
ಬೆಂಗಳೂರಿನ ಶ್ರೀ ಸಾಯಿಕಲಾವೃಂದ ತನ್ನ 6ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಕಣಗಲ್ ಪ್ರಭಾಕರ ಶಾಸ್ತ್ರೀ ವಿರಚಿತ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಿತ್ತು. ಸಭಾ ಕಾರ್ಯಕ್ರಮದಲ್ಲಿ ,ಬಿ.ಬಿ.ಎಂ.ಪಿ.ಆರೋಗ್ಯ ಸ್ಥಾಯಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಎಂ. ಮುನಿರಾಜು, ಸಮಾಜ ಸೇವಕ ಎಲ್.ಹರ್ಷ, ಕನ್ನಡ ಪರ ಹೋರಾಟಗಾರರಾದ ರಮೇಶ್ (ನಾಡಿಗ್) ,ಹಿರಿಯ ರಂಗಕರ್ಮಿ ಕಂಟನಕುಂಟೆ ಕೃಷ್ಣಮೂರ್ತಿ, ಕಲ್ಲೂರು ಶ್ರೀನಿವಾಸ, ವಕೀಲ ಡಿ. ರಾಜು, ಜಲಮಂಡಳಿ ರಾಮಚಂದ್ರ, ಇದ್ದ ಸಭೆಯನ್ನು ಕಲಾವಿದ ಆರ್ ವೆಂಕಟರಾಜು ನಿರೂಪಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿ. ಶ್ರೀನಿವಾಸ್ ಉಪಸ್ಥಿತರಿದ್ದ ರು.ಸಭಾ ಕಾರ್ಯಕ್ರಮದ ನಂತರ ನುರಿತ ಕಲಾವಿದರಿಂದ ಪ್ರಚಂಡ ರಾವಣ ನಾಟಕದ ಪ್ರದರ್ಶನ ಕಲ್ಲೂರು ಶ್ರೀನಿವಾಸ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ನಡೆಯಿತು.ರಾವಣನ ಪಾತ್ರದಲ್ಲಿ ತುರುವೇಕೆರೆ ಮಂಜಣ್ಣ, ಬ್ರಹ್ಮನಾಗಿ ಹೆಚ್ ಎ. ಎಲ್. ರೇವಣ್ಣ, ಮಂಡೋದರಿಯಾಗಿ ಪ್ರತಿಭಾ ನಾರಾಯಣ, ಸೀತೆಯಾಗಿ ಭಾಗ್ಯಶ್ರೀ, ವಿಭೀಷಣನಾಗಿ ಚನ್ನಯ್ಯ,ಆಂಜನೇಯನಾಗಿ ತುರುವೇಕೆರೆ ಶಿವಾನಂದ ಅಭಿನಯಿಸಿದರು.
City Today News 9341997936
