ಲೋಕ್ ಶಕ್ತಿ ಪಾರ್ಟಿ ವತಿಯಿಂದ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿ ಬಿಡುಗಡೆ

ಮೌಲ್ಯಾಧಾರಿತ ರಾಜಕಾರಣಿ, ಅಧಿಕಾರ ವಿಕೇಂದ್ರಿಕರಣದ ರೂವಾರಿಗಳು, ಮಾಜಿ ಮುಖ್ಯ ಮಂತ್ರಿ ದಿ। ಶ್ರೀ ರಾಮಕೃಷ್ಣ ಹೆಗಡೆಯವರು ಸ್ಥಾಪಿಸಿದ, ಲೋಕ್ ಶಕ್ತಿ ಪಾರ್ಟಿ ವತಿಯಿಂದ ಲೋಕಸಭಾ ಚುನಾವಣೆಗೆ ಮೊದಲ ಪಟ್ಟಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಾಕೇಶ್ ಲಿಮಾಯೇ, ಹಾಗೂ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಶ್ಯಾಮಲ್‌ರವರ ಆದೇಶದ ಮೇರೆಗೆ, ರಾಜ್ಯಾಧ್ಯಕ್ಷರು ಈ ದಿನ ಈ ಕೆಳಗಿನ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರಸ್ತುತ ದೇಶದ ರಾಜಕಾರಣ, ತುಘಲಕ್ ಸಂಸ್ಕೃತಿಯ ಪರಂಪರೆಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ. ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಬರೀ ಬಾಯಿಮಾತಿನಲ್ಲಿ ಮನೆ ಕಟ್ಟಿದರೆ ಸಾಲದು. ಅದು ಕಾರ್ಯರೂಪಕ್ಕೆ ಬರಬೇಕು. ಚುನಾವಣಾ ಬಾಂಡ್ ಬಗ್ಗೆ ರಾಜಕೀಯ ಪಕ್ಷಗಳ ಹಣದ ವಿವರಗಳನ್ನು ಬಹಿರಂಗಪಡಿಸಲು ಎಸ್. ಬಿ. ಐ. ಬ್ಯಾಂಕ್ ಸುಪ್ರೀಂ ಕೋರ್ಟ್ ನಲ್ಲಿ ಸಮಯ ಕೇಳುತ್ತಿರುವುದು ತುಂಬಾ ದುರದೃಷ್ಟಕರ ಸಂಗತಿ. ಕಾರಣ ದೇಶದ ರೈತರಿಗೆ ಟ್ರಾಕ್ಟರ್ ಸಾಲ ಬೆಳೆ ಸಾಲ ಇನ್ನಿತರೆ ಸಾಲಗಳ ವಿವರಗಳನ್ನು ಕ್ಷಣಮಾತ್ರದಲ್ಲಿ ಕೊಡುತ್ತಾರೆ ಆದರೆ ರಾಜಕೀಯ ಪಕ್ಷಗಳು ದಾನಿಗಳಿಂದ ಪಡೆದಿರುವ ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಸಮಯ ಕೇಳುವುದು ನೋಡಿದರೆ, ರಾಜಕೀಯ ಪಕ್ಷಗಳನ್ನು ರಕ್ಷಣೆ ಮಾಡುವಂತೆ ಕಾಣುತ್ತದೆ ಸುಪ್ರೀಂ ಕೋರ್ಟ್ ನಲ್ಲಿ ಎಸ್. ಬಿ. ಐ. ಬ್ಯಾಂಕ್ ಹೆಚ್ಚಿನ ಸಮಯವನ್ನು ಕೋರಿದ ಮನವಿಯನ್ನು ಆಲಿಸಿದ ಕೋರ್ಟ್, ನಾಳೆ ಸಂಜೆ ಒಳಗಾಗಿ ದಾನಿಗಳ ಡೇಟಾವನ್ನು ನೀಡಬೇಕು ಎಂದು ತೀರ್ಪು ನೀಡಿರುವ ಸ್ವಾಗತ.
ಬರಗಾಲದಿಂದ ದೇಶಕ್ಕೆ ಅನ್ನ ಕೊಡುವ ರೈತನ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಕುಡಿಯುವ ನೀರಿಗೆ ತತ್ವಾರವಾಗಿದೆ. ಬೆಳೆಗಳು, ಇಲ್ಲ. ಜಾನುವಾರುಗಳಿಗೆ ನೀರು ಮೇವಿನ ಕೊರತೆಯುಂಟಾಗಿದೆ. ರೈತನ ಜ್ವಲಂತ ಸಮಸ್ಯೆಗಳನ್ನು ಕೇಳುವವರು ಯಾರೂ ಇಲ್ಲ. ಇವರ ಮೇಲೆ ಅವರು, ಅವರ ಮೇಲೆ ಇವರು ಆರೋಪ ಪ್ರತ್ಯಾರೋಪ ಮಾಡುತ್ತಾ, ಕಾಲಹರಣ ಮಾಡುತ್ತಿದ್ದಾರೆ. ಆದ್ದರಿಂದ ರೈತರು ಈ ಬಾರಿ, ಚುನಾವಣೆಯಲ್ಲಿ ಎರಡೂ ಪಕ್ಷಗಳಿಗೆ ಬುದ್ದಿ ಕಲಿಸಲಿದ್ದಾರೆ. ಅದೇ ರೀತಿ ನಮ್ಮ ಪಕ್ಷಕ್ಕೆ ರಾಜ್ಯದ ಜನತೆ ಆಶೀರ್ವಾದ ವಾಡುತ್ತಾರೆ ಎನ್ನುವ ನಂಬಿಕೆ ನಮಗಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಚಂದ್ರಶೇಖರ್.ವಿ ಸ್ಥಾವರಮಠ ರಾಜ್ಯಾಧ್ಯಕ್ಷರು, ಲೋಕ್ ಶಕ್ತಿ ಪಾರ್ಟಿ ರವರು ತಿಳಿಸಿದರು.
1. ಮೈಸೂರು – ಕೊಡಗು
– ಶ್ರೀ ಚಂದ್ರಶೇಖರ್ ವಿ. ಸ್ಥಾವರಮಠ.
2. ಮಂಡ್ಯ
ಶ್ರೀ ಎನ್. ಬಸವರಾಜ್
3. ತುಮಕೂರು
– ಶ್ರೀ ಆರ್. ಎಸ್. ರಂಗನಾಥ್,
4. ಹಾಸನ
ಶ್ರೀ ಹೊಳೆಯಪ್ಪ ಜೇನುಗವಿ.
5. ಉತ್ತರ ಕನ್ನಡ
ಶ್ರೀ ದಿನೇಶಚಂದ್ರ ಅಂಗಡಿಗೇರಿ.
6. ಚಾಮರಾಜನಗರ
– ಶ್ರೀ ಕೆ. ಎಸ್. ಲೋಕೇಶ್,
7. ಕೋಲಾರ
– ಶ್ರೀ ಎಂ. ಎಸ್. ಬದರಿನಾರಾಯಣ
8. ಚಿತ್ರದುರ್ಗ
– ಶ್ರೀಮತಿ ರೂಪಾ ಎಸ್.
9. ದಾವಣಗೆರೆ
– ಶ್ರೀ ಬಸವರಾಜಪ್ಪ ನೀರ್ಥಡಿ
10 ಬೆಂಗಳೂರು ಗ್ರಾಮಾಂತರ
– ಶ್ರೀ ಶರತ್ ಎಸ್.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಬಸವರಾಜ್ ಎನ್. ರಾಜ್ಯಾದ್ಯಕ್ಷರು, ರಾಜ್ಯ ಹಿಂದುಳಿದ ವರ್ಗ, ಶ್ರೀ ರಂಗನಾಥ ಆರ್. ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಲೋಕೇಶ್ ಕೆ. ಎಸ್. ಜಿಲ್ಲಾಧ್ಯಕ್ಷರು, ಮೈಸೂರು, ಶ್ರೀ ಯತೀಶ್ ರಾಜ್ಯ ಖಜಾಂಚಿಗಳು, ಶ್ರೀ ಸತೀಶ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಶ್ರೀ ಬದರಿ ನಾರಾಯಣ್, ರಾಜ್ಯ ಮುಖಂಡರುಗಳು ಉಪಸ್ಥಿತರಿದ್ದರು.
City Today News 9341997936
