
ದಿನಾಂಕ: 17-12-2021 ರಂದು ರಾಜ್ಯದಲ್ಲಿ ಖಾಲಿ ಇದ್ದ 88 ದಂತ ಆರೋಗ್ಯಾಧಿಕಾರಿಗಳ ಹುದ್ದೆಗಳ ಭರ್ತಿಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಹಣ ಕೊಟ್ಟು ರೋಸ್ಟರ್ ಕಂ ಮೆರಿಟ್ ಪದ್ಧತಿಯನ್ನು ಪಾಲಿಸದೇ ಅಕ್ರಮವಾಗಿ ಆಯ್ಕೆಗೊಂಡಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರಲ್ಲಿ ಮಾಜಿ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಮತ್ತು ಸದಸ್ಯ ಕಾರ್ಯದರ್ಶಿ, ವಿಶೇಷ ನೇಮಕಾತಿ ಸಮಿತಿಯ ಮುಖ್ಯ ಆಡಳಿತಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಆದ ಜಿ.ಎನ್.ಮಂಜುನಾಥಸ್ವಾಮಿ ಹಾಗೂ ವಿಶೇಷ ನೇಮಕಾತಿ ಸಮಿತಿಯ ಎಲ್ಲಾ ಸಿಬಬಂದಿಗಳು ಮತ್ತು ಇವರಿಗೆ ಹಣ ಕೊಟ್ಟು ಆಯ್ಕೆಯಾಗಿ ಪ್ರಸ್ತುತ ರಾಜ್ಯದ ವಿವಿದೆಡೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ದಂತ ವೈದ್ಯಾಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ನಿಜವಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಕೋರುತ್ತೇವೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಖಾಲಿ ಇದ್ದ 88 ದಂತ ವೈದ್ಯಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ 65.9f.d/71/ 63.2.65/2019, 값: 16-06-2020 鳥 ঘন্ট: 25-08- 2020 ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಇವರಲ್ಲಿ ಸಾಕಷ್ಟು ಅಭ್ಯರ್ಥಿಗಳು ಮೇಲೆ ಉಲ್ಲೇಖಿಸಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ ರೋಸ್ಟರ್ ಕಂ ಮೆರಿಟ್ ಪಾಲಿಸದೇ ಅಕ್ರಮವಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅಕ್ರಮವಾಗಿ ಆಯ್ಕೆಯಾಗಿ ಮೆರಿಟ್ ಇದ್ದು ಅನ್ಯಾಯಗೊಂಡ ಇನ್ನು ಹಲವಾರು ಅಭ್ಯರ್ಥಿಗಳು ಈ ಹುದ್ದೆಯಿಂದ ವಂಚಿತರಾಗಿದ್ದಾರೆ. ಅವರಿಗೆ ಅನ್ಯಾಯವಾಗಿದೆ ಈ ಅನ್ಯಾಯವನ್ನು ಸರಿಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಯವರಿಗೆ ಹಾಗೂ ಆರೋಗ್ಯ ಸಚಿವರಿಗೆ ಹಾಗೂ ಕಾನೂನು ಸಚಿವರಿಗೆ ಹಾಗೂ ಮುಖ್ಯಕಾರ್ಯದರ್ಶಿಗಳಿಗೆ ಗಮನಕ್ಕೆ ತಂದರೂ ಕೂಡಾ ಇನ್ನು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಈ ಪ್ರಕರಣವನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡುವುದೇನೆಂದರೆ ಸಿ.ಐ.ಡಿ ತನಿಖೆಯನ್ನು ಮುಕ್ತವಾಗಿ ಮಾಡಿಸಬೇಕೆಂದು ತಮ್ಮಲ್ಲಿ ಅನ್ಯಾಯಕ್ಕೆ ಒಳಗಾದ ದಂತ ವೈದ್ಯಾದಿಕಾರಿಗಳ ಪರವಾಗಿ ಆಗ್ರಹ ಮಾಡುತ್ತೇನೆ. ಅದಕ್ಕಾಗಿ ಅನ್ಯಾಯವಾಗಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಆರ್.ಆರ್.ಹೀರೆಮಠ,ಹೈಕೋರ್ಟ್ ವಕೀಲರು ಮತ್ತು ಕಾರ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಶರಣ ವಕೀಲರ ವೇದಿಕೆ, ಬೆಂಗಳೂರು ಮತ್ತು ಡಾ||ನರಸಿಂಹಮೂರ್ತಿ,ದಂತ ವೈದ್ಯಾಧಿಕಾರಿಗಳು, ಕಡೂರು ರವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು..
City Today News 9341997936
