“ಟಿಕೇಟು ನೀಡದಿದ್ದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಶಾಮಸುಂದರ್ ಗಾಯಕ್ ವಾಡ್’

ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಬಿಜೆಪಿ ಮುಖಂಡ, ಮರಾಠ ಸಮುದಾಯದ ನಾಯಕರಾದ ಶಾಮಸುಂದರ್ ಗಾಯಕ್ ವಾಡ್ ಬೆಂಬಲಿಸಿ ಮಾಧ್ಯಮಗೋಷ್ಠಿ ಏರ್ಪಡಿಸಿದ್ದರು.
ಕರ್ನಾಟಕ ಕ್ಷತ್ರಿಯ ಮಹಾ ಒಕ್ಕೂಟ ರಾಜ್ಯಾಧ್ಯಕ್ಷರು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಶಾಮಸುಂದರ್ ಗಾಯಕವಾಡ್ ರವರು, ರಾಷ್ಟ್ರೀಯ ಮರಾಠ ಪಾರ್ಟಿ ಅಧ್ಯಕ್ಷರಾದ ಮನೋಹರ್ ರಾವ್ ಜಾಧವ್, ಉಪಾಧ್ಯಕ್ಷರುಳಾದ ಚಂದ್ರಶೇಖರ್ ಭೋಜಗಡ್, ಈಶ್ವರ್ ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ಕುನಾಲ್ ಗೋವಿಂದ್, ಸಹ ಕಾರ್ಯದರ್ಶಿ ವೆಂಕಟೇಶ್ವರ ರಾವ್, ಕಾರ್ಯದರ್ಶಿ ತಿಲಕ್ ಚಂದನ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಶಾಮಸುಂದರ್ ಗಾಯಕ್ ವಾಡ್ ರವರು ಮಾತನಾಡಿ ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯುಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ರವರು ನಮ್ಮ ಮರಾಠ ಸಮುದಾಯ 50ಲಕ್ಷ ಜನರು ಇದ್ದಾರೆ ಮತ್ತು ಹಿಂದುಳಿದ ವರ್ಗದ ಕುರುಬರು, ನೇಕಾರರು, ಗೊಲ್ಲರು, ಮೀನುಗಾರರು, ತಿಗಳರು, ಗಾಣಿಗರು, ಕುಂಬಾರರು, ಮಡಿವಾಳ, ದೇವಾಡಿಗ ಶೇಕಡ 52%ರಷ್ಟು ರಾಜ್ಯದಲ್ಲಿ ಜನಸಂಖ್ಯೆ ಇದೆ ಈ ಸಮುದಾಯದವರಿಗೆ ಟಿಕೇಟು ನೀಡದೇ ನಂಬಿಕೆ ದ್ರೋಹ ಮಾಡಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರಂತರ ಜನಸಂಪರ್ಕ ಮಾಡಿಕೊಂಡು ಪಕ್ಷದ ಟಿಕೇಟು ನೀಡಿ ಎಂದು ವರಿಷ್ಮರಿಗೆ ಮನವಿ ಮಾಡಿದ್ದೇ ಈ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮರಾಠ ಮತಾದಾರರು ಇದ್ದಾರೆ. ಬಿಜೆಪಿ ಪಕ್ಷ ಮರಾಠ ಸಮುದಾಯಕ್ಕೆ ಮೋಸ ಮಾಡಿರುವ ಕಾರಣದಿಂದ ಬಿಜೆಪಿ ಪಕ್ಷ ತೊರೆದು ರಾಷ್ಟ್ರೀಯ ಮರಾಠ ಪಾರ್ಟಿ ವತಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿದ್ದೇನೆ. ಮರಾಠ ಸಮುದಾಯ 3ಬಿ 2ಎ ಸೇರ್ಪಡೆ ಮಾಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿ ವಂಚನೆ ಮಾಡಿದೆ.

8 ಲೋಕಸಭಾ ಕ್ಷೇತ್ರಗಳಲ್ಲಿ ಮರಾಠ ಸಮುದಾಯದವರ 2ರಿಂದ 4ಲಕ್ಷದವರೆಗೆ ಮತದಾರರು ಇದ್ದಾರೆ. ಅದ ಕಾರಣದಿಂದ 10ಲೋಕಸಭಾ ಕ್ಷೇತ್ರದಲ್ಲಿ ಮರಾಠ ಪಾರ್ಟಿಯಿಂದ ಬೆಂಬಲ ಘೋಷಣೆ ಮಾಡಿದ್ದಾರೆ ಇದರಿಂದ ಇಡೀ ಮರಾಠ ಸಮಾಜ ಹಿಂದುಳಿದ ಸಮಾಜ ನೊಂದು ಬೇಸತ್ತು ಮುಂಬರುವ ದಿನಗಳಲ್ಲಿ ಬಿ.ಜೆ.ಪಿಗೆ ಪಕ್ಷಕ್ಕೆ ಮತ ನೀಡಬಾರದೆಂದು ರಾಷ್ಟ್ರೀಯ ಮರಾಠ ಪಾರ್ಟಿಯ ಪಕ್ಷವು ಕರ್ನಾಟಕದಲ್ಲಿ ಹತ್ತು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದು ಮರಾಠ ಮತ್ತು ಹಿಂದುಳಿದ ವರ್ಗದ ಸಮಾಜ ಹಾಗೂ ದಲಿತರು ಅಲ್ಪಸಂಖ್ಯಾತರಗಳನೊಳಗೊಂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಇದರಿಂದ ಬೇಸತ್ತ ನಾನು 25 ವರ್ಷಗಳಿಂದ ಪಕ್ಷಕ್ಕೆ ದುಡಿದು ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬರಲು ಶ್ರಮಿಸಿದ ನನ್ನಂತ ರಾಜ್ಯ ಮರಾಠ ಮುಖಂಡರಿಗೆ ಅನ್ಯಾಯ ಮಾಡಿರುತ್ತಾರೆ. ಕರ್ನಾಟಕದ ಬಿಜೆ.ಪಿ ಮುಖಂಡರು ಮಾಡಿದ ಅನ್ಯಾಯ ಇದರಿಂದ ನಾನು ಇದು ಬಿ.ಜೆ.ಪಿ ಬಂಢಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಗೆದ್ದು ನರೇಂದ್ರಮೋದಿಯವರಿಗೆ ಕೈಬಲಪಡಿಸುತ್ತೇನೆ ಎಂದು ಹೇಳಿದರು.
ಈ ಕೆಳಕಂಡ ಲೋಕಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮರಾಠ ಪಾರ್ಟಿವತಿಯಿಂದ ಈ ಕೆಳಕಂಡ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. 1)ಉತ್ತರ ಕನ್ನಡ-ಶಾಮಸುಂದರ್ ಗಾಯಕ್ ವಾಡ್ 2)ಧಾರವಾಡ -ಜಿ.ಡಿ.ಘೋರ್ಪಡೆ 3)ಹಾವೇರಿ-ನಾರಾಯಣ್ ರಾವ್ ಗಾಯಕ್ ವಾಡ್ 4)ಬೆಳಗಾಂ-ಈಶ್ವರ್ ರುದ್ಧಪ್ಪ ಗಾಡಿ, 5)ಚಿಕ್ಕೋಡಿ- ವಿನೋದ್ ಸಾಳುಂಕೆ 6) ಬೀದರ್-ವಿಜಯಕುಮಾರ್ ಪಾಟೀಲ್ 7) 8) ಬಾಗಲಕೋಟೆ- ಶ್ರೀಕಾಂತ್ ಮುಧೋಳ, 9)ಶಿವಮೊಗ್ಗ- ಎಂ.ಡಿ.ದೇವರಾಜ್ ಸಿಂಧೆ 10) ಬಿಜಾಪುರ ಮತ್ತು ಗುಲ್ಬರ್ಗಕ್ಕೆ ಎಸ್.ಸಿ.ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ಎಂದು ಮನೋಹರ್ ರಾವ್ ಜಾದವ್,ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936
