
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಉಜಿರೆಯ ಶಾಹುಲ್ ಹಮೀದ್ (45 ವರ್ಷ),ಮದ್ದಡ್ಕ ನಿವಾಸಿ ಇಸಾಕ್ ( 54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ ( 34 ವರ್ಷ) ಎಂಬ ಮೂವರು ಅಮಾಯಕ ವ್ಯಕ್ತಿಗಳ ಬರ್ಬರ ಹತ್ಯೆ,ಹಾಗೂ ಮೃತದೇಹಗಳನ್ನು ಕಾರಿನೊಳಗೆ ಹಾಕಿ ಸುಟ್ಟು ಹಾಕಿರುವ ಅಮಾನುಷ ಕೃತ್ಯ ದಿನಾಂಕ 22/03/2024 ರಂದು ತುಮಕೂರು ಜಿಲ್ಲೆಯ ಕೋರಾ ಪೋಲೀಸ್ ಠಾಣೆಯ ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ ನಡೆದಿರುತ್ತದೆ. ಈ ಘಟನೆಯನ್ನು ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ತೀವವಾಗಿ ಖಂಡಿಸುತ್ತದೆ.
ದಿನಾಂಕ 22/03/2024 ರಂದು ಬೆಳಕಿಗೆ ಬಂದಂತೆ ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆಯಲ್ಲಿ ಎಸ್ಸೆಸ್ ಕಾರೊಂದು ಸುಟ್ಟ ಸ್ವಿಯಲ್ಲಿ ಕಂಡು ಬಂದಿದ್ದು, ಅದರ ಡಿಕ್ಕಿಯಲ್ಲಿ 2 ಮೃತದೇಹಗಳು ಹಾಗೂ ಮದ್ಯ ಸೀಟಿನಲ್ಲಿ ಒಂದು ಮೃತದೇಹ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಕಂಡು ಬಂದಿದನ್ನು ಗಮನಿಸಿ ವಿಚಾರಿಸಲಾಗಿ, ಸದ್ರಿ ಕಾರನ್ನು ಮದ್ದಡ್ಕ ನಿವಾಸಿ ಇಸಾಕ್ ರವರು ಮಾಲೀಕರಿಂದ ಸುಮಾರು 13 ದಿನಗಳ ಹಿಂದೆ ಪಡೆದುಕೊಂಡು ಹೋಗಿದ್ದು ಸದ್ರಿ ಕಾರಿನಲ್ಲಿ ಕಂಡ ಸುಟ್ಟು ಕರಕಲಾದ ಮೃತದೇಹಗಳು ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಶಾಹುಲ್ ಹಮೀದ್(45 ವರ್ಷ), ಮದ್ದಡ್ಕ ನಿವಾಸಿ ಇಸಾಕ್ ( 54 ವರ್ಷ) ಮತ್ತು ಶಿರ್ಲಾಲು ನಿವಾಸಿ ಸಿದ್ದೀಕ್ ( 34 ವರ್ಷ) ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೋಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಗಳಾದ 1. ತುಮಕೂರಿನ ಶ್ರೀರಾ ಗೇಟ್ ಬಳಿ ನಿವಾಸಿ ಪಾತರಾಜು @ ರಾಜು @ ರಾಜಗುರು@ ಕುಮಾರ್, ಬಿನ್ ಸಿದ್ದಲಿಂಗಪ್ಪ ಹಾಗೂ 2. ಸತ್ಯಮಂಗಲದ ವಾಸಿ ಗಂಗರಾಜು ಬಿನ್ ಹನುಮಂತರಾಯಪ್ಪ ಎಂಬವರನ್ನು ಬಂಧಿಸಿ ವಿಚಾರಿಸಲಾಗಿ, ಕೊಲೆಗೀಡಾದ ದುರ್ದೈವಿಗಳನ್ನು ನಿಧಿ / ಬಂಗಾರ ಕೊಡಿಸುವ ಆಸೆಗೆ ಬೀಳಿಸಿದ ಪಾತರಾಜು @ ಕುಮಾರನು, ಸುಮಾರು 6 ಲಕ್ಷ ಹಣ ಪಡೆದು, ಮರಳಿ ನೀಡದೇ ಇದ್ದರೆ ಪೋಲೀಸ್ ಕೇಸು ದಾಖಲಿಸಿರುವೂದಾಗಿ ಬೆದರಿಕೆ ಹಾಕಿದ ಕಾರಣ ಕೊಲೆ ಮಾಡುವ ಉದ್ದೇಶದಿಂದ, ತನ್ನ ಪರಿಚಯದ ಸತ್ಯಮಂಗಳದ ನಿವಾಸಿ ಗಂಗರಾಜು ಮತ್ತು ಆತನ 6 ಜನ ಸಹಚಚರಾದ 1. ಪುಟ್ಟ ಸ್ವಾಮಯ್ಯನ ಪಾಳ್ಯದ ಮಧುಸೂದನ್ (24 ವರ್ಷ), 2. ಸಂತೇಪೇಟೆಯ ನವೀನ್ (24 ವರ್ಷ), 3. ವೆಂಕಟೇಶಪುರದ ಕೃಷ್ಣ (22 ವರ್ಷ), 4. ಹೊಂಬಯ್ಯನ ಪಾಳ್ಯದ ಗಣೇಶ (19 ವರ್ಷ),5, ನಾಗಣ್ಣ ಪಾಳ್ಯದ ಕಿರಣ್ (23 ವರ್ಷ), 6. ಕಾಳಿದಾಸನಗರದ ಸೈಮನ್,18 ವರ್ಷ) ಸೇರಿಕೊಂಡು 3 ಜನರನ್ನು ಕೊಲೆ ಮಾಡಿದರೆ 3 ಕೆ.ಜಿ ಚಿನ್ನವನ್ನು ಕೊಡುವೂದಾಗಿ ಆಮಿಷ ಒಡ್ಡಿ, ಹಿಂದಿನ ದಿನ ಸಂಚು ರೂಪಿಸಿ ದಿನಾಂಕ 22/03/2024 ರ ಮದ್ಯರಾತ್ರಿ 12 ಸುಮಾರಿಗೆ ಮೃತರನ್ನು ಚಿನ್ನ ಕೊಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪ ಕರೆಸಿಕೊಂಡು, ಅವರುಗಳನ್ನು ಮಚ್ಚು, ಲಾಂಗ್, ಮತ್ತು ಡ್ರಾಗನ್ ಜಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೃತರು ಹೋಗಿದ್ದ ಕಾರಿನ ಡಿಕ್ಕಿ ಮತ್ತು ಮದ್‌ಯ ಸೀಟಿಗೆ ತುಂಬಿಸಿಕೊಂಡು ಕುಚ್ಚಂಗಿಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ ನಾಶಪಡಿಸುವ ಉದ್ದೇಶದಿಂದ ಕಾರಿನೊಂದಿಗೆ ಸುಟ್ಟಿದ್ದಾಗಿ ಪೋಲೀಸ್ ತನಿಖೆಯಿಂದ ತಿಳಿದುಬಂದಿರುತ್ತದೆ. ಇದೊಂದು ಸಮಾಜವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿದ್ದು, ಈ ಪ್ರಕರಣವನ್ನು ವಿಶೇಷ ಪ್ರಕರಣವನ್ನಾಗಿ ಸರಕಾರ ಪರಿಗಣಿಸುವಂತೆ ಆಗ್ರಹಿಸುವ ಸಲುವಾಗಿ ಈ ಪತ್ರಿಕಾ ಪ್ರಕಟನೆ/ಸುದ್ದಿಗೋಷ್ಟಿ ಕರೆಯಲಾಗಿದೆ.
ಈ ಘಟನೆಯಲ್ಲಿ ಹತ್ಯೆಗೀಡಾಗಿ ಅಮಾನುಷವಾಗಿ ಸುಟ್ಟು ಕರಕಲಾದ ಶಾಹುಲ್ ಹಮೀದ್ ಎಂಬವರು ಬಡ ಜೀವಿಯಾಗಿದ್ದು, ಸಮಾಜಮುಖಿ ಕಾರ್ಯಗಳಿಗಾಗಿ ಸದಾ ತನ್ನನ್ನು ತೊಡಗಿಸಿಕೊಂಡು, ಸಮಾಜ ಸೇವನಾಗಿ, ಸಂಘ ಸಂಸ್ಥೆಗಳನ್ನು ತೊಡಗಿಸಿಕೊಂಡು ಪ್ರಸ್ತುತ ಮಸೀದಿ ಕಮಿಟಿ ಸದಸ್ಯರಾಗಿಯೂ, ಕಾರ್ಯದರ್ಶಿಯಾಗಿಯೂ ಕೆಲಸ ಮಾಡುತ್ತಿರುವ ಸಜ್ಜನ ವ್ಯಕ್ತಿಯಾಗಿರುತ್ತಾರೆ. ಹತ್ತು ಜನರಿಗೆ ಮಾರ್ಗದರ್ಶಿಯಾಗಿರುವ ಶಾಹುಲ್ ಹಮೀದ್ ರವರು ಅಮಾನುಷವಾಗಿ ನಿಧಿ ಆಮಿಷಕ್ಕೆ ಒಳಪಟ್ಟು ಹತ್ಯೆ ಆಗಿರುವೂದು ನಂಬಲಸಾದ್ಯವಾಗಿದ್ದು ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದ್ದು, ಅದೇ ರೀತಿ ಇಸಾಕ್ ತಾನೊಬ್ಬ ವಿದೇಶಿ ಕೆಲಸದಲ್ಲಿದ್ದು ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದು, ತನ್ನ ಮನೆ ಮಾರಿ ಹಾಗೂ ಇರುವ ಮನೆಗೆ ಸಾಲ ಮಾಡಿ ಹಾಗೂ ಮಗಳ ಚಿನ್ನಾಭರಣ ಒತ್ತೆ ಇಟ್ಟು ಲಕ್ಷಾಂತರ ಹಣ ಕಳೆದುಕೊಂಡು ಅಮಾನುಷ ಕೃತ್ಯಕ್ಕೆ ಬಲಿಯಾಗಿದ್ದು ಹಾಗೂ ಫೂಟ್ ವೇರ್ ಅಂಗಡಿ ಕೆಲಸಗಾರನಾಗಿ, ಕಳೆದ ವರ್ಷ ತನ್ನ ಮಗು ಹಾಗೂ ಮಡದಿಯನ್ನು ಅಪಘಾತದಲ್ಲಿ ಕಳೆದುಕೊಂಡು ಒಬ್ಬ ಮಗನನ್ನೂ ಹೊಂದಿರು ಸಿದ್ದೀಕ್ ಈ ಜಾಲದಲ್ಲಿ ಆಮಿಷಕ್ಕೆ ಒಳಗಾಗಿ ಹಣ ಹಾಗೂ ಪ್ರಾಣವನ್ನು ಕಳೆದುಕೊಂಡಿರುವ ಸಂಗತಿಯು ಅಚ್ಚರಿಯಾಗಿದ್ದು, ಇದರ ಹಿಂದೆ ಯಾವುದೋ ರೀತಿಯ ಒಂದು ಜಾಲವಿದು, ಅಮಾಯಕರನ್ನೇ ಗುರಿಯಾಗಿಸಿ ಈ ಜಾಲದಲ್ಲಿ ಸಿಲುಕಿಸಿದ್ದು, ತಮ್ಮ ಶಕ್ತಿ ಮೀರಿ, ಯಾವುದೇ ಅಗತ್ಯ ಇಲ್ಲದಿದ್ದರೂ ಈ ಜಾಲದಲ್ಲಿ ಸಿಲುಕಿರುವ ಮೂರೂ ಅಮಾಯಕರಿಗೂ ಸೂಕ್ತ ಕಾನೂನು ಜಯ ಹಾಗೂ ಪರಿಹಾರ ಸಿಗಲು ಅರ್ಹರಾಗಿರುತ್ತಾರೆ.
ಆಗ್ರಹ:
1.ಮಂಗಳೂರು ಮುಸ್ಲಿಂ ಯೂತ್ ಕೌನ್ಸಿಲ್ (ರಿ) ಬೆಂಗಳೂರು ಈ ಘಟನೆಯನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವಂತೆ ಹಾಗೂ ಈ ಪ್ರಕರಣ ಹಿಂದಿರುವ ದೊಡ್ಡ ಜಾಲವನ್ನು ಪತ್ತೆ ಹಚ್ಚುವ ಸಲುವಾಗಿ ಪ್ರಕರಣವನ್ನು ಉನ್ನತ ಮಟ್ಟದ ತನಿಖಾ ಸಂಸ್ಥೆಗಳಾದ ಸಿ.ಒ.ಡಿ ಗೆ ವಹಿಸಬೇಕು,
2. ಈ ಒಂದು ಘಟನೆಯು ಅಮಾನುಷವಾಗಿದ್ದು, ನಾಗರಿಕ ಸಮಾಜವು ತಲೆ ತಗ್ಗಿಸುವಂತಹ ಹೀನ ಕುಕೃತ್ಯ ಇದಾಗಿದ್ದು, ನಿಧಿ, ಬಂಗಾರದ ಆಮಿಷ ಒಡ್ಡಿ ಮೂರು ಅಮಾಯಕ ಜೀವಗಳನ್ನು ಹತ್ಯೆಗೈದು ಗುರುತು ಪರಿಚಯ ಸಿಗದ ರೀತಿಯಲ್ಲಿ ಕ್ರೂರವಾಗಿ ಸುಟ್ಟು ಹಾಕಿ ಮೃತ ದೇಹವು ಸಂಪೂರ್ಣ ಬೂದಿ ಆಗುವಂತೆ ಮಾಡಿದ ಈ ಕೃತ್ಯದಲ್ಲಿ ಮಡಿದ ಬಡ ಜೀವಗಳ ಕಟುಂಬ/ಮಕ್ಕಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು.
3. ತನಿಖಾಧಿಕಾರಿಗಳ ಮಾಹಿತಿಯಂತೆ ಆರೋಪಿತನು ಅಮಾಯಕ ಮೃತರಿಂದ ನಿಧಿ ಹುಡುಕಿ ಕೊಡುವ ಸಲುವಾಗಿ ರೂ 600,000/- ಹಣವನ್ನು ಪಡಕೊಂಡ ಬಗ್ಗೆ ಆರೋಪಿ ಸ್ವ ಇಚ್ಛಾ ಹೇಳಿಕೆಯಲ್ಲಿ ಒಪ್ಪಿಕೊಂಡಿದ್ದಾಗಿ ತಿಳಿದು ಬಂದಿದ್ದು, ಆದರೆ ಈ ಮೊತ್ತವು 50,00,000/- (ರೂಪಾಯಿ ಐವತ್ತು ಲಕ್ಷ) ಕ್ಕೂ ಹೆಚ್ಚಿನ ಹಣವನ್ನು ಆರೋಪಿತರು ಲೂಟಿ ಮಾಡಿದ ಬಗ್ಗೆ ಸಂಶಯ ಇದ್ದು. ಮೃತ ದುರ್ದೈವಿ ಇಸಾಕ್ ಒಬ್ಬರೇ ರೂಪಾಯಿ 35,00,000/- ಹಣವನ್ನು ಮನೆ ಸಾಲ ಮತ್ತು ಒಡವೆ ಒತ್ತೆ ಇಟ್ಟು ತೆಗೆದುಕೊಂಡ ಹೋದ ಬಗ್ಗೆ ಮೃತ ಇಸಾಕ್ ಪತ್ನಿ ಹೇಳಿಕೆ ನೀಡಿದ್ದು, ಈ ಬಗ್ಗೆ ಸರಿಯಾದ ತನಿಖೆ ನಡೆದರೆ ಮಾತ್ರ ಇನ್ನಷ್ಟು ಸತ್ಯ ಹೊರ ಬೀಳಲಿದ್ದು, ಸರಕಾರವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸುತ್ತಿದ್ದೇವೆ. ಹಾಗೂ ಹಣ ಆಸ್ತಿ ಕಳೆದುಕೊಂಡ ಮೃತರಿಗೆ ಸೂಕ್ತ ಪರಿಹಾರ ಒದಗಿಸಬೇಕು.
4. ಆರೋಪಿಗಳೆಲ್ಲರನ್ನು ಶೀಘ್ರು ಬಂಧಿಸಿ, ಕೃತ್ಯಕ್ಕೂ ಮೊದಲು ಆರೋಪಿತರು ನಡೆಸಿದ ಮೋಸ, ವಂಚನೆ, ಹಾಗೂ ಮೃತರ ಮನೆಗಳಿಗೆ ಬೇಟಿ ನೀಡಿ ಮೃತರೊಂದಿಗೆ ನಡೆಸಿದ ಸಂಬಂಧದ ಕುರಿತು ಹಾಗೂ ಆರೋಪಿತರ ಜಾಲದ ಬೇರುಗಳ ಬಗ್ಗೆ ಸೂಕ್ತ ತನಿಖೆ ಆಗಬೇಕು. ಕೃತ್ಯದಲ್ಲಿ ಭಾಗಿ ಆದವರೂ, ಆರೋಪಿತರಿಗೆ ಸಹಕರಿಸದವರೂ, ಹಾಗೂ ಅಮಾಯಕ 3 ಜನರನ್ನು ನಂಬಿಸಿ ಈ ನಿಧಿ,ಆಸೆಯ ಜಾಲಕ್ಕೆ ಪರಿಚಯಿಸಿದ ವ್ಯಕ್ತತಗಳ ಬಗ್ಗೆಯೂ ತನಿಖೆ ಆಗಬೇಕು, ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುಬೇಕು. ಈ ಕೃತ್ಯದ ಹಿಂದಿರುವ ಸಂಪೂರ್ಣ ತಂಡವನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದೇವೆ.
5. ತುಮಕೂರು ಭಾಗಗಳಲ್ಲಿ ಕಳೆದ ಹತ್ತು ವರ್ಷಗಳಿಂದಲೂ ಈ ರೀತಿ ಜಾಲದ ಮೋಸದಿಂದಾಗಿ ಅಮಾಯಕರು, ಹಣ ಮತ್ತು ಪ್ರಾಣವನ್ನು ಕಳೆದುಕೊಂಡ ಬಗ್ಗೆ ಕೇಳಿ ಬರುತ್ತಿದ್ದು, ಇದೊಂದು ಪೋಲೀಸ್ ಇಲಾಖೆ ಮತ್ತು ಸರಕಾರದ ವೈಫಲ್ಯವಾಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖಾ ತಂಡವನ್ನು ರಚಿಸಿ ಇಂತಹಾ ಜಾಲಗಳ ಹಿಂದಿರುವ ಎಲ್ಲಾ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ಸೂಕ್ತ ಜಾಗೃತಿ ಕ್ರಮ ಕೈಗೊಳ್ಳಬೇಕು ಸಮಿತಿಯ ವತಿಯಿಂದ ಆಗ್ರಹಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ,ಅಬೂಬಕ್ಕರ್ ಹೆಚ್ ( ಅಧ್ಯಕ್ಷರು, ಎಮ್ ಎಮ್. ವೈ. ಸಿ),ಜುನೈದ್ ( ಪ್ರಧಾನ ಕಾರ್ಯದರ್ಶಿ),ಸಲೀಂ ಸಿ.ಎಮ್ ( ಅಧ್ಯಕ್ಷರು, ಮೆಜೆಸ್ಟಿಕ್ ವಲಯ),ಸಮದ್ ಮದ್ದಡ್ಕ, ( ನಲ್ ಏರಿಯಾ ಲೀಡರ್),ಬಶೀರ್ ಪುಣಚ( ಖಜಾಂಜಿ),ಉಬೈದುಲ್ಲಾ ( ವಿಜಯನಗರ ವಲಯ),ಶಬೀರ್ ಉಜಿರೆ ಉದ್ಯಮಿ ಬೆಂಗಳೂರು.ಉಪಸ್ಥಿತರಿದ್ದರು.
City Today News 9341997936
