
24ನೇ ವರ್ಷದ ವಾರ್ಷಿಕೋತ್ಸವ ಹಾಗೂ ಅಪ್ಪು ನಮನದ ಪ್ರಯುಕ್ತ ದಿನಾಂಕ: 12.02.2024ನೇ ಸೋಮವಾರ ಸಂಜೆ 4.00 ಗಂಟೆಗೆ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರ್ ನಲ್ಲಿ ಕನ್ನಡದ ಹೆಸರಾಂತ ನಟ ಕರ್ನಾಟಕ ರತ್ನ ಡಾ|| ಪುನೀತ್ ರಾಜ್ ಕುಮಾರ್‌ರವರ ‘ಅಪ್ಪು ನಮನ’ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಗೀತೆಗೆ ಒಂದು ಸಾವಿರ (1000) ವಾದ್ಯಗೋಷ್ಠಿ ಗಾಯಕ, ಗಾಯಕಿಯರು ಕೂಡಿ ಧ್ವನಿಗೂಡಿಸಿ ಪುನೀತ್ ರಾಜ್ ಕುಮಾರ್‌ರವರಿಗೆ ವಿಶೇಷ ನಮನ ಸಲ್ಲಿಸುತ್ತಿದ್ದೇವೆ.

ಈ ಸುಸಂದರ್ಭದಲ್ಲಿ ತಾವುಗಳೂ ಭಾಗವಹಿಸಿ ಮತ್ತು ನೀವೂ ಕೂಡ ಬೊಂಬೆ ಹೇಳುತೈತೆ ಗೀತೆಯನ್ನು ಹಾಡುವುದರ ಮೂಲಕ ಹೆಚ್ಚಿನ ಸಹಕಾರ ನೀಡಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸವಿನಯ ಪ್ರಾರ್ಥನೆ ಮಾಡುತ್ತೇನೆ ಎಂದು ಡಾ. ಆರ್. ಶಂಕರ್-ರಾಜ್ಯಾಧ್ಯಕ್ಷರು ಹಾಗೂ ಪಿ. ಅರುಣ್ ಪ್ರಧಾನ ಕಾರ್ಯದರ್ಶಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936
