದ ಪ್ರಮುಖರಿಗೂ ಹಾಗೂ ಭಾ.ಜ.ಪ.ದ ರಾಜ್ಯ ನಾಯಕರಿಗೂ ಹಾಗೂ ರಾಷ್ಟ್ರ ನಾಯಕರ ಗಮನಕ್ಕೂ ಮನವಿ ನೀಡಿ ಹಕ್ಕೊತಾಯ ಮಾಡಿರುವುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ. ಹಾಗಾಗಿ ನಮ್ಮ ಸಮಾಜದ ಆಶಾಕಿರಣವಾದ ಪ್ರಮೋದ್ ಮಧ್ವರಾಜ್ ರವರಿಗೆ ರಾಜಕೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪಕ್ಷದವರು ಅರ್ಹತೆಯನ್ನು ಪರಿಗಣಿಸಿ ಪ್ರಮೋದ್ ಮದ್ವರಾಜ್ ರವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಥಿಸಲು ಅವಕಾಶ ಮಾಡಿಕೊಟ್ಟು ನಮ್ಮ ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ(ರಿ)ವತಿಯಿಂದ ಕೇಳಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಕರ್ನಾಟಕ రాజ్య ಉಸಸ್ಥಿತರಿದ್ದ ಗಂಗಾಮತಸ್ಥರ ಸಂಘದ (1) ರಾಜ್ಯಾಧ್ಯಕ್ಷರಾದ ಡಾ.ಬಿ.ಮೌಲಾಲಿ (2)ಉಪಾಧ್ಯಕ್ಷರಾದ ಮಹಾದೇವ ಖರ್ಜಿಗಿ, (3) ಉಪಾಧ್ಯಕ್ಷರಾದ ಮಣ್ಣೂರು ನಾಗರಾಜ, (4) ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮುರಳಿಧರ್.ಸಿ (5) ಬಿ.ಜೆ.ಪಿ ಹಿಂದುಳಿದ ವರ್ಗಗಳ ಮುಖಂಡರಾದ ಅವ್ವಣ್ಣ ಮ್ಯಾಕೇರಿ ರವರು ಉಪಸ್ಥಿತರಿದ್ದರು.
City Today News 9341997936
