
ಭಾರತೀಯ ಜನತಾ ಪಾರ್ಟಿಯ ಹಿರಿಯ ಗಮನಕ್ಕೆ ತಮ್ಮ ಮೂಲಕ ಮನವಿ ಮಾಡಿಕೊಳ್ಳುತ್ತಿರುವುದೇನೆಂದರೆ ಸಾಮಾಜಿಕ ನ್ಯಾಯಕ್ಕೆ, ನ್ಯಾಯ ಒದಗಿಸುವ ಕೆಲಸವನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ನರೇಂದ್ರ ಮೋದಿಯವರು ಹಿಂದುಳಿದ ಸಮಾಜವಾದ ತೇಲಿ (ಗಾಣಿಗ) ಸಮಾಜಕ್ಕೆ ಸೇರಿದವರಾಗಿದ್ದು, ದೇಶದ ಅತ್ಯುನ್ನತ ಹುದ್ದೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೋದಿಯವರ ಜಾತಿಯನ್ನು ಅವಹೇಳನ ಮಾಡಿ ಸುಳ್ಳು ಹೇಳಿ ಮತದಾರರ ದಾರಿ ತಪ್ಪಿಸುತ್ತಿರುವ ಕಾರ್ಯವನ್ನು ಇಡೀ ಹಿಂದುಳಿದ ವರ್ಗಗಳ ಸಮಾಜ ಖಂಡಿಸುತ್ತದೆ. ಅಹಿಂದ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಈಗ ಬರೀ ಅ-ಅಲ್ಪಸಂಖ್ಯಾತರ ಪರವಾದ ಪಕ್ಷವಾಗಿದ್ದು, ಹಿಂದುಳಿದ ಮತ್ತು ದಲಿತರನ್ನು ತುಳಿಯುವ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು.

ಕರ್ನಾಟಕ ರಾಜ್ಯದಲ್ಲಿ ಅತೀ ಹಿಂದುಳಿದ ಮತ್ತು ವರ್ಗದ ಮತದಾರರ ಸಂಖ್ಯೆ ಶೇ. 56ಕ್ಕೂ ಹೆಚ್ಚಿದೆ. ಆದರೆ ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಪ್ರವರ್ಗ-1ರ ಪ್ರತಿನಿಧಿ ಇದ್ದು, ಪ್ರವರ್ಗ-2ಎ ಅಡಿಯಲ್ಲಿ ಸುಮಾರು 103 ಸಣ್ಣ-ಪುಟ್ಟ ಜಾತಿಗಳು ಇದ್ದು, ಇವುಗಳಲ್ಲಿ ಬಹುತೇಕ ಜಾತಿಗಳಿಗೆ ರಾಜಕೀಯ ಪ್ರಾತಿನಿಧ್ಯವಾಗಲಿ, ಸಾಂವಿಧಾನಿಕ ಅಧಿಕಾರವಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವಾಗಲಿ ಸಿಕ್ಕೇ ಇಲ್ಲ. ಈ ವರ್ಗಗಳು ಬರೀ ಮತದಾನ ಮಾಡುವ ಹಕ್ಕನ್ನು ಮಾತ್ರ ಪಡೆದುಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಾಂವಿಧಾನಾತ್ಮಕ ಸ್ಥಾನಮಾನ ಪಡೆಯುವ ಅವಕಾಶದಿಂದ ವಂಚಿತವಾಗಿದೆ. ಇವು ಬಹುಪಾಲು ಕಾಯಕ ಸಮಾಜಗಳಿಗೆ ಸೇರಿದ್ದು, ಸಾವಿರಾರು ವರ್ಷಗಳಿಂದ ತಮ್ಮ ಕುಲಕಸುಬನ್ನು ನಂಬಿ ಬದುಕನ್ನು ನಡೆಸುತ್ತಿದ್ದು, ಮೇಲ್ವರ್ಗದ ಮತ್ತು ಬಲಾಡ್ಯ ವರ್ಗದ ಸೇವೆಗಳನ್ನು ಮಾಡುತ್ತಾ ರಾಜಕೀಯ ಅವಕಾಶದಿಂದ ವಂಚಿತರಾಗಿದ್ದಾರೆ.
ಆದ್ದರಿಂದ ಈ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ ನಾಲ್ಕು ಕ್ಷೇತ್ರಗಳಲ್ಲಾದರೂ 2ಎ ಸಣ್ಣ-ಪುಟ್ಟ ಜಾತಿಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಈ ಮೂಲಕ ನಾವು ಒತ್ತಾಯ ಮಾಡುತ್ತಿದ್ದೇವೆ. ಹಣವಂತ ಬಲಿಷ್ಠರ ಮಧ್ಯೆ ಗುಣವಂತ ಬಡವರು ಸಹ ಈ ಪ್ರವರ್ಗದಲ್ಲಿ ವಿದ್ಯಾವಂತ ಪದವೀಧರರು ಇದ್ದು, ಬೆಂಗಳೂರು ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸಬೇಕೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಶ್ರೀ ನಂಜುಂಡ ಪ್ರಸಾದ್‌ರವರು ಆಸಕ್ತಿ ಹೊಂದಿದ್ದು, ಸದರಿಯವರು 2ಎ ವಿಶ್ವಕರ್ಮ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಸದರಿಯವರಿಗೂ ಭಾರತೀಯ ಜನತಾ ಪಾರ್ಟಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುವ ಮೂಲಕ ಸಾಮಾಜಿಕ ನ್ಯಾಯವನ್ನು ನೀಡಬೇಕೆಂದು ಈ ಮೂಲಕ ಒತ್ತಾಯ ಮಾಡುತ್ತಿದ್ದೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ನೆ.ಲ. ನರೇಂದ್ರ ಬಾಬು ಅಧ್ಯಕ್ಷರು ಮತ್ತು ಮಾಜಿ ಶಾಸಕರು ತಿಳಿಸಿದರು.
City Today News 9341997936
