ರಾಜ್ಯದ 28 ಜಿಲ್ಲೆಯಲ್ಲಿ ಲೋಕ ಸಭಾ ಚುನಾವಣೆಯಲ್ಲಿ ಯಂಗ್ ಸ್ವಾರ್ ಎಂಪವರ್‌ಮೆಂಟ್ ಪಾರ್ಟಿ ಯ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹಾಗೂ ಪಕ್ಷದಿಂದ ಯಂಗ್ ಸ್ಟಾರ್ ಬರವಸೆಯನ್ನು ಮತದಾರರಿಗೆ ಪ್ರಮಾಣ ಪತ್ರ ವಿತರಣೆಗೆ ಚಾಲನೆ ನೀಡಿದೆ.

ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷ (ವೈ.ಇ.ಪಿ.) – ಯಂಗ್ ಸ್ಟಾರ್ ಭರವಸೆ (ಯಂಗ್ ಸ್ಟಾರ್ ಭಾರತ್)
ಯಂಗ್‌ಸ್ಟಾರ್ ಎಂಪವರ್‌ಮೆಂಟ್ ಪಕ್ಷ ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದೇಶದೆಲ್ಲೆಡೆ ಹಲವು ಕಡೆ ವೈ.ಇ.ಪಿ. ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ನಾನೂ ಕೂಡ ಒಬ್ಬ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ.

ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷ – ಪ್ರಣಾಳಿಕೆ (ಯಂಗ್ ಸ್ಟಾರ್ ಭರವಸೆ)
1) ಯಂಗ್ ಸ್ಟಾರ್ ಭಾರತ್ ಖರ್‌ಜ್‌ಸೆ ಆಜಾದಿ ಯೋಜನೆ
2) ಯಂಗ್ ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆ,ಯಂಗ್ ಸ್ಟಾರ್ ಭಾರತ್ ಖರ್‌ಜಸೆ ಆಜಾದಿ ಯೋಜನೆಯಿಂದ ಹಲವು ಬಡ ಕುಟುಂಬಗಳು ಯಾವುದೇ ರೀತಿಯ ಸಾಲ ಪಡೆದಿದ್ದರೂ ಸಹ, ಫೈನಾನ್‌ಶಿಯಲ್ ಇನ್ಸ್‌ಟಿಟ್ಯೂಟ್, ಬ್ಯಾಂಕ್ ಹಾಗೂ ಎನ್.ಬಿ.ಎಫ್.ಸಿ. ಕಂಪನಿಗಳಿಂದ ಪಡೆದಿರುವ ಯಾವುದೇ ರೀತಿಯ ಪರ್ಸನಲ್ ಲೋನ್, ಗ್ರೂಪ್ ಲೋನ್, ಗೋಲ್ಡ್ ಲೋನ್, ಹೋಮ್ ಲೋನ್, ಮಾರ್ಟಿಗೇಜ್ ಲೋನ್, ವೆಹಿಕಲ್ ಲೋನ್ ಸೇರಿದಂತೆ ಇನ್ನಿತರ ಯಾವುದೇ ರೀತಿಯ ಸಾಲವಿದ್ದರೂ ಕೂಡ 5 ಲಕ್ಷ ರೂಪಾಯಿಗಳ ವರೆಗೆ ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷದ ಯಂಗ್‌ಸ್ಟಾರ್ ಭರವಸೆಗಳ ಮುಖಾಂತರ ಸಾಲ ಮನ್ನಾ ಮಾಡಿಸಲಾಗುವುದು.


ಯಂಗ್ ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆ : ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ
ವಿದ್ಯಾರ್ಥಿ – ವಿದ್ಯಾರ್ಥಿನಿಯರ ಶಾಲಾ ಶುಲ್ಕವನ್ನು ತಂದೆ ತಾಯಿಯವರು ಕಟ್ಟುವ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ಉಚಿತ ಶಿಕ್ಷಣ ಪಡೆದುಕೊಳ್ಳುವುದು ಸಂವಿಧಾನದ ಪ್ರಕಾರ ನಮ್ಮೆಲ್ಲರ ಹಕ್ಕಾಗಿರುತ್ತದೆ. ಆದರೆ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಾಲೆಯ ಶುಲ್ಕ ಅತಿ ಹೆಚ್ಚಾಗಿರುವುದರಿಂದ ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷವು ಯಂಗ್ ಸ್ಟಾರ್ ಭರವಸೆ ಮುಖಾಂತರ ಯಂಗ್‌ಸ್ಟಾರ್ ಭಾರತ್ ಸ್ಕೂಲ್ ಫೀಸ್ ಆಜಾದಿ ಯೋಜನೆಯಿಂದ ಯಾವುದೇ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ 2 ಲಕ್ಷ ರೂಪಾಯಿಗಳ ಶುಲ್ಕದವರೆಗೆ ಉಚಿತ ವಿದ್ಯಾಭ್ಯಾಸವನ್ನು ಪಡೆಯಬಹುದಾಗಿರುತ್ತದೆ ಎಂದು ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ .ಎಂ. ಶಹಬಾಜ್ ಖಾನ್ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
City Today News 9341997936
