
ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಿಂದ ಸಂತೋಷ್ ಎಂಬ ಒಬ್ಬ ಭಕ್ತರು ಇತ್ತೀಚೆಗೆ ತಾವು ಸಂಕಲ್ಪಿಸಿದಂತೆ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆಯಲು ಜಯನಗರದ ಶ್ರೀಮಠದಿಂದ ಪಾದಯಾತ್ರೆಯ ಮೂಲಕ ಶ್ರೀ ಗುರು ರಾಯರ ದರ್ಶನ ಪಡೆದು ದೇಶಕ್ಕೆ ರೈತರಿಗೆ ಮತ್ತು ನಮಗೂ ನಿಮಗೂ ಒಳ್ಳೆಯದು ಆಗಲಿ ಎಂದು ಶ್ರೀ ಗುರುರಾಯರಿಗೆ ಪ್ರದಕ್ಷಿಣೆ ನಮಸ್ಕಾರ ಪ್ರಾರ್ಥನೆಯನ್ನು ಸಲ್ಲಿಸಿ, ಪರಮಪೂಜ್ಯ ಶ್ರೀ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ಪಡೆದುಕೊಂಡು ಪುನಃ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮಠಕ್ಕೆ ಆಗಮಿಸಿ ನನ್ನ ಆರಾಧ್ಯ ದೈವ ಶ್ರೀ ಗುರುರಾಯರ ಸಂಕಲ್ಪ ಆಶೀರ್ವಾದದಿಂದ ನನ್ನ ಪಾದಯಾತ್ರೆಯ ಮಾರ್ಗ ಮಧ್ಯದಲ್ಲಿ ಯಾವ ತೊಂದರೆಗಳು ಇಲ್ಲದಂತೆ ಶ್ರೀ ರಾಘವೇಂದ್ರ ಸ್ವಾಮಿಗಳವರು ತಮ್ಮ ಆಶೀರ್ವಾದ ಮೂಲಕ ಅನುಗ್ರಹಿಸಿದರು ಎಂಬ ತಮ್ಮ ಪಾದಯಾತ್ರೆಯ ಕೆಲವು ಅಪರೂಪದ ಅನುಭವದ ಮಾಹಿತಿಗಳನ್ನು ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದಿಂದ್ರ ಆಚಾರ್ಯರಲ್ಲಿ ಪ್ರಸ್ತಾಪಿಸಿ ಇದೆಲ್ಲವೂ ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡದ ಪರಮ ಅನುಗ್ರಹವೇ ಸಾಕ್ಷಿ ಎಂದು ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಭಕ್ತಿಯಿಂದ ಸ್ಮರಿಸಿದರು. ಈ ಸಂದರ್ಭದಲ್ಲಿ ಶ್ರೀ ವಾದಿಂದ್ರ ಆಚಾರ್ಯರು ಮತ್ತು ಶ್ರೀ ನಂದಕಿಶೋರ್ ಆಚಾರ್ಯರು ಗುರುಗಳ ಶೇಷ ವಸ್ತ್ರ ಫಲ ಮಂತ್ರಾಕ್ಷತೆಯನ್ನು ಕೊಟ್ಟು ಶ್ರೀ ರಾಘವೇಂದ್ರ ಸ್ವಾಮಿಗಳವರ ಅನುಗ್ರಹವು ಸದಾ ಕಾಲ ತಮ್ಮ ಮೇಲೆ ಇರಲಿ ಎಂದು ಹೇಳಿ ಆಶೀರ್ವದಿಸಿ ಅಭಿನಂದಿಸಿದರು.
City Today News 9341997936
