ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ

ಕರ್ನಾಟಕ ರಾಜ್ಯದ ಭ್ರಷ್ಟಾಚಾರಗಳ ರೂವಾರಿಯಾದ 420 ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಬಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ ನೊಂದ ಅಮಾಯಕರಿಗೆ ನ್ಯಾಯ ಕೊಡಲು ಕೋರಿ ಕರೆದಿರುವ ಪತ್ರಿಕಾಗೋಷ್ಠಿ

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಭ್ರಷ್ಟಾಚಾರಗಳ ರೂವಾರಿಯಾದ 420 ಅಶ್ವಿನ್‌ರಾವ್ ಮತ್ತು ಶಿವಾಜಿನಗರ ಹಾಗೂ ಆಂಧ್ರಪ್ರದೇಶದ ನಲ್ಲೂರು ಗ್ರಾಮದ ಸೈಲೆಂಟ್ ಕಿಲ್ಲರ್ ಹಾಗೂ ಕರೀಂಲಾಲ್ ತೆಲಗಿಯ ಶಿಷ್ಯನೆಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುವ 840 ಕಲೀಲ್ ಹಾಗೂ ತಮಿಳುನಾಡಿನ 420 ಜಯರಾಜ್ ಇವರ ಮೇಲೆ 1400 ಪ್ರಕರಣಗಳು ದಾಖಲಾಗಿದ್ದು 22000 ಜನರಿಗೆ ವಂಚನೆ ಮಾಡಿರುವ ಈ 420 ಗಳನ್ನು ಕೂಡಲೇ ಬಂಧಿಸಿ ನೊಂದ ಆಮಾಯಕರಿಗೆ ನ್ಯಾಯ ಕೊಡಲು ಕೋರಿ ಪತ್ರಿಕಾಗೋಷ್ಠಿಯನ್ನು ಕರೆದಿರುತ್ತೇವೆ. ಕಾರಣವೇನೆಂದರೆ, ಭಾರತ ದೇಶಕ್ಕೆ ಸ್ವತಂತ್ರ ಬಂದು 75 ವರ್ಷಗಳು ಕಳೆಯುತ್ತಾ ಬಂದರೂ, ಸಂವಿಧಾನ ಅರ್ಪಣೆಯಾಗಿ 75 ವರ್ಷಗಳು ಕಳೆಯುತ್ತಾ ಬಂದರೂ ಸಹ ಈ ದೇಶದಲ್ಲಿ ಭ್ರಷ್ಟಾಚಾರ ಮಾತ್ರ ನಿಲ್ಲಲೇ ಇಲ್ಲ. ಕಾರಣವೇನೆಂದರೆ ಕಾನೂನನ್ನೇ ಸರಿಯಾಗಿ ಪಾಲಿಸದಂತಹ ಅಧಿಕಾರಿಗಳಿಂದ ಸಾರ್ವಜನಿಕರಿಗೆ ತುಂಬಾ ನೋವಾಗಿರುತ್ತದೆ. ಹಾಗೆಯೇ ಅಧಿಕಾರಿಗಳು ಕಾನೂನನ್ನು ಸರಿಯಾಗಿ ಹತೋಟಿಗೆ ತೆಗೆದುಕೊಳ್ಳದೇ ಇರುವುದೇ ಆಮಾಯಕರಿಗೆ ಆಗುತ್ತಿರುವ ಅನಾನುಕೂಲ, ಉದಾಹರಣೆಗೆ ಅಶ್ವಿನ್‌ರಾವ್ ರವರ ಮೇಲೆ ನೊಂದ ಸಾರ್ವಜನಿಕರು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ 2021-22 ನೇ ಸಾಲಿನಲ್ಲಿ ದೂರು ನೀಡಿದರೂ ಸಹ ದೂರನ್ನು ತೆಗೆದುಕೊಳ್ಳದೆ ಸಾರ್ವಜನಿಕರಿಗೆ ಅನಾನುಕೂಲ ಮಾಡಿರುವುದೇ ದುರಾದೃಷ್ಟಕರವಾಗಿದೆ ಅತ್ತಿರುತ್ತದೆ. ಪಕ್ಷದಿಂದ್ ಅಶ್ವಿನ್ ರಾವ್ 22000 ರ ಮತ್ತು ಸಾರ್ವಜನಿರು ಇದನ್ನೇ ಮತ್ತೆ ಮುಂದುವರೆದ ಹಾದಿಯಲ್ಲಿ ಅಶ್ವಿನ್‌ ರಾವ್ ಮತ್ತು ಜೈರಾಜ್, ಕಲೀಲ್ ಈ ಮೂರೂ ಜನ ಸೇರಿಕೊಂಡು ಮೊದಲನೇ ಬಾರಿಗೆ ಆಂಧ್ರದ ನೆಲ್ಲೂರು ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಊಹಾಪೋಹಗಳನ್ನು ಹಬ್ಬಿಸಿ ಸಾರ್ವಜನಿಕ ಸಭೆಗಳನ್ನು ಮಾಡಿ, ಸಾರ್ವಜನಿಕರಿಗೆ ಸುಳ್ಳು ಆಶ್ವಾಸನೆಗಳ ಮೂಲಕ ಸಾರ್ವಜನಿಕರಿ ಮುಂದೆಯೇ ನೀವು 2 ಲಕ್ಷ ಮೊದಲನೇ ಕಂತಿನಲ್ಲಿ ನಮಗೆ ನೀಡಿದರೆ ನಿಮಗೆ 2 ತಿಂಗಳಲ್ಲಿ 20 ಲಕ್ಷ ಕೊಡುತ್ತೇವೆ. ನೀವು 20 ಲಕ್ಷ ನೀಡಿದರೆ 2 ತಿಂಗಳಲ್ಲಿ 1 ಕೋಟಿ ನೀಡುತ್ತೇವೆ. ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಇದರಲ್ಲಿ ಕೆಲವು ಸಾರ್ವಜನಿರನ್ನು ಪರಿಚಯ ಮಾಡಿಕೊಂಡು ಜನ ನಂಬುವ ಹಾಗೆ ಜನರಿಂದ ಹಣವನ್ನು ತೆಗೆದುಕೊಂಡು ಇವರು ತೆಗೆದುಕೊಂಡ ಹಣದಲ್ಲಿ ಒಬ್ಬ ಇಬ್ಬರಿಗೆ ಮಾತ್ರ ಹಣವನ್ನು ನೀಡಿ ಹಣ ಪಡೆದುಕೊಂಡು ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಸುಳ್ಳು ಆಶ್ವಾಸನಗಳನ್ನು ಬಹಿರಂಗಪಡಿಸಿ ಜನರು ನಂಬುವ ಹಾಗೆ ಅವರಿ ಮನೆಗಳಿಗೂ ಸಹ ಭೇಟಿ ಮಾಡಿ ಸುಆರು 500 ಕೋಟಿಗಿಂತ ಹೆಚ್ಚಾಗಿ ನಲ್ಲೂರು ಜಿಲ್ಲೆಯಲ್ಲೇ ಮೊದಲನೇ ಬಾರಿಗೆ ವಂಚನೆ ಮಾಡಿ ಎರಡನೇ ಬಾರಿ ಪಾಂಡಿಚೇರಿಗೆ ಜಂಪ್ ಮಾಡಿ ನಂತರ ತಮಿಳುನಾಡಿಗೆ ಬಂದು ಅನಂತರ ಗೋವಾಕ್ಕೆ ಜಿಗಿದು ಮತ್ತೆ ಕರ್ನಾಟಕಕ್ಕೆ ಬಂದು ಯಥಾಸ್ಥಿತಿಯನ್ನು ಮುಂದುವರೆಸಿ ಸಾರ್ವಜನಿಕರಿಗೆ ಸುಮಾರು ತಿಂಗಳು ಕಾಣದೆ. ತಪ್ಪಿಸಿಕೊಂಡು ಓಡಾಡಿಕೊಂಡು ಇರುವಂತಹ ಸಂದರ್ಭದಲ್ಲಿ ದಿನಾಂಕ 6/3/2024 ರಂದು ಬಾಣಸವಾಡಿ ಸಮೀಪದ ಅವರ ಮನೆಯ ಬಳಿಯಲ್ಲಿಯೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಲೆಂದು ನೊಂದ ಅಮಾಯಕರು ಅವನನ್ನು ಹಿಡಿದುಕೊಂಡ ಕೂಡಲೇ ಅವನೇ ಸಾರ್ವಜನಿಕರಿಗೆ ಸುಮಾರು 40 ಕೋಟಿಗಳಷ್ಟು ಬೆಲೆ ಬಾಳುವ ನಕಲಿ ಚೆಕ್‌ಗಳನ್ನು ನೀಡಿ ನಂತರ ಅವನೇ ಸಾರ್ವಜನಿಕರನ್ನು ಯಾಮಾರಿಸಿ ಕಂಟ್ರೋಲ್ ರೂಮ್‌ ಗೆ ಕರೆ ಮಾಡಿ ನಮ್ಮನ್ನು ಕಿಡ್ಯಾಪ್ ಮಾಡುತ್ತಿದ್ದಾರೆ. ಯಾರೋ ಅಪರಿಚಿತರು ಎಂದು ಹೇಳಿದ ಮೇರೆಗೆ ಬಾಣಸವಾಡಿ ಸಮೀಪದ ಕುಳ್ಳಪ್ಪ ಸರ್ಕಲ್‌ನಲ್ಲಿ ಚರ್ಚೆ ಮಾಡುತ್ತಿದ್ದ ಆಶ್ವಿನ್‌ ರಾವ್ ಹಾಗೂ ನೊಂದ ಆಮಾಯಕರನ್ನು ಪೊಲೀಸರು ಕರೆದುಕೊಂಡು ಬಂದು ಠಾಣೆಯಲ್ಲಿಯೇ ಕೂಡಿ ಹಾಕಿ, ಅಮಾಯಕರ ಮೇಲೆ ಕ್ರೈಂ ನಂ. 166/2024 ರಂತೆ ಸುಮಾರು 7 ರಿಂದ 15 ಮಂದಿ ಮೇಲೆ ದೂರನ್ನು ದಾಖಲಿಸಿದ ಮೇಲೆ ಇದನ್ನು ಪರಿಶೀಲಿಸಿದ ನಂತರ ಅಶ್ವಿನ್‌ ರಾವ್ ನೀಡಿರುವ ಸುಳ್ಳು ಹೇಳಿಕೆಯಿಂದ ದೂರು ದಾಖಲಾಗಿರುವುದು ಕಂಡು ಬಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿ ಮಾಡಿ ನೊಂದ ಅಮಾಯಕರನ್ನು ಠಾಣೆಯಿಂದ ಬಿಡಿಸಿ ಪುನಃ ಠಾಣಾಧಿಕಾರಿಗಳು ಕರೆದ ನಂತರ ಠಾಣೆಗೆ ಬರುವ ಹಾಗೆ ಸಹಿಗಳನ್ನು ಸುಮಾರು 7 ಮಂದಿ ಕಡೆಯಿಂದ ಬರೆಯಿಸಿಕೊಂಡು ದಿನಾಂಕ 7/3/2024 ರಂದು ನೊಂದ ಅಮಾಯಕರನ್ನು ಮನೆಗಳಿಗೆ ಕಳುಹಿಸಿರುತ್ತಾರೆ.

ನಂತರ ಠಾಣಾಧಿಕಾರಿಗಳು ನೊಂದ ಅಮಾಯಕರುಗಳ ಕರೆ ಮಾಡಿ ನೀವು ಠಾಣೆಗೆ ಬನ್ನಿ ಮತ್ತು ನೀವು ತೆಗೆದುಕೊಂಡಿರುವ ಚೆಕ್‌ಗಳನ್ನು ತೆಗೆದುಕೊಂಡು ಬನ್ನಿ ಎಂದು ಸುಮಾರು ಬಾರಿ ಎಲ್ಲಾ ಅಮಾಯಕರಿಗೂ ಠಾಣೆಯಿಂದ ಕರೆಗಳು ಬಂದ ಕೂಡಲೇ ನೊಂದ ಆಮಾಯಕರು ಕರೆಗಳನ್ನು ಸ್ವೀಕರಿಸದೇ ಇದ್ದ ಹಿನ್ನಲೆಯಲ್ಲಿ ಕೆಲವು ದಲಿತ ಮುಖಂಡರಿಗೂ ಕರೆಗಳನ್ನು ಮಾಡಿ ಮತ್ತು ಪ್ರಭುರವರ ಮನೆಗೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಠಾಣೆಗೆ ಕರೆದುಕೊಂಡು ಬರಲು ಆದೇಶ ನೀಡಿದ ಮೇರೆಗೆ ಆದೇಶವನ್ನು ಪಾಲಿಸಲು ಶ್ರಮಪಟ್ಟು ನೊಂದ ಅಮಾಯಕರನ್ನು ಪ್ರಭುರವರು ನೆಲ್ಲೂರಿಗೆ ಹೋಗಿ ಕರೆತರಲು ಹೋಗುತ್ತಿದ್ದ ಸಮಯದಲ್ಲಿ ರಸ್ತೆಯಲ್ಲಿ ಅಪಘಾತವಾಗಿ ಪ್ರಭುರವರ ಕಾಲು ಮುರಿದಿರುತ್ತದೆ. ಆಷ್ಟಾದರೂ ಠಾಣಾಧಿಕಾರಿಗಳು ಅವರನ್ನು ಬಿಡದೆ ಠಾಣೆಗೆ ಕರೆಯಿಸಿ ಅವರ ವಿಚಾರಣೆ ಮಾಡುವುದೇ ಸುಮಾರು 15 ದಿನಗಳಿಂದ ನಡೆಯುತ್ತಿರುತ್ತದೆ. ಇದರ ಮಧ್ಯದಲ್ಲಿ ನೊಂದಂತಹ ಸಾರ್ವಜನಿಕರ ಪರವಾಗಿ ಅಶ್ವಿನ್‌ರವರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ಮತ್ತು ಗೃಹ ಸಚಿವರಿಗೂ ಮನವಿಗಳನ್ನು ಸಲ್ಲಿಸಿ ಸುಮಾರು ದಿನಗಳು ಕಳೆದರೂ ಇದುವರೆವಿಗೂ ನ್ಯಾಯ ಎಂಬುವುದು ದೊರೆಯದಿದ್ದುದರಿಂದ ಕೂಡಲೇ ಕ್ರಮ ಜರುಗಿಸಬೇಕು ಇಲ್ಲದ್ದಿದ್ದಲ್ಲಿ 17-05-2024 ರಂದು ಉಗ್ರ ಹೋರಾಟ ಮಾಡಲಾಗುವುದು ಎಂದು ಬಿ. ಆರ್. ಮುನಿರಾಜು, ಸಂಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.