ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವ (ಕೆ.ಬಿ.ಜೆ.ಎನ್.ಎಲ್) ಹಸನಾಪೂರ ಕಾರ್ಯಪಾಲಕ ಇಂಜಿನಿಯರ್ ಹೊಲಗಾಲುವ ವಿಭಾಗ-2, ಮತ್ತು ಕೃಷ್ಣಾ-ಕಾಡಾ ಭೀಮನರಾಯನಗುಡಿ ಅಧೀನದಲ್ಲಿ ಬರುವ ವಿಭಾಗ ಮತ್ತು ಉಪ ವಿಭಾಗ ಕಾರ್ಯಾಲಯ ಹಾಗೂ ಉಪ ವಿಭಾಗ ಕಛೇರಿ ಬಾತಾಂಬ್ರ ಬೀದರ್ ಜಿಲ್ಲೆಯ ಹುದ್ದೆ ಸಮೇತ ಸ್ಥಳಾಂತರದ ಆದೇಶವನ್ನು ರದ್ದುಪಡಿಸಿ ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ಅಗ್ರಹ.

(ಕೆ.ಬಿ.ಜೆ.ಎನ್.ಎಲ್) . ಕೃಷ್ಣಾ-ಕಾಡಾದ ಹಸನಾಪುರ ವಿಭಾಗ ಮತ್ತು ಉಪ ವಿಭಾಗದ ಕಛೇರಿಗಳನ್ನು ಕಿತ್ತೂರು ಕರ್ನಾಟಕಕ್ಕೆ ಸ್ಥಳಾಂತರಗೊಳಿಸುವ ಹೈದ್ರಾಬಾದ್ ಕರ್ನಾಟಕ ವಿರೋಧಿ ನಿತಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಹಾಗೂ ಈ ಕಛೇರಿ ಸ್ಥಳಾಂತರದಿಂದ ಲಕ್ಷಾಂತರ ಜನ ರೈತರಿಗೆ ತೊಂದರೆ ಉಂಟು ಆಗುತ್ತದೆ ಮತ್ತು 150ಕ್ಕೂ ಹೆಚ್ಚು ಹೈದ್ರಾಬಾದ್ ಕರ್ನಾಟಕದ ಸರ್ಕಾರಿ ನೌಕರರಿಗೆ ಅನ್ಯಾಯವಾಗುವುದು ವಿಷಾದನೀಯವಾಗಿದೆ.

ಹೈದ್ರಾಬಾದ್ ಕರ್ನಾಟಕವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿರುವುದರಿಂದ ಈ ಹಿಂದೆ 2013 ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ 371(ಜೆ) ಕಲಂನ್ನು ಜಾರಿಗೆ ತಂದು ಈ ಭಾಗದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಿರುವುದು ಸ್ವಾಗತಾರ್ಹವಾಗಿದೆ. (ಕೆ.ಬಿ.ಜೆ.ಎನ್.ಎಲ್) ಹಸನಾಪೂರ ಕಾರ್ಯಪಾಲಕ ಇಂಜಿನಿಯರ್ ಹೊಲಗಾಲುವ ವಿಭಾಗ-2, ಕಛೇರಿಗಳನ್ನು ಈ ಭಾಗದಿಂದ ಸ್ಥಳಾಂತರ ಮಾಡುವುದರಿಂದ 150ಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಕಳೆದುಕೊಳ್ಳುತ್ತವೆ ಮತ್ತು ಇಲ್ಲಿಯ ಯುವಕರಿಗೆ ಮತ್ತು ಲಕ್ಷಾಂತರ ರೈತರಿಗೆ ಮಾಡುವ ಬಹುದೊಡ್ಡ ಮೋಸವಾಗಿದೆ. ಈಗಾಗಲೇ ಈ ಭಾಗದ ರೈತರು ಕೆಲವೊಮ್ಮ ಅತೀವೃಷ್ಟಿಯಿಂದ ಕೆಲವೊಮ್ಮ ಅನಾವೃಷ್ಟಿಯಿಂದ ಕಂಗಾಲಾಗಿ ನೇಣಿಗೆ ಶರಣಾಗಿರುವ ಹಲವಾರು ಪ್ರಕರಣಗಳು ಸರ್ಕಾರದ ಗಮನದಲ್ಲಿದ್ದು, ಆದರೂ ಕೂಡ ಕೆಲವೊಂದು ಪಟ್ಟಭದ್ರ ಹಿತಾಶಕ್ತಿಗಳ ಕುತಂತ್ರದಿಂದ ನಮ್ಮ ಭಾಗದಲ್ಲಿರುವ ಕಛೇರಿಗಳನ್ನು ಕಿತ್ತೂರು ಕರ್ನಾಟಕಕ್ಕೆ ಸ್ಥಳಾಂತರ ಮಾಡಲು ಸರ್ಕಾರ ಆದೇಶ ಹೊರಡಿಸಿರುವುದು ನೋವಿನ ಸಂಗತಿಯಾಗಿದೆ ಹಾಗೂ ಇದರಿಂದಾಗಿ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗದೇ ಮತ್ತು ಈ ಭಾಗದ ಸರ್ಕಾರಿ ನೌಕರರಿಗೆ 371(ಜೆ) ಕಲಂ ಅಡಿ ಮುಂಬಡ್ತಿ ಸಿಗದೆ ಎಲ್ಲಾ ರಂಗದಲ್ಲೂ ಈ ಭಾಗಕ್ಕೆ ಅನ್ಯಾಯವಾಗುವುದು ವಾಸ್ತವವಾಗಿದೆ.

ಅದಕ್ಕಾಗಿ ನಾವುಗಳು ದಿನಾಂಕ: 21-02-2024 ರಂಂದು ಪ್ರೀಡಂಪಾರ್ಕ ಬೆಂಗಳೂರು ಇಲ್ಲಿ ಹೈದ್ರಾಬಾದ್ ಕರ್ನಾಟಕ ವಿರೋಧಿ ನೀತಿಯನ್ನು ಖಂಡಿಸಿ ಉಗ್ರವಾದ ಪ್ರತಿಭಟನೆ ಮಾಡುತ್ತಿದ್ದು, ಹೈದ್ರಾಬಾದ್ ಕರ್ನಾಟಕದ ಒಳತಿಗಾಗಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಗಂಭೀರವಾಗಿ ಇದನ್ನು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಹಾಗೂ ಸದನದಲ್ಲಿ ಚರ್ಚಿಸಿ ಕಛೇರಿ ಸ್ಥಳಾಂತರದ ವಿಷಯವನ್ನು ಇಲ್ಲಿಗೆ ಕೈಬಿಟ್ಟು ಹೈದ್ರಾಬಾದ ಕರ್ನಾಟಕದ ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿಯನ್ನು ಮಾಡುತ್ತೇವೆ. ಹಾಗೂ ಹೈದ್ರಾಬಾದ್ ಕರ್ನಾಟಕದ ಕಛೇರಿಯನ್ನು ಬೇರೆ ವಿಭಾಗಕ್ಕೆ ಸ್ಥಳಾಂತರ ಮಾಡಲು ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿತ್ತು. ಆದರೆ ಸಚಿವ ಸಂಪುಟದಲ್ಲಿ ಯಾವುದೇ ಚರ್ಚ ಮಾಡದೆ ಈ ರೀತಿಯ ಹೈದ್ರಾಬಾದ ಕರ್ನಾಟಕ ಜನ ವಿರೋಧಿ ನೀತಿ ಮಾಡಿರುವುದು ತುಂಬಾ ನೋವಿನ ವಿಷಯವಾಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಪತ್ರಿಕಾ ಗೋಷ್ಠಿ ಯಲ್ಲಿ ಹೋರಾಟ ಸಮಿತಿಯ ಮುಕಾಂಡರಾದ ಸೈಬಣ್ಣಾ ಜಮಾದಾರ,ಚನ್ನವೀರ ತಂಗ,
ಶಿವು ರಾಠೋಡ್,ಸಂಜು ಹೊಡಲ್ಕರ್ ಮತ್ತು ಡಿ.ಎಸ್. ಹಡಲಗಿ ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.