
ಪಿ. ಮಣಿವಣ್ಣನ್, ಪದ್ಮನಾಭನ್ ಹಾಗೂ ಇತರರಿಂದ ದಲಿತರ ಸಂವಿಧಾನ ಬದ್ಧ ನಿಯಮಾವಳಿಗಳನ್ವಯ ಅಭಿವೃದ್ಧಿಗಾಗಿ ಬಳಕೆ ಮಾಡಬೇಕಿದ್ದ ಅನುದಾನವನ್ನು ಮೇ|| ಝೇಂಕಾರ್ ಅಡ್ವರ್ಟೈಸಿಂಗ್ ಸಂಸ್ಥೆಗೆ ಕಾನೂನು ಬಾಹೀರವಾಗಿ ನೀಡಿ ಸರ್ಕಾರಕ್ಕೆ ಮೋಸ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸುತ್ತಿರುವ ಬಗ್ಗೆ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಶಾಸನಬದ್ಧ ನಿಯಮಾವಳಿಗಳನ್ವಯ ಕ್ರಮಕೈಗೊಳ್ಳುವುದು ಇಲಾಖೆಯ ಆಧ್ಯಕರ್ತವ್ಯವಾಗಿರುತ್ತದೆ. ಆದರೆ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ದಲಿತರ ಅಭಿವೃದ್ಧಿಯ ಹೆಸರಿನಲ್ಲಿ ಲೂಟಿ ಮಾಡುವುದನ್ನೇ ಕರಗತ ಮಾಡಿಕೊಂಡಿರುವ ಇಲ್ಲಿನ ಕೆಲವು ಅಧಿಕಾರಿಗಳು, ಇಲ್ಲದ ಕಾರ್ಯಕ್ರಮಗಳನ್ನು ಇದೆ ಎಂಬಂತೆ ಬಿಂಬಿಸಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಸರ್ಕಾರಕ್ಕೆ ವಂಚಿಸಿ ದಲಿತರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿಯುತ್ತಿವೆ. ಇವರಿಗೆ ಹಿರಿಯ ಅಧಿಕಾರಿಗಳ ಕೃಪಾಕಟಾಕ್ಷವಿರುವುದು ಹಾಗೂ ಈ ಅಕ್ರಮದಲ್ಲಿ ಇವರುಗಳು ಭಾಗಿಯಾಗಿರುವುದು ಸಾಬೀತಾಗಿದೆ. ಇಲಾಖೆ ವ್ಯಾಪ್ತಿಗೆ ಬರುವ ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರ ಅಭಿವೃದ್ಧಿಯ ಚಟುವಟಿಕೆಗಳಿಗಾಗಿ ಮೀಸಲಿಟ್ಟ ಅನುದಾನದ ಮುಖಾಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನೆಪದಲ್ಲಿ ಈ ಪತ್ರದೊಂದಿಗೆ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿರವರಿಗೆ ರೂ. 54,935,042/- (ಐದು ಕೋಟಿ ನ–ತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ, ಅಲ್ಲದೆ ಯಾವುದೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳದೆ ಕೇವಲ ದಾಖಲಾತಿಗಳನ್ನು ಸಿದ್ಧಪಡಿಸಿ, ಹಣವನ್ನು ದುರುಪಯೋಗ ಮಾಡಿಕೊಂಡಿರುತ್ತಾರೆ. ಈ ಕಡತದ ನೋಟ್‌ಶೀಟ್‌ಗಳನ್ನು ಸಂಬಂಧಪಟ್ಟ ಅಧೀನ ಕಛೇರಿಯಿಂದ ಆರ್‌ಟಿಐನ ಮುಖಾಂತರ ಪಡೆದಿದ್ದು ನೋಟ್ 07 ರಲ್ಲಿ ರೂಪಾಣಿ ಎಂಬ ದ್ವಿ.ದ.ಸ ಅವರು ಬಹಳ ಸ್ಪಷ್ಟವಾಗಿ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿಯವರು ಸಲ್ಲಿಸಿದ ಬಿಲ್ಲು ಮೊತ್ತ ರೂ. 54,935,042/- (ಐದು ಕೋಟಿ ನಲ್ವತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಇದ್ದು ಕಾರ್ಯಾದೇಶ ಹಾಗೂ ಸರ್ಕಾರಿ ನಿಯಮದಂತೆ ಕೇವಲ ರೂ. 23,013,315/- (ಎರಡು ಕೋಟಿ ಮೂವತ್ತು ಲಕ್ಷ ಹದಿಮೂರು ಸಾವಿರದ ಮುನ್ನೂರ ಹದಿನೈದು ರೂಪಾಯಿಗಳು) ಮಾತ್ರ ನೀಡಬಹುದೆಂಬ ಷರಾವನ್ನು ಸಲ್ಲಿಸಿರುತ್ತಾರೆ.
ಅದಾಗ್ಯೂ ಈ ಪ್ರಕರಣದಲ್ಲಿ ಜಿ.ಜೆ.ಪದ್ಮನಾಭ್ (ಜನರಲ್ ಮ್ಯಾನೇಜರ್) ADEL ರವರು ತನ್ನ ಅದಾಗ್ಯೂ ಈ ಪ್ರಕರಣದಲ್ಲಿ ಜಿ.ಜೆ.ಪದ್ಮನಾಭ್ (ಜನರಲ್ ಮ್ಯಾನೇಜರ್) ADEL ರವರು ತನ್ನ ನೋಟ್ 12 ರಲ್ಲಿ ಈ ಬಗ್ಗೆ ಏನು ಅಭಿಪ್ರಾಯ ವ್ಯಕ್ತಪಡಿಸದೆ, ತನ್ನ ಮೇಲಾಧಿಕಾರಿಗಳಿಗೆ ರೂ. 54,935,042/- (ಐದು ಕೋಟಿ ನಲ್ಮತ್ತೊಂಬತ್ತು ಲಕ್ಷದ ಮೂವತ್ತೈದು ಸಾವಿರದ ನಲವತ್ತೆರೆಡು ರೂಗಳು) ಪಾವತಿಸಲು ಕ್ರಮ ತೆಗೆದುಕೊಂಡಿರುತ್ತಾರೆ. ಮುಂದುವರೆದು ನೋಟ್ 46 ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಮೇಲ್ಕಂಡಂತೆ ಝೇಂಕಾರ್ ಅಡ್ವರ್ಟೈಸಿಂಗ್ ಬೆಂಗಳೂರುರವರಿಗೆ ವಾರ್ತಾ ಇಲಾಖೆರವರ ಮುಖಾಂತರ ಅಥವಾ ಇವರ ಮೂಲಕ ಅಧಿಕೃತಗೊಂಡಿರುವ ಏಜೆನ್ಸಿಗೆ ಪರಿಶಿಷ್ಟರ ಅಭಿವೃದ್ಧಿಯ ಅನುದಾನ ಪಾವತಿಸುವಲ್ಲಿ ಶಾಸನಬದ್ಧ ನಿಯಮಾವಳಗಳನ್ನು ಅಳವಡಿಸಿಕೊಳ್ಳದೆ ಹಣ ಪಾವತಿಸಲು ಕ್ರಮಕೈಗೊಂಡಿರುವ ಬಗ್ಗೆ ಉಲ್ಲೇಖವಾಗಿರುತ್ತದೆ.
1. ಆದ್ದರಿಂದ ಈ ರೀತಿ ತರಾತುರಿಯಲ್ಲಿ ಹಣ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯ ಅನುಮೋದನೆ ಸಹ ಈ ದಾಖಲಾತಿಗಳಲ್ಲಿ ಉಲ್ಲೇಖಿತವಾಗಿರುವುದು ಕಂಡುಬಂದಿರುವುದಿಲ್ಲ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೇರವಾಗಿ ರೂ. 54,935,042/- ರೂ ಹಣವನ್ನು ಝೇಂಕಾರ್ ಅಡ್ವರ್ಟೈಸಿಂಗ್ ರವರಿಗೆ ನೀಡಿರುವುದು ಕಾನೂನು ಬಾಹೀರವಾಗಿರುತ್ತದೆ.
2. ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ನಿರವರು ನೀಡಿರುವ ಬಿಲ್ಲಿನ ರೂ. 54,935,042/- ನಿಗದಿಪಡಿಸಿದ ದರ ರೂ. 23,013,315/- ರೂ ವ್ಯತ್ಯಾಸ ರೂ. 31,921,727/- (ಮೂರು ಕೋಟಿ ಹತ್ತೊಂಬ್ಬತ್ತು ಲಕ್ಷ ಇಪ್ಪತ್ತೊಂದು ಸಾವಿರದ ಏಳು ನೂರ ಇಪ್ಪತ್ತೇಳು ರೂಪಾಯಿಗಳು) ರಷ್ಟು ಹಣವನ್ನು ನೇರವಾಗಿ ಸರ್ಕಾರಕ್ಕೆ ಮೋಸ ಮಾಡಿರಲಾಗಿರುತ್ತದೆ.
ಒಟ್ಟಾರೆ ಕಲ್ಯಾಣ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಹೆಸರಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯನ್ನು ಶಾಮೀಲಾಗಿಸಿಕೊಂಡು ಬಡ ದಲಿತರ ಕಲ್ಯಾಣ ಹೆಸರಿನಲ್ಲಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದು. ಈ ಹಣವನ್ನು ಇದೇ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾದ ಮೇಜರ್ ಮಣಿವಣ್ಣನ್ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಜಿ.ಜೆ.ಪದ್ಮನಾಭ ಹಾಗೂ ವಾರ್ತಾ ಇಲಾಖೆಯ ಭ್ರಷ್ಟ ಅಧಿಕಾರಿ ಮುರಳಿಧರ್ ಹಾಗೂ ಇತರರಿಂದ ಹಣವನ್ನು ಮರುವಸೂಲು ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಂಡು ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿಯವರ ಮೇಲೆ ಸಹ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುಲು ಈ ಪತ್ರಿಕಾಗೋಷ್ಠಿಯ ಮುಖಾಂತರ ಒತ್ತಾಯ ಮಾಡುವುದರೊಂದಿಗೆ, ಈ ಹಗರಣಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ಪ್ರಕರಣ ತನಿಖೆಯನ್ನು ಸರ್ಕಾರದ ಹಿರಿಯ ಐ.ಎ.ಎಸ್ ಅಧಿಕಾರಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸುವುದರೊಂದಿಗೆ ತನಿಖೆಯನ್ನು ರಿಟೈರ್ಡ್ ಜಡ್ಜ್ ಅಥವಾ ಹಾಲಿ ಐ.ಪಿ.ಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ತಂಡ ರಚಿಸಿ ತನಿಖೆ ನಡೆದರೆ ಮಾತ್ರ ಈ ಪ್ರಕರಣವು ಸೇರಿದಂತೆ, ಇವರ ಅಧಿಕಾರ ವ್ಯಾಪ್ತಿಯಲ್ಲಿ ನಡೆದಿರುವ ದಲಿತರ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅವ್ಯವಹಾರ ಆಗಿರುವುದು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಪ್ರಕರಣದಲ್ಲಿ ಆರೋಪಿತರು ಪ್ರಭಾವಶಾಲಿಗಳಾಗಿದ್ದು ಆರೋಪಿತರು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸುವ ಸಾಧ್ಯತೆಗಳಿರುವುದರಿಂದ ಕೂಡಲೆ ಪ್ರಕರಣದಲ್ಲಿ ಭಾಗಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಾಜ್ಯದ ಎಲ್ಲಾ ಜಿಲ್ಲಾ ವ್ಯವಸ್ಥಾಪಕರು ಸೇರಿದಂತೆ ನಿಗಮದ ಜನರಲ್ ಮ್ಯಾನೇಜರ್ ಜಿ.ಜಿ ಪದ್ಮನಾಭ್ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಇವರನ್ನು ಅಮಾನತ್ತು ಮಾಡುವುದರೊಂದಿಗೆ ಝೇಂಕಾರ್ ಅಡ್ವರ್ಟೈಸಿಂಗ್ ಮುಖಾಂತರ ಕಾನೂನು ಬಾಹೀರವಾಗಿ ಲೂಟಿ ಹೊಡೆದಿರುವ ಹಣವನ್ನು ಸರ್ಕಾರ ಕೂಡಲೇ ಮುಟ್ಟುಗೋಲು ಹಾಕಿ ಝೇಂಕಾರ್ ಅಡ್ವರ್ಟೈಸಿಂಗ್ ಏಜೆನ್ಸಿ ಇವರ ವಿರುದ್ಧ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಹಾಗೂ ಸುಪ್ರೀಂ ಕೋರ್ಟ್ ತಿದ್ದುಪಡಿ 2014 ಮತ್ತು 2016 ರರಂತೆ ಇತರ ಭಾರತೀಯ ದಂಡ ಸಂಹಿತೆ ಪ್ರಕರಣ ಪ್ರಕ್ರಿಯೆ ಯಡಿ ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಸುತ್ತೋಲೆ ಸಂಖ್ಯೆ: ಎಸ್‌ಡಬ್ಲ್ಯೂಡಿ- ಎಸ್‌ಸಿಎಸ್‌ಪಿ01(ಓಟಿಹೆಚ್)/15/2021 ರಂತೆ ದಿನಾಂಕ: 01-12-2022 ರಂತೆ ಕ್ರಮ ವಹಿಸಲು ಭೀಮಪುತ್ರಿ ಬ್ರಿಗೇಡ್ ರಾಜ್ಯ ಸಮಿತಿ ಮತ್ತು ದಲಿತ ಸಂಘಗಳ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಒತ್ತಾಯಿಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ, ಭೀಮಪುತ್ರಿ ರೇವತಿರಾಜ್ ರಾಜ್ಯಾಧ್ಯಕ್ಷರು- ಭೀಮಪುತ್ರಿ ಬ್ರಿಗೇಡ್, ಡಾ.ಸಿ .ಎಸ್.ರಘು,ರಾಜ್ಯಾಧ್ಯಕ್ಷರು- ಕರ್ನಾಟಕ ದಲಿತ ಸಂಘರ್ಷ ಸಮಿತಿ, ಎಂ. ಎಂ.ರಾಜು ರಾಜ್ಯಾಧ್ಯಕ್ಷರು-ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ,ಎನ್. ಅನಂತ್(ವಕೀಲರು) ರಾಜ್ಯಾಧ್ಯಕ್ಷರು -ಜೈಭೀಮ್ ಸೇನೆ,ಚೇತನ್ ಕುಮಾರ್ ರಾಜ್ಯಾಧ್ಯಕ್ಷರು-ಬಹುಜನ ಭಾಗ್ಯವಿಧಾತ ವೇದಿಕೆ,ದಿವಿಲ್ ಕುಮಾರ್ ರಾಜ್ಯಾಧ್ಯಕ್ಷರು-ಭಾರತೀಯ ಬುಡಕಟ್ಟು ಬ್ರಿಗೇಡ್,ಎಂ.ಶಂಕರ್ ರಾಜ್ಯಾಧ್ಯಕ್ಷರು- ಅಖಿಲ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಮತ್ತು ಮೋಹನ್ ಕುಮಾರ್(ವಕೀಲರು) ರಾಜ್ಯಾಧ್ಯಕ್ಷರು ಹೊಸಹಳ್ಳಿ ಭೋವಿ ಅಭಿವೃದ್ಧಿ ಸಂಘ, ಉಪಸ್ಥಿತರಿದ್ದರು.
City Today News 9341997936
