ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೈಜಾಕ್‌ಗೆ ಷಡ್ಯಂತ್ರ

ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೈಜಾಕ್‌ಗೆ ಷಡ್ಯಂತ್ರ

: ಹಿರಿಯ ಅಥ್ಲೆಟ್‌ಗಳ ಅಸಮಾಧಾನ:

ಭಾರತೀಯ ಅಥ್ಲೆಟಿಕ್ಸ್ ಅಸೋಸಿಯೇಷನ್ ಮಾನ್ಯತೆ ಪಡೆದಿರುವ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ರಾಜ್ಯದ ನೈಜ ಸಂಘಟನೆಯಾಗಿದ್ದು, ಸಂಸ್ಥೆಯ ಬೈಲಾ, ನೀತಿ, ನಿಯಮಗಳನ್ನು ಉಲ್ಲಂಘಿಸಿ ನಮ್ಮ ಸಂಘಟನೆಯನ್ನು ಹೈಜಾಕ್ ಮಾಡಿರುವುದರಿಂದ ಹಿರಿಯ ಅಥ್ಲೆಟ್‌ಗಳಲ್ಲಿ ಗೊಂದಲ ಉಂಟಾಗಿದೆ ಎಂದು ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯಕಾರಿ ಅಧ್ಯಕ್ಷ ಡಿ.ಎಚ್.ಗುರು ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಹಿರಿಯ ಅಥ್ಲೆಟ್‌ಗಳ ಹಿತ ಬದ್ಧವಾಗಿದೆ. ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಷನ್ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲವರು ಸಂಘಟನೆಯನ್ನು ಕೆಲವರು ಹೈಜಾಕ್ ಮಾಡಲು ಷಡ್ಯಂತ್ರ ರೂಪಿಸಿದ್ದು, ಇಂಡಿಯನ್ ವೆಟ್ರಿನ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಸಂಸ್ಥೆಯ ಸದಸ್ಯರು ಇಂತಹ ಹುನ್ನಾರಗಳಿಗೆ ಕಿವಿಗೊಡಬಾರದು. 5 ಬೆಳವಣಿಗೆಯಿಂದ ರಾಜ್ಯದ ಅಥ್ಲೆಟ್‌ಗಳು ತೀವ್ರ  ಅಸಮಾಧಾನಗೊಂಡಿದ್ದಾರೆ ಎಂದರು.

ಕೆಲವರು ವಾಫಿ ಎಂಬ ಸಂಘಟನೆ ರಚಿಸಿಕೊಂಡು ನಮ್ಮ ಲೆಟರ್ ಹೆಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಎರಡು ವರ್ಷ ಕೊರೋನಾ ಸಂದರ್ಭದಲ್ಲಿ ರಾಮಮೂರ್ತಿ ಎಂಬುವವರನ್ನು ಸಂಸ್ಥೆಯ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು, ಅವರು ತಮ್ಮ ಐ.ಎಂ. ಗೆ ಸೇರಬೇಕಾದ ಹಣವನ್ನು ತನ್ನ ಸ್ವಂತ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಈ ಕುರಿತು ಲೆಕ್ಕ ಪತ್ರ ನೀಡಿಲ್ಲ. ಒಟ್ಟು (13,38,952/-) 13 ಲಕ್ಷ ರೂ 38 ಸಾವಿರ ಒಂಭೈನೂರು ಐವತ್ತೆರಡು ವಂಚನೆ ಮಾಡಿದ್ದಾರೆ. ಸಂಘಟನೆಯ ಸರ್ವ ಸದಸ್ಯರ ಸಭೆ ಕರೆಯಲು ಅಧಿಕಾರ ಇಲ್ಲದಿದ್ದರೂ ಅವರು ಸಭೆ ಕರೆದು ಸಂಘಟನೆಯ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ನಮ್ಮ ಎದುರಾಳಿ ಬಣದವರು ಬೇಕಿದ್ದರೆ ಹಿರಿಯ ಅಥ್ಲೆಟಿಕ್ಸ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಸಂಘಟನೆ ರಚನೆ ಮಾಡಿಕೊಂಡರೆ ನಮ್ಮ ಅಭ್ಯಂತರವಿಲ್ಲ. ಹೊಸ ಸಂಘಟನೆ ಮೂಲಕ ಹೆಚ್ಚು ಕ್ರೀಡಾಕೂಟಗಳನ್ನು ಆಯೋಜಿಸಿದರೆ ಒಳ್ಳೆಯದು. ಆದರೆ ನಮ್ಮ ಸಂಘಟನೆಯ ಹೆಸರು, ಲಾಂಛನ, ಲೆಟರ್ ಹೆಡ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ಕೈಬಿಡಬೇಕು. ಐ.ಎಂ.ಎ. ಅಡಿ ಬರುವ ನಮ್ಮದೇ ನಿಜವಾದ ಸಂಘಟನೆ ಎಂದು ಹೇಳಿದರು.

ನಮ್ಮ ಸಂಘದವರೆಂದು ಹೇಳಿಕೊಳ್ಳುತ್ತಿರುವ ಪದಾಧಿಕಾರಿಗಳು ಸಂವಿಧಾನಬದ್ಧವಾಗಿ ಚುನಾವಣೆಯಿಂದ ಆಯ್ಕೆಯಾದವರಲ್ಲ. ಕೋಲಾರದಲ್ಲಿ ರಾಜ್ಯ ಚಾಂಪಿಯನ್‌ಶಿಪ್ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಅನ್ನು ನಮ್ಮ ಅಜೀವ ಸದಸ್ಯರಿಗೆ ತಿಳಿಸದೆ ಚಟುವಟಿಕೆಗಳನ್ನು ನಡೆಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಲೋಪ ಎಸಗುತ್ತಿದ್ದು ಇಂಡಿಯನ್ ವೆಟ್ರಿನ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಂಗನಾಥ್ ಅವರು ನಡೆಸುತ್ತಾರೆ. ಇನ್ನು ಮುಂದೆ ಐ.ಎಂ.ಎ. ಸದಸ್ಯರು ಸೇರಬೇಡಿ ಎಂದು  ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಮನವಿ ಮಾಡಿದರು.

City Today News 9341997936

Leave a comment

This site uses Akismet to reduce spam. Learn how your comment data is processed.