
ಪರಭಾಷೆ ಸ್ವಲ್ಪ ಹೆಚ್ಚು ಕಂಡುಬರುವ
ಜ್ಯೋತಿ ನಿವಾಸ್ ಕಾಲೇಜು ರಸ್ತೆ ಕೋರಮಂಗಲದಲ್ಲಿ ಕನ್ನಡ ಕುಣಿತ ಎಂಬ ಅದ್ದೂರಿ ಕನ್ನಡ ರಾಜ್ಯೋತ್ಸವದ ಆಚರಣೆ ಬಗ್ಗೆ..
ಕನ್ನಡದ ಆಚರಣೆ ಕೇವಲ ನವಂಬರ್ಗಷ್ಟೇ ಸೀಮಿತವಾಗದೆ ವರ್ಷದ 365 ದಿನವೂ ನಾವು ಕನ್ನಡವನ್ನು ಸಂಭ್ರಮಿಸಬೇಕು..
ಕನ್ನಡ ರಾಜ್ಯೋತ್ಸವ ಎಂದರೆ ಸಹಜವಾಗಿ ಕನ್ನಡಿಗರಿರುವ ಜಾಗದಲ್ಲಿ ಹೆಚ್ಚು ಆಚರಣೆ ಆಗುತ್ತದೆ… ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ ಅವರ ನೇತೃತ್ವದ ನಮ್ಮ ಯುವ ಕರ್ನಾಟಕ ವೇದಿಕೆ ತಂಡವು ಸ್ವಲ್ಪ ವಿಭಿನ್ನವಾಗಿ ಆಲೋಚಿಸಿ ಅನ್ಯಭಾಷಿಕರು ಹೆಚ್ಚು ನೆಲೆಸಿರುವ ಹಾಗೂ ಸ್ವಲ್ಪ ಹೆಚ್ಚು ಹಿಂದಿ ಆಂಗ್ಲ ಬಳಕೆ ಆಗುತ್ತಿರುವ ಜಾಗವನ್ನು ಗುರುತಿಸಿ ಕನ್ನಡದ ಹಬ್ಬ ಆಚರಣೆ ಮಾಡಲು ಯೋಚಿಸಿದೆವು…
ಬೆಳಗಾವಿಯಲ್ಲಿ ಕನ್ನಡ ಹಾಡುಗಳ ಡಿಜೆಗೆ ಸಾವಿರಾರು ಕನ್ನಡಿಗರು ಕನ್ನಡ ಬಾವುಟ ಹಿಡಿದು ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸುತ್ತಾರೆ..
ಇದು ನೋಡಲು ಅದ್ಭುತ..
ಅಂತಹದ್ದೇ ಕನ್ನಡ ಕಾರ್ಯಕ್ರಮವನ್ನು ಬೆಂಗಳೂರು ಭಾಗದಲ್ಲಿ ಮಾಡಲು ನಿರ್ಧರಿಸಿ ಕಳೆದ 2 ಬಾರಿ ಬ್ರಿಗೇಡ್ ರಸ್ತೆಯಲ್ಲಿ ಕನ್ನಡ ಹಾಡುಗಳ ಡೀಜೆ ಕಾರ್ಯಕ್ರಮ ಮಾಡಿದ್ದು
ಸಾವಿರಾರು ಕನ್ನಡಿಗರು ಕನ್ನಡ ಬಾವುಟ ಹಿಡಿದು ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದರು..
ಹಿರಿಯ ಹೋರಾಟಗಾರರನ್ನು,
ಸಿನಿಮಾ ತಾರೆಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಿದ್ದೆವು
ಈ ಕಾರ್ಯಕ್ರಮ ದೊಡ್ಡ ಯಶಸ್ಸು ಆಗಿತ್ತು..
ಈ ಬಾರಿ ಅದೇ ತರಹದ ಕನ್ನಡ ಕುಣಿತ ಎಂಬ ನಮ್ಮ ಕನ್ನಡ ಕಾರ್ಯಕ್ರಮವನ್ನು ಈ ಬಾರಿ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜ್ ರಸ್ತೆಯಲ್ಲಿ ಇದೇ ಫೆಬ್ರವರಿ 24 ಶನಿವಾರ ಸಂಜೆ 6 ಗಂಟೆಯಿಂದ ಆಚರಿಸುತ್ತಿದ್ದೇವೆ..
ಈ ಕಾರ್ಯಕ್ರಮದಲ್ಲಿ ಈ ಬಾರಿಯ ವಿಶೇಷ
ಜಾನಪದ ಹಾಡುಗಳು
ಕರ್ನಾಟಕದ ಸಂಸ್ಕೃತಿ ಬಿಂಬಿಸುವ ನೃತ್ಯಗಳು
ಹೆಸರಾಂತ ಕನ್ನಡದ ರ್ಯಾಪರ್ಗಳಿಂದ ಕನ್ನಡ ರ್ಯಾಪ್ ಹಾಡುಗಳು
ಹಾಗೂ ಕನ್ನಡ ಡಿಜೆ ಹಾಡುಗಳಿಗೆ ಸಾವಿರಾರು ಕನ್ನಡಿಗರಿಂದ ಕನ್ನಡ ಬಾವುಟ ಹಿಡಿದು ಕುಣಿದು ಕುಪ್ಪಳಿಸುತ್ತಾ ಕನ್ನಡವನ್ನು ಸಂಭ್ರಮಿಸುವ ಹಬ್ಬವಾಗಿರುತ್ತದೆ..
ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾದ ರಾಮಲಿಂಗ ರೆಡ್ಡಿ ಅವರು ಹಾಗೂ ಸ್ಥಳೀಯ ಮುಖಂಡರು ಆಗಮಿಸಲಿದ್ದಾರೆ.
ಸ್ಯಾಂಡಲ್ವುಡ್ನ ಖ್ಯಾತ ನಟರಾದ
ನಟ ಶ್ರೀಮುರುಳಿಯವರು,
ಹಾಗೂ ನಟ ಶ್ರೀ ಡಾಲಿ ಧನಂಜಯ ರವರು ಗಣ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ..
ಡಿಜೆ ಹಾಡುಗಳ ನೃತ್ಯ ಪ್ರಾರಂಭ
ಹಾಗೆ
ಸರಿಗಮಪ ಖ್ಯಾತಿಯ ಚೆನ್ನಪ್ಪ ಅವರಿಂದ ಚಲನಚಿತ್ರ ಗೀತೆಗಳ ಗಾಯನ..
ಖ್ಯಾತ ರ್ಯಾಪ್ ಹಾಡುಗಾರರಾದ ಬಿಗ್ ಬಾಸ್ ಖ್ಯಾತಿಯ ರಾಕೇಶ್ ಅಡಿಗ, ಚಿರಾಯು, ಮಾರ್ಟಿನ್ ಯೋ ತಂಡದಿಂದ ಕನ್ನಡದ ಖ್ಯಾತ ರ್ಯಾಪ್ ಗೀತೆಗಳು..
ಹುಲಿ ನೃತ್ಯ,ಜಾನಪದ ನೃತ್ಯ, ಪೂಜಾ ಕುಣಿತವು ವೇದಿಕೆಯಲ್ಲಿ ಪ್ರದರ್ಶನ ವಾಗುವುದು ..
ಮಿಮಿಕ್ರಿ ಗೋಪಿ ಅವರಿಂದ ಸುಂದರ ಮಿಮಿಕ್ರಿ ಕಾರ್ಯಕ್ರಮ..
ನಿರ್ಮಲ ಹಾಗೂ ರಾಜೇಶ್ ತಂಡದಿಂದ ಪ್ರಸಿದ್ಧ ಜಾನಪದ ಗೀತೆಗಳ ಕಾರ್ಯಕ್ರಮ..
ಈ ಎಲ್ಲಾ ಕಾರ್ಯಕ್ರಮಗಳು ಅರ್ಧಗಂಟೆಗೊಮ್ಮೆ ವೇದಿಕೆಯಲ್ಲಿ ಪ್ರದರ್ಶನವಾಗಲಿದ್ದು
ನಂತರ ಸತತವಾಗಿ ಕನ್ನಡದ ಡಿಜೆ ಹಾಡುಗಳಿಗೆ ಕಾರ್ಯಕ್ರಮಕ್ಕೆ ಆಗಮಿಸಿರುವ ಸಾರ್ವಜನಿಕರಿಂದ ನೃತ್ಯವಿರುತ್ತದೆ..
ಹೆಸರಾಂತ ಹಿರಿಯ ಕನ್ನಡ ಹೋರಾಟಗಾರರು,
ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಾಧಕರಿಗೆ ಸನ್ಮಾನ ಇರಲಿದೆ..
ಅನ್ಯ ಭಾಷಾ ಮಯವಾಗಿರುವ ಜಾಗದಲ್ಲಿ ವಿಭಿನ್ನವಾದ ಕನ್ನಡದ
ಆಚರಣೆ ಮುಖಾಂತರ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿರುತ್ತದೆ..
ಹೇಗೆ ಹಂಪಿ ಉತ್ಸವ, ಮೈಸೂರು ಯುವ ದಸರಾ,
ಕಿತ್ತೂರು ಉತ್ಸವ
ಮಡಿಕೇರಿ ದಸರಾ
ಹೀಗೆ ಆಯಾಯ ಭಾಗದಲ್ಲಿ ಒಂದೊಂದು ಕಾರ್ಯಕ್ರಮದ ಹೆಸರು ಪ್ರಚಲಿತವೊ
ಹಾಗೆ ಮುಂದೆ ಇದು
ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಅಂದಾಗ ಕನ್ನಡ ಕುಣಿತ ಕಾರ್ಯಕ್ರಮ ಎಂಬುದು ಎಲ್ಲಾ ಕನ್ನಡಿಗರು ಒಟ್ಟಾಗಿ ಒಂದೆಡೆ ಸೇರಿ ಕುಣಿದು ಕುಪ್ಪಳಿಸಿ ಕನ್ನಡದ ಹಬ್ಬ ಆಚರಿಸುವ ದೊಡ್ಡ ಉತ್ಸವ ಆಗಬೇಕು ಅನ್ನೋದು ನಮ್ಮ ತಂಡದ ಆಶಯ..
ಈ ಕಾರ್ಯಕ್ರಮದ ಬಗ್ಗೆ ನಾಡಿನ ಜನರಿಗೆ ತಮ್ಮ ವಾಹಿನಿ ಮೂಲಕ ಪ್ರಸಾರ ಮಾಡಿ ಮಾಹಿತಿ ನೀಡಿ ಈ ಕನ್ನಡದ ಕೆಲಸಕ್ಕೆ ಸಹಕಾರ ನೀಡಬೇಕೆಂದು ವಿನಂತಿ..
ಈ ಕಾರ್ಯಕ್ರಮಕ್ಕೆ
ಈಗಾಗಲೇ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಗೂ ಆಹ್ವಾನ ನೀಡಲಾಗಿದ್ದು ಅವರು ಬರುವ ಸಾಧ್ಯತೆ ಇದೆ..
ಸಮಸ್ತ ಕನ್ನಡಿಗರಿಗೂ ಈ ಸುಂದರ “ಕನ್ನಡ ಕುಣಿತ” ಕಾರ್ಯಕ್ರಮಕ್ಕೆ ಸ್ವಾಗತ.. ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ರೂಪೇಶ್ ರಾಜಣ್ಣ,ಅಧ್ಯಕ್ಷರು
ಯುವ ಕರ್ನಾಟಕ ವೇದಿಕೆಯ ವತಿಯಿಂದ ತಿಳಿಸಿದರು.
City Today News 9341997936
