” ಶ್ರೀ ರಾಮೋತ್ಸವ “ಪುಷ್ಪವೃಷ್ಟಿ” ಭಕ್ತರಿಂದ “ದೀಪೋತ್ಸವದ” ಸಂಭ್ರಮ ರಾಯರ ಮಠದಲ್ಲಿ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದಹಿರಿಯ ವ್ಯವಸ್ಥಾಪಕ ಆರ್, ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮತ್ತು ಧರ್ಮಾಧಿಕಾರಿಗಳಾದ ಜಿ, ಕೆ ಆಚಾರ್ಯರ ಹಾಗೂ ಅರ್ಚಕರ ವೃಂದದಿಂದ, ವೇದ ಘೋಷ, ದೇವತಾ ಪ್ರಾರ್ಥನೆ, ಶ್ರೀ ರಾಮ ದೇವರ ವಿಗ್ರಹಕ್ಕೆ ಮತ್ತು ಭಾವಚಿತ್ರಕ್ಕೆ “ಪುಷ್ಪವೃಷ್ಟಿ” “ದೀಪಗಳ”ಪ್ರಜ್ವಲನೆ ವಿಶೇಷವಾಗಿ ಹಲವಾರು ಭಜನಾ ಮಂಡಳಿಗಳಿಂದ ಶ್ರೀಹರಿ ಭಜನೆ ವಿದ್ವಾಂಸರಿಂದ ಪ್ರವಚನ ಮತ್ತು ಉತ್ಸವಗಳು ನೆರವೇರಿತು ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು, ಈ ಸಂದರ್ಭದಲ್ಲಿ ವಿಶೇಷವಾಗಿ ಭಕ್ತಾದಿಗಳಿಗೆ ಆಕರ್ಷಣೆಯಾಗಿದ್ದು ಅಂಬಾರಿಯಲ್ಲಿ ರಾಮದೇವರ ವಿಗ್ರಹ, ಹಾಗೂ ಸ್ವರ್ಣ ಸಿಂಹಾಸನದಲ್ಲಿಯು ವಿಗ್ರಹ ಇರಿಸಲಾಗಿತ್ತು ಮತ್ತು ಅಯೋಧ್ಯೆಯಲ್ಲಿ”ಪ್ರತಿಷ್ಠಾಪನೆ” ಗೊಂಡ ಶ್ರೀ ಬಾಲ ರಾಮನ ಕಂಗೊಳಿಸುವ”ಭಾವಚಿತ್ರ” ಶ್ರೀಮಠದ ಪ್ರಕಾರ ಮತ್ತು ಹೊರ ಭಾಗದಲ್ಲಿ ವಿದ್ಯುತ್ ದೀಪಗಳಿಂದ ಹಾಗೂ ಬಾಳೆ ಕಂಬ ಮಾವಿನ ಸೊಪ್ಪಿನ ಹಸಿರು ತೋರಣಗಳೊಂದಿಗೆ ಅಲಂಕರಿ ಸಲಾಗಿತ್ತು ಹಾಗೂ ವಿಶೇಷವಾಗಿ ಶ್ರೀಸೀತಾರಾಮಲಕ್ಷ್ಮಣ ಸಹಿತ ಹನುಮಂತ ದೇವರ ವಿಗ್ರಹಕ್ಕೆ ಶ್ರೀಬಾಲರಾಮನ ಭಾವಚಿತ್ರಕ್ಕೆ “ಪುಷ್ಪವೃಷ್ಟಿ”ಯೊಂದಿಗೆ ಮಹಾ ಮಂಗಳಾರತಿಯು ನೆರವೇರಿತು, ಈ ಸಂದರ್ಭದಲ್ಲಿ ಭಕ್ತರು ಸಹ “ಪುಷ್ಪವೃಷ್ಟಿ” ಯನ್ನು ಶ್ರೀ ರಾಮ ದೇವರ ಭಾವಚಿತ್ರಕ್ಕೆ ಭಕ್ತಿಯಿಂದ ನೆರೆವೇರಿಸಿದರು, ಸಾವಿರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ “ಲೋಕಕಲ್ಯಾಣ” ಕ್ಕಾಗಿ ವಿಶೇಷ ಧ್ಯಾನ, ಜಪ, ಪ್ರಾರ್ಥನೆ, ಭಜನೆ, ಸಲ್ಲಿಸಿದರು, ಶ್ರೀ ರಾಮೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರಿಗೆ ಪೊಂಗಲ್, ಪುಳಿಯೋಗರೆ, ಮಜ್ಜಿಗೆ, ಪಾನಕ, ಕೋಸಂಬರಿ, ಇತ್ಯಾದಿ ಪ್ರಸಾದದ ವ್ಯವಸ್ಥೆಯನ್ನು ಶ್ರೀ ಮಠದಿಂದ ಮಾಡಲಾಗಿತ್ತು ಭಕ್ತರು ಶ್ರೀರಾಮೋತ್ಸವವನ್ನು ಸಂಭ್ರಮ ಸಡಗರ ಉಲ್ಲಾಸ ಸಂತೋಷದಿಂದ ಶ್ರೀ ರಾಮನಲ್ಲಿ ಭಕ್ತಪರವಶರಾಗಿ ಹಬ್ಬದಂತೆ ಆಚರಿಸಿ ಪ್ರಸಾದ ಸ್ವೀಕರಿಸಿ ಶ್ರೀ ರಾಮದೇವರ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.

City Today News 9341997936

Leave a comment

This site uses Akismet to reduce spam. Learn how your comment data is processed.