ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮಶತಮಾನೋತ್ಸವ

ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮಶತಮಾನೋತ್ಸವವನ್ನು ಮಕರ ಸಂಕ್ರಾಂತಿ ದಿನದಂದು ದಿನಾಂಕ 15.01.2024ರ ಸೋಮವಾರ ಬೆಳಿಗ್ಗೆ 10:00ರಿಂದ ರಾತ್ರಿ 9:00 ಗಂಟೆಯವರೆಗೆ ಚೌಡಯ್ಯ ಸ್ಮಾರಕ ಭವನ, ಗಾಯತ್ರಿ ದೇವಿ ಪಾರ್ಕ್ ಬಡಾವಣೆ, ವೈಯಾಲಿಕಾವಲ್, ಮಲ್ಲೇಶ್ವರಂ, ಬೆಂಗಳೂರು- 560003, ಇಲ್ಲಿ ಆಚರಿಸುತ್ತಿದ್ದು, ಸಾರ್ವಜನಿಕರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ.

ಶ್ರೀ ವೆಂಕಟರಾಮಯ್ಯನವರ ಬಗ್ಗೆ ಪ್ರಕಟಣೆ / ಪ್ರಸಾರ ಮಾಡಲು ಅವರ ಕಿರು ವ್ಯಕ್ತಿ ಚಿತ್ರಣ / ಸಾಧನೆಗಳ ಮಾಹಿತಿ ಇಲ್ಲಿದೆ.

ವಿಶ್ವ ಪ್ರಸಿದ್ಧ ಸಂಗೀತಗಾರ: ಭಾರತೀಯ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ತನ್ನದೇ ಆದ ಮಹತ್ವ ಪಡೆದಿದೆ. ಈ ಸಂಗೀತ ಪರಂಪರೆಯಲ್ಲಿ ಚಿಂತಲಪಲ್ಲಿ ಮನೆತನವು ಪುರಾತನ ಮನೆತನಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಪಡೆದಿದೆ. ಈ ಮನೆತನವು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಅದ್ವಿತೀಯವಾದ ಪ್ರತಿಭಾವಂತ ಕಲಾರತ್ನಗಳನ್ನು ನೀಡಿದೆ. ಇಂತಹ ಕಲಾರತ್ನಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಲೆಯನ್ನು ಜಾಗಿತಿಕವಾಗಿ ಪಸರಿಸಿದ, ಹೆಸರಾಂತ ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ॥ ಚಿಂತಲಪಲ್ಲಿ ವೆಂಕಟರಾಮಯ್ಯರವರು ಒಂದು ಅನರ್ಘ್ಯ ರತ್ನವಾಗಿರುತ್ತಾರೆ.

ಜನನ: ಕ್ರಿ.ಶ.1922 ಜನವರಿ 30ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚಿಂತಲಪಲ್ಲಿ (ಹುಣಸೇನಹಳ್ಳಿ) ಗ್ರಾಮದಲ್ಲಿ ಖ್ಯಾತ ಸಂಗೀತ ವಿದ್ವಾಂಸರಾದ ದಿವಂಗತ ಶ್ರೀ ವೆಂಕಟಾಚಲಯ್ಯ ಮತ್ತು ಶ್ರೀಮತಿ ರಾಮಕ್ಕ ದಂಪತಿಗಳಿಗೆ ಜನಿಸಿದರು. ಇವರು ತಮ್ಮ ಸಂಗೀತ ಅಭ್ಯಾಸವನ್ನು ಅವರ ದೊಡ್ಡಪ್ಪನವರಾದ ಚಿಂತಲಪಲ್ಲಿ ಸಂಗೀತ ಪರಂಪರೆಯ ಕಳಸಪ್ರಾಯರಾದ ವಿದ್ವಾನ್ ದಿ|| ವೆಂಕಟರಾಯರು ಮತ್ತು ಅಣ್ಣನವರಾದ ಸಂಗೀತ ವಿದ್ವಾನ್ ದಿ|| ಚಿಂತಲಪಲ್ಲಿ ರಾಮಚಂದ್ರರಾಯರಲ್ಲಿ ಅಭ್ಯಾಸ ನಡೆಸಿದರು. ಶ್ರೀ ತ್ಯಾಗರಾಜರ ಶಿಷ್ಯಪರಂಪರೆ ಅನುಸ್ಫೂತವಾಗಿ ಕರ್ನಾಟಕದಲ್ಲಿ ಹರಿದುಬರುವಂತೆ ಮಾಡಿದ ಮತ್ತು ಆಸ್ಥಾನ ವಿದ್ವಾನ್, ಸಂಗೀತ ಸಾಮ್ರಾಟ್ ಹೀಗೆ 800 ವರ್ಷಗಳಿಂದಲೂ ಐತಿಹಾಸಿಕವಾಗಿ ಹೊಯ್ಸಳರ, ವಿಜಯನಗರ ಅರಸರ, ಮೈಸೂರು ಅರಸರ ನಿರಂತರ ಆಸ್ಥಾನಿಕರಾಗಿ ಬಂದ ಚಿಂತಲಪಲ್ಲಿ ಪರಂಪರೆ ಇವರಿಂದ ಪುನರುಜ್ಜಿವನಗೊಂಡು ತನ್ನದೇ ಆದ ವಿಶಿಷ್ಟ ಛಾಪನ್ನು ಸಂಗೀತ ಕ್ಷೇತ್ರದಲ್ಲಿ ಹೊಂದಿದೆ.

ಪಾಠ-ಪಠಣ-ವಿದ್ಯಾದಾನ:ಇವರು ತಮ್ಮ ಹುಟ್ಟೂರು ಹುಣಸೇನಹಳ್ಳಿ ಗ್ರಾಮದ ಹೆಸರನ್ನು ಸಂಗೀತ ಸಾಮ್ರಾಜ್ಯಕ್ಕೆ ಚಿರಸ್ಥಾಯಿಯಾಗಿಸಿದ ಖ್ಯಾತಿ ಈ ಜೋಡಿಯದ್ದು, ಶ್ರೀಯುತ ಚಿಂತಲಪಲ್ಲಿ ವೆಂಕಟರಾಮಯ್ಯರವರು ತಮ್ಮ ಶಿಷ್ಯರಿಗೆ ಅನೇಕ ಅಪರೂಪದ ಕೃತಿಗಳ ಪಾಠಾಂತರ, ಜೊತೆಗೆ ವಿಸ್ತಾರವಾದ ರಾಗಾಲಾಪನೆ, ನೆರೆವಲ್ ಸ್ವರ-ಪ್ರಸ್ತಾರಗಳನ್ನು ತಮ್ಮ ಸುಂದರವಾದ ಬರವಣಿಗೆಯ ಲಿಪಿಯೊಂದಿಗೆ ತರಬೇತಿ ನೀಡುತ್ತಿದ್ದರು. ಅವರು ಕಲಿಸಿದ ಅನೇಕ ಕೃತಿಗಳು ಇಂದಿಗೂ ಈ ಪರಂಪರೆಯ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.

ದೇಶ-ವಿದೇಶ :1956ರ ದಶಕದಲ್ಲಿ ಅಮೆರಿಕಾ, ಬ್ರಿಟನ್, ಜರ್ಮನಿ, ಆಸ್ಟ್ರಿಯಾ, ಫ್ರಾನ್ಸ್ ಮುಂತಾದ ಐರೋಪ್ಯ ರಾಷ್ಟ್ರಗಳಲ್ಲೂ ಮತ್ತು ಅರಬ್ ದೇಶಗಳಲ್ಲಿಯೂ ಅನೇಕ ಸಂಗೀತ ಕಾರ್ಯಕ್ರಮಗಳನ್ನು ಒಂದು ಚೂರೂ ಬಗ್ಗದೇ ವೇದಿಕೆಗೆ ಕಳೆಯಿರುವಂತೆ ಅವರು ಕೂರುತ್ತಿದ್ದರು. ನೇಪಾಳದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮಗಳಲ್ಲಿ ಇವರ ಗಾಯನ ಆಲಿಸಿದ ಅಂದಿನ ಮಹಾರಾಜ ಮಹೇಂದ್ರ ವಿಕ್ರಮ ಶಾ ದೇವ ರವರು ಸಂತೋಷಚಿತ್ತದಿಂದ ಇವರಿಗೆ ಅನೇಕ ಉಡುಗೊರೆಗಳನ್ನು ನೀಡಿದರು. ಈ ರೀತಿಯಾಗಿ ವಿದೇಶಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿ, ಅಲ್ಲಿನ ಸಂಗೀತ ರಸಿಕರ ಪ್ರೀತಿ-ಅಭಿಮಾನ-ಪ್ರೋತ್ಸಾಹ ಪಡೆದು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಚಾರಕ್ಕೆ ಮುಖ್ಯ ಕಾರಣರಾದರು.

ಸೇವಾಮನೋಭಾವ: 1971 ಡಿಸೆಂಬರ್ನಲ್ಲಿ ಶ್ರೀ ತ್ಯಾಗರಾಜ ಗಾನಸಭಾ ಸಂಸ್ಥಾಪಕರಲ್ಲೊಬ್ಬರಾಗಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಸದರಿ ಸಂಸ್ಥೆಯು ಇಂದಿಗೂ ಸಹ ಅವಿತರವಾಗಿ ನಡೆದುಕೊಂಡು ಬಂದಿರುತ್ತದೆ.

ಶಿಷ್ಯವೃಂದ : ಇವರು ಸಂಗೀತ ಲೋಕಕ್ಕೆ ಅದ್ವಿತೀಯ ಶಿಷ್ಯರನ್ನು ಕಾಣಿಕೆಯಾಗಿ ನೀಡಿರುತ್ತಾರೆ. ಅವರುಗಳಲ್ಲಿ ಸಂಗೀತ ವಿದ್ವಾನ್ ಜಿ.ಎ. ಹನುಮಂತಭಟ್ಟ, ಜಿ.ಎ. ಕುಮಾರಸ್ವಾಮಿ, ಜಿ.ಎ. ಸುಬ್ರಹ್ಮಣ್ಯಶಾಸ್ತ್ರಿ, ಟಿ.ಎಸ್. ಪದ್ಮಾ, ಚಂದ್ರಪ್ರಭಾ ಹಾಗೂ ವೇದವಲ್ಲಿ ಹಾಗೂ ಮಕ್ಕಳಾದ ಸಂಗೀತ ವಿದ್ವಾನ್ ಚಿಂತಲಪಲ್ಲಿ ವೆಂಕಟಾಚಲಪತಿ, ಚಿಂತಲಪಲ್ಲಿ ವಿ. ಶ್ರೀನಿವಾಸ ಮುಂತಾದ ಅಪಾರ ಶಿಷ್ಯಕೋಟಿಯನ್ನು ಸಂಗೀತ ಕ್ಷೇತ್ರಕ್ಕೆ ನೀಡಿರುತ್ತಾರೆ. ಜುಲೈ 1, 1976ರಂದು ಸಂಗೀತ ಲೋಕದಿಂದ ಈ ದಿಗ್ಗಜನ ಅಸ್ತಂಗತವಾಗಿರುತ್ತದೆ.

ಹೆಸರು: ಸಂಗೀತ ವಿದ್ಯಾಸಾಗರ ಸಂಗೀತ ವಿದ್ವಾನ್ ದಿ| ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರು
ಜನನ : 1922 ಜನವರಿ 30ರಂದು ಕೋಲಾರ ಜಿಲ್ಲೆಯ ಗೌರಿಬಿದನೂರು
ಮರಣ: 1976 ಜುಲೈ 1 ರಂದು ಸಂಗೀತ ಲೋಕದಿಂದ ಇವರು ಅಸ್ತಂಗತವಾದರು.

ಜನ್ಮ ಶತಮಾನೋತ್ಸವ ಸಮಾರಂಭ ಆಚರಣೆ 2024

ಸಂಗೀತ ವಿದ್ವಾನ್ ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯನವರ ಜನ್ಮ ಶತಮಾನೋತ್ಸವ ಸಮಾರಂಭ – 2024 ಮೊ: 94488 49421

ದಿನಾಂಕ: 15 ಜನವರಿ, 2024 ಸೋಮವಾರ
ಸಮಯ: ಬೆ. 10.00 ರಿಂದ ಸಂ. 9.00 ರವರೆಗೆ
ಸ್ಥಳ: ಚೌಡಯ್ಯ ಸ್ಮಾರಕ ಭವನ, 16ನೇ ಅಡ್ಡರಸ್ತೆ, ವೈಯಾಲಿಕಾವಲ್, ಮಲ್ಲೇಶ್ವರಂ, ಬೆಂಗಳೂರು
ಮೊ: 94488 49421
……………………………………………………..
ಸಂಗೀತ ವಿದ್ವಾನ್ ಚಿಂತಲಪಲ್ಲಿ ಶ್ರೀ ವೆಂಕಟರಾಮಯ್ಯ
ಕುಟುಂಬದ ಮನೆ ವಿಳಾಸ: ನಂ. 68 140 (5), 10ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು – 560 003
ಮೊ: 94488 49421

City Today News 9341997936

Leave a comment

This site uses Akismet to reduce spam. Learn how your comment data is processed.