ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಶಾಸಕರು, ಶಿಫಾರಸ್ಸು ಪತ್ರಗಳನ್ನು ಸಹ ಪರಿಗಣಿಸದೇ ಕಡತಗಳನ್ನು ಅನುಮೋದನೆ ಮಾಡದೇ ಇರುವ ಬಗ್ಗೆ.

ಸನ್ಮಾನ್ಯ ಮುಖ್ಯಮಂತ್ರಿಯವರು ಮತ್ತು ಶಾಸಕರು, ಶಿಫಾರಸ್ಸು ಪತ್ರಗಳನ್ನು ಸಹ ಪರಿಗಣಿಸದೇ ಕಡತಗಳನ್ನು ಅನುಮೋದನೆ ಮಾಡದೇ ಇರುವ ಬಗ್ಗೆ.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಅನೇಕ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಸುಮಾರು 20-25 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುತ್ತೇನೆ ಹಾಗೂ 2010ರಲ್ಲಿ ಬೆಂಗಳೂರಿನಿಂದ ಬಳ್ಳಾರಿ ತನಕ ಸುಮಾರು 325 ಕಿ.ಮೀ. ಗಳ ಪಾದಯಾತ್ರೆ ಮಾಡಿದ್ದು, ನಂತರ, ಮೇಕೆದಾಟು, ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆಯಿಂದ ರಾಯಚೂರು ತನಕ ಪಾದಯಾತ್ರೆಯ ಕಾಯಕ್ರಮದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಮಹಾತ್ಮಗಾಂಧಿ ವೇಷ ಹಾಕಿಕೊಂಡು ಭಾಗವಹಿಸಿರುತ್ತೇನೆ. ನಂಜನಗೂಡು (ಕಳಲೆ ಕೇಶವಮೂರ್ತಿ), ಕೊಪ್ಪಳ (ಬಸವರಾಜು ಹಿಟ್ನಾಳ್), ಆರ್ ಆರ್ ನಗರ (ಕುಸುಮ ಹೆಚ್), ಸಿ.ವಿ. ರಾಮನ್ ನಗರ (ಆರ್ ಸಂಪತ್‌ರಾಜ್), ಶಿವಾಜಿನಗರ (ರಿಜ್ವಾನ್ ಹರ್ಷದ್) ಸೇರಿದಂತೆ ಹಲವಾರು ಉಪ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ಶ್ರಮಿಸಿರುತ್ತೇನೆ.

ಪಕ್ಷಕ್ಕಾಗಿ ದುಡಿದಿರುವಂತಹ ನಮ್ಮಂತಹ ಸಾಮಾನ್ಯ ಕಾರ್ಯಕರ್ತರು ಆದ ನನಗೆ ತುಂಬಾ ಬೇಕಾದವರು ಆಗಿರುವಂತಹವರ ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಯವರಿಂದ ಮತ್ತು ಸಂಬಂಧಪಟ್ಟ ಸ್ಥಳೀಯ ವಿಧಾನಸಭಾ ಸದಸ್ಯರ ಶಿಫಾರಸ್ಸು ಪತ್ರಗಳನ್ನು ಸಂಬಂಧಪಟ್ಟ ಲೋಕೋಪಯೋಗಿ ಕಡತ ಅನುಮೋದನೆಗಾಹಗಿ ಕಡತವೊಂದನ್ನು ಸಂಬಂಧಪಟ್ಟ ಇಲಾಖೆಯ ಮೂಲಕ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಈ ವಿಚಾರವಾಗಿ ನಾನು ಮಾನ್ಯ ಸಚಿವರನ್ನು ಸುಮಾರು 4-5 ಬಾರಿ ಖುದ್ದಾಗಿ ಭೇಟಿ ನೀಡಿ ಕಡತವನ್ನು ಅನುಮೋದನೆ ಮಾಡಿಕೊಡಿ ಎಂದು ವಿನಂತಿಸಿಕೊಂಡಾಗ ಮಾನ್ಯ ಸಚಿವರು ಆಪ್ತ ಕಾರ್ಯದರ್ಶಿಯಾಗಿರುವ ಶ್ರೀ ರಾಜಪ್ಪರವರಿಗೆ ಈ ವಿಚಾರವಾಗಿ ಕಡತ ಪರಿಶೀಲಿಸಿ ಎಂದು ತಿಳಿಸಿದರೂ ಸಹ ಶ್ರೀಯುತ ರಾಜಪ್ಪರವರು ನಮಗೆ ಆ ಜಾಗ ಬೇರೆಯವರಿಗೆ ಆಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಇದೇ ರೀತಿ ಕಳೆದ ಕಡತದಲ್ಲಿಯೂ ಸಹ ಅನುಮೋದನೆಗಾಗಿ ಸಲ್ಲಿಸಿರುವ ಕಡತವು ವರ್ಗಾವಣೆ ಅವಧಿ ಮುಗಿದಿರುವುದರಿಂದ ಇಲಾಖೆಗೆ ವಾಪಸ್ಸು ಕಳುಹಿಸಿರುತ್ತೇನೆ ಎಂದು ತಿಳಿಸಿರುತ್ತಾರೆ.

ಸಾಮಾನ್ಯ ವರ್ಗಾವಣೆಯ ಅವಧಿಯಲ್ಲಿ ಇಲಾಖೆಯ ಸಚಿವರಿಗೆ ಮಾತ್ರ ಸಂಪೂರ್ಣ ಅಧಿಕಾರವಿದ್ದು, ತದನಂತರ ಮಾನ್ಯ ಮುಖ್ಯಮಂತ್ರಿಗಳು ಉಳಿದ ಅವಧಿಯಲ್ಲಿ ವರ್ಗಾವಣೆ ಮಾಡಲು ಸಂಪೂರ್ಣ ಅಧಿಕಾರ ಇರುತ್ತದೆ.

ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಪಡೆಯದೆ ಹಲವಾರು ವರ್ಗಾವಣೆಗಳನ್ನು ಮಾಡಿರುತ್ತಾರೆ. ಸರ್ಕಾರ ಆದೇಶ ಸಂಖ್ಯೆ ಲೋ.ಇ.235/ಸೇವಿಸು/2023 ದಿನಾಂಕ 17-01-2024ರ ಆದೇಶದಲ್ಲಿ ತಲಕಾಡು

ಇಲಾಖೆಯ ಅಧಿಕಾರಿಗಳು ವಯೋನಿವೃತ್ತಿ ಹೊಂದಿದ್ದು, ಸದರಿ ಜಾಗಗಳಿಗೆ ಸಂಬಂಧಪಟ್ಟ ಶಾಸಕರ ಪತ್ರವನ್ನು ತೆಗೆದುಕೊಂಡು ಬಂದರೂ ಸಹ ಪರಿಗಣಿಸದೆ ನಮಗೆ ಸಬೂಬು ಹೇಳುತ್ತಿದ್ದಾರೆ.

1. PWD/59/SAG/2024 ಸದರಿ ಕಡತವು ಮಾನ್ಯ ಸಚಿವರ ಕಚೇರಿಯಲ್ಲಿ ಅನುಮೋದನೆಗಾಗಿ ಇದ್ದು ಈ ತನಕ ಅನುಮೋದನೆ ಆಗಿರುವುದಿಲ್ಲ.

2. PWD/220/SAG/2024 – ថ덜덜된 김/ /, ಮುಗಿದಿರುತ್ತದೆ ಎಂದು ದುರುದ್ದೇಶಪೂರ್ವಕವಾಗಿ ಇಲಾಖೆಗೆ ಮಾನ್ಯ ಸಚಿವರ ಆಪ್ತ ಕಾರ್ಯದರ್ಶಿ ವಾಪಸ್ಸು ಹಾಕಿರುತ್ತಾರೆ. ತದನಂತರ 2-3 ವರ್ಗಾವಣೆಗಳ ಆದೇಶಗಳಾಗಿರುತ್ತವೆ.

ನಾವು ನಿಗಮ ಮಂಡಳಿಗಳಲ್ಲಿಯೋ ಅಥವಾ ಬೇರೆ ಯಾವುದೇ ಸ್ಥಾನಮಾನ ಕೇಳುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ನಮ್ಮಂತಹ ಸಾವಿರಾರು ಕಾರ್ಯಕರ್ತರ ಶ್ರಮದಿಂದ ಇಂದು ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದ್ದೀರ. ಇನ್ನು 4-5 ದಿನಗಳ ನಂತರ ಚುನಾವಣಾ ಆಯೋಗದಿಂದ ಯಾವುದೇ ಕ್ಷಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಬಹುದು.

ದಯವಿಟ್ಟು ಮೇಲ್ಕಂಡ ಕಡತವನ್ನು ಮಾನ್ಯ ಸಚಿವರ ಕಾರ್ಯಾಲಯದಿಂದ ಅತಿ ಶೀಘ್ರವಾಗಿ ತರಿಸಿಕೊಂಡು ಕಡತವನ್ನು ಅನುಮೋದನೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರುತ್ತಾ, ಮುಂದಿನ ಆಗು-ಹೋಗುಗಳಿಗೆ ಶ್ರೀ ರಾಜಪ್ಪರವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮುತ್ತುರಾಯಪ್ಪ ತಿಳುಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.