ಚಿತ್ರದುರ್ಗ ತಾಲ್ಲೂಕಿನ ಹೆಗ್ಗೆರೆಯ ರತ್ಮಮ್ಮ ಮತ್ತು ಮಂಜುನಾಥ ಸ್ವಾಮಿ ಅವರ ಪುತ್ರಿ ರಾಗಿಣಿ. ಎಂ.ಅವರಿಗೆ ಡಾಕ್ಟರೇಟ್‌ ಪದವಿ.

ಹೆಗ್ಗೆರೆಯ ರಾಗಿಣಿ ಎಂ. ಅವರಿಗೆ ಡಾಕ್ಟರೇಟ್‌ ಪದವಿ.

ಚಿತ್ರದುರ್ಗ ತಾಲ್ಲೂಕಿನ ಹೆಗ್ಗೆರೆಯ ರತ್ಮಮ್ಮ ಮತ್ತು ಮಂಜುನಾಥ ಸ್ವಾಮಿ ಅವರ ಪುತ್ರಿ ರಾಗಿಣಿ ಎಂ. ಅವರು “ಕೃಷಿ ವಲಯದಲ್ಲಿ ಮಹಿಳಾ ಕಾರ್ಮಿಕರ ಪಾತ್ರ ಚಿತ್ರದುರ್ಗ ಜಿಲ್ಲೆಯನ್ನು ಅನುಲಕ್ಷಿಸಿ” ಎಂಬ ವಿಷಯ ಕುರಿತು ಸಲ್ಲಿಸಿದ ಪಿಎಚ್.ಡಿ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಜನವರಿ ೧೦ ರಂದು‌ ನಡೆದ ೩೨ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಹರಿಹರದ ಎಸ್.ಜೆ.ವಿ.ಪಿ ಕಾಲೇಜಿನ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಪರಮೇಶ್ವರನಾಯ್ಕ ಅವರು ರಾಗಿಣಿ ಎಂ. ಅವರ ಪಿಎಚ್.ಡಿ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದಾರೆ. ಹೆಗ್ಗೆರೆ ಗ್ರಾಮಕ್ಕೆ ಮೊದಲ ಮಹಿಳಾ ಡಾಕ್ಟರೇಟ್ ಪದವಿದರೆಯಾಗಿರುವುದು ರಾಗಿಣಿ ಎಂ.ಅವರ ವಿಶೇಷವಾಗಿದೆ.

ಕುಟುಂಬದ ಹಿನ್ನೆಲೆಯುಳ್ಳ ರಾಗಿಣಿ ಎಂ. ಅವರ ಈ ಸಾಧನೆಗೆ ಮಾರ್ಗದರ್ಶಕರಾದ ಡಾ.ಪರಮೇಶ್ವರನಾಯ್ಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ದಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು ಅಭಿನಂದಿಸಿದ್ದಾರೆ.
ರಾಗಿಣಿ ಅವರ ತಂದೆ, ತಾಯಿ, ಸಹೋದರ ಸಹೋದರಿಯರು,ಕುಟುಂಬದವರು ಹಾಗೂ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ.

ಸಿಟಿ ಟುಡೇ ನ್ಯೂಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

City Today News 9341997936

Leave a comment

This site uses Akismet to reduce spam. Learn how your comment data is processed.