ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಲೋಕಸಭೆ ಚುನಾವಣೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡದಿರುವುದು ಬಂಜಾರಾ ಸಮಾಜಕ್ಕೆ ಅನ್ಯಾಯ

ಕಾಂಗ್ರೆಸ್ ನಾಯಕರು ಬಂಜಾರಾ ಸಮಾಜದ ಪ್ರಾತಿನಿಧ್ಯ ಕುರಿತು, ಮರು ಪರಿಶೀಲನೆ ಮಾಡಲು ಮನವಿ

ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಬಂಜಾರ ಜನಸಂಖ್ಯೆ ಇದ್ದು ಕನಿಷ್ಠ 14 ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳು ನಿರ್ಣಾಯಕ, ಸಾಮಾಜಿಕ ನ್ಯಾಯದಡಿ ರಾಜ್ಯದ 5 ಮೀಸಲು ಲೋಕಸಭೆ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಲಂಬಾಣಿ ಜನಸಂಖ್ಯೆ ಹಾಗೂ 2.5 ಲಕ್ಷಕ್ಕೂ ಹೆಚ್ಚು ಮತಗಳಿರುವ ವಿಜಯಪುರ ಮೀಸಲು ಕ್ಷೇತ್ರಕ್ಕೆ ಕಳೆದ 3 ದಶಕಗಳಿಂದ ಅಂದರೆ ಸತತವಾಗಿ 4 ಬಾರಿ ಬಂಜಾರ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗಿತ್ತು. ವಿಜಯಪುರ ಮೀಸಲು ಕ್ಷೇತ್ರ ಬಂಜಾರ ಸಮಾಜಕ್ಕೆ ಬಂಜಾರ ಕೋಟಾ ಅಂತಾನೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡದೆ ನಮ್ಮ ಸಮಾಜಕ್ಕೆ ಆಘಾತವನ್ನುಂಟು ಮಾಡಿದೆ. ಬಂಜಾರ ಸಮುದಾಯವನ್ನು ಬಿ.ಜೆ.ಪಿ ಸರ್ಕಾರ ನ್ಯಾಯಮೂರ್ತಿ ಸದಾಶಿವ ಆಯೋಗದ ಒಳಮೀಸಲಾತಿಯನ್ನು ಘೋಷಣೆ ಮಾಡಿ ಸರ್ಕಾರವನ್ನೇ ಕಳೆದುಕೊಂಡ ವಿಚಾರ ರಾಜ್ಯದ ಜನತೆಗೆ ಗೊತ್ತಿದೆ.

ಇದನ್ನು ಅರಿತು ಕಾಂಗ್ರೆಸ್ ರಾಜ್ಯ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೆ ನಮ್ಮ ಸಮಾಜಕ್ಕೆ ಟಿಕೆಟ್ ನೀಡುವುದರ ಕುರಿತು ಪಕ್ಷ ತಪ್ಪದೆ ಮರುಪರಿಶೀಲನೆ ಮಾಡಿ ಸ್ಥಳೀಯ ಗೆಲ್ಲುವ ಸಾಮರ್ಥ್ಯವುಳ್ಳ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ರವರಿಗೆ ಟಿಕೆಟ್ ನೀಡಿ ಸಮಾಜಕ್ಕೆ ನ್ಯಾಯ ಕೊಡಲು ಸಮಸ್ತ ಬಂಜಾರ ಜನಾಂಗ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷ ಹಾಗೂ ಮಾಜಿ ಸಚಿವೆ ಶ್ರೀಮತಿ ಬಿ.ಟಿ.ಲಲಿತಾ ನಾಯಕ್ ರವರು ಕಾಂಗ್ರೆಸ್ ‘ಪಕ್ಷವನ್ನು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಸಿದ್ಯಾನಾಯಕ್, ಶ್ರೀ ಅಶ್ವತ್ ನಾಯಕ್, ಶ್ರೀ ಪಿ.ಕೆ.ಖಂಡೋಬ, ಶ್ರೀ ಸುಬ್ರಮಣ್ಯ ನಾಯಕ್, ಶ್ರೀ ಶಂಕರ್ ನಾಯಕ್, ಶ್ರೀ ನರಸಿಂಹ ನಾಯಕ್, ಡಾ॥ಪರಮೇಶ್ ನಾಯಕ್ ಹಾಗೂ ಮಾಜಿ ಶಾಸಕರಾದ ಶ್ರೀ ಮನೋಹರ ಐನಾಪೂರ ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.