40,000 ಅಥಿತಿ ಶಿಕ್ಷಕರುಗಳ ಸೇವಾ ಭದ್ರತೆ ಒದಗಿಸಲು ಸಾಧ್ಯವಿಲ್ಲವೆಂದ ಮುಖ್ಯ ಮಂತ್ರಿಗಳ ನೇರ ಅಮಾನೀಯ ವರ್ತನೆ.

ಅತ್ಯಂತ ಹಿಂದುಳಿದ ಮತ್ತು ಎಸ್.ಸಿ. ಎಸ್.ಟಿ ಸಮುದಾಯಗಳಿಗೆ ನೀಡಿರುವ ಮೀಸಲಾತಿ ಸೌಲಭ್ಯಗಳು ಕಳೆದ 20 ವರ್ಷಗಳಿಂದಲೂ ಸರಿಯಾಗಿ ಅನುಷ್ಠಾನವಾಗಿರುವುದಿಲ್ಲ. ಏಕೆಂದರೆ ಸರ್ಕಾರ ನೇಮಕಾತಿಯನ್ನೇ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಖಾಯಂ ನೇಮಕಾತಿ ಮಾಡಿಕೊಂಡಾಗ ಮಾತ್ರ ರೋಷರ್ ಪದ್ಧತಿ ಮತ್ತು ಮೀಸಾಲಾತಿ ಪಾಲನೆಯಾಗುತ್ತದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ 80,000 ಹುದ್ದೆಗಳು ಖಾಲಿ ಬಿದ್ದಿರುತ್ತದೆ. ಶಿಕ್ಷಣ ಇಲಾಖೆಯಲ್ಲಿಯೇ ಶೇಕಡ 75ರಷ್ಟು ಹುದ್ದೆಗಳನ್ನು ತುಂಬಿರುವುದಿಲ್ಲ. ಇದರಿಂದಾಗಿ ತಳ ಸಮುದಾಯಗಳಲ್ಲಿ ವಿದ್ಯಾರ್ಹತೆ ಪಡೆದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ` ಹೊಟ್ಟೆಪಾಡಿಗಾಗಿ ಅಂಗಡಿಗಳಲ್ಲಿ ಸಣ್ಣಪುಟ್ಟ ಕಛೇರಿಗಳಲ್ಲಿ, ಹೊಟೆಲ್‌ಗಳಲ್ಲಿ ಮತ್ತು ಇನ್ನೂ ಕೆಲವರು ಗಾರೆ ಕೆಲಸ ಮತ್ತು ಬಣ್ಣ ಹೊಡೆಯುವ ಕೆಲಸ ಮಾಡಿ ಜೀವಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ 40,000 ಅಥಿತಿ ಶಿಕ್ಷಕರುಗಳು ಕಡಿಮೆ ಸಂಬಳದಲ್ಲಿ ದುಡಿಯುತ್ತಿದ್ದಾರೆ. ಅವರ ಸೇವೆಯನ್ನು ಖಾಯಂ ಮಾಡಿಲ್ಲ. ಅವರುಗಳಿಗೆ ಸೇವಾ ಭದ್ರತೆ ಒದಗಿಸಲು ಸಾಧ್ಯವಿಲ್ಲವೆಂದು ಮುಖ್ಯ ಮಂತ್ರಿಗಳು ನೇರವಾಗಿ ಹೇಳಿರುತ್ತಾರೆ. ಇದು ಅಮಾನೀಯ ವರ್ತನೆ. ಮುಖ್ಯ ಮಂತ್ರಿಗಳ ತಮ್ಮ ಹೇಳಿಯನ್ನು ಪರಿಷ್ಕರಿಸಬೇಕು.

ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ರಾಜಕೀಯ ಪಕ್ಷಗಳು

ಕುಲಕಸಬು ಆಧಾರದಲ್ಲಿ ಜೀವಿಸುತ್ತಿರುವ 2ಎ ಪ್ರಕವರ್ಗಕ್ಕೆ ಸೇರಿದ 102 ಜಾತಿಗಳೂ ಮತ್ತು ಪ್ರವರ್ಗ1ಕ್ಕೆ ಸೇರಿದ 95 ಜಾತಿಗಳಿಗೆ ಸರ್ಕಾರ ನಿಗಮ ಮತ್ತು ಮಂಡಳಿಗಳನ್ನು ಸ್ಥಾಪಸಿಲಾಗುವುದೆಂದು ಆಸೆ ಹುಟ್ಟಿಸಿ ಸಮುದಾಯಗಳನ್ನು ಒಡೆಯುತ್ತಿದ್ದಾರೆ. ಇದು ಖಂಡನೀಯ ಕ್ರಮವಾಗಿರುತ್ತದೆ ಈ ರೀತಿಯ ಒಡೆದು ಆಳುವ ನೀತಿಯನ್ನು ಕೈಬಿಟ್ಟು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಕನಿಷ್ಠ 10.000 ಕೋಟಿ ಅನುದಾನವನ್ನು ನೀಡುವುದರ ಮೂಲಕ ಅವರ ಅಭಿವೃದ್ಧಿಗೆ ಸಹಾಯ ಮಾಡಬೇಕು.

ಸಂವಿಧಾನ ಕಲ್ಪಿಸಿರುವ ಅನುಚ್ಚೇದ 15 ಕಲಂ 4 ಮತ್ತು 17 ಕಲಂ 4ನ್ನು ಸರ್ಕಾರ ಉಲ್ಲಂಘಿಸುತ್ತಿದೆ. ಅದಕ್ಕಾಗಿ ನಾವು ದಿನಾಂಕ: 13ನೇ ಜನವರಿ 2024ರಂದು ಶನಿವಾರ 1130 ಗಂಟೆಗೆ ಶಾಸಕರ ಭವನ (2) ಸಭಾಂಗಣದಲ್ಲಿ ರಾಜ್ಯ ಮಟ್ಟದ ದಂಡುಮೇಜಿನ ಪರಷಿತ್ತನ್ನು ನಡೆಸುತ್ತಿದ್ದೇವೆ ಎಂದು ಒಕ್ಕೂಟದ ವತಿಯಿಂದ ತಿಳಿಸಲಾಯಿತು.

ಕೆ.ಸಿ.ಪುಟ್ಟಿಸಿದ್ದಶೆಟ್ಟಿ ಕರ್ನಾಟಕ ವಿಧಾನ ಪರಿಷತ್‌ ಮಾಜಿ ಸದಸ್ಯರು ಮತ್ತು ರಾಜ್ಯಾಧ್ಯಕ್ಷರು,ರವಿನಾಯ್ಡು, ರಾಜ್ಯ ಉಪಾಧ್ಯಕ್ಷರು, ಎಂ.ವಿ. ಶ್ರೀನಿವಾಸನ್ ರಾಜ್ಯ ಸಂಚಾಲಕರು ಮತ್ತು ಒಕ್ಕೂಟದ ಮುಖಂಡರುಗಳು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ತಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.