ಪೀಣ್ಯ ಕೈಗಾರಿಕಾವಲಯದಲ್ಲಿರುವ ಕರ್ಲಾನ್ ಎಂಟರ್‌ಪ್ರೈಸಸ್ ಕಾರ್ಖಾನೆಯನ್ನು ಮುಚ್ಚಿ 110 ಕ್ಕೂ ಹೆಚ್ಚು ಕಾರ್ಮಿಕರನ್ನು ಬೀದಿ ಪಾಲು ಮಾಡಿರುವ ಬಗ್ಗೆ ಪತ್ರಿಕಾ ಗೋಷ್ಠಿ.

ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಸಂಸ್ಥೆ ದೇಶದಾಧ್ಯಂತ ಹಾಸಿಗೆಗಳನ್ನು ತಯಾರು ಮಾಡುವಲ್ಲಿ ಪ್ರಸಿದ್ದಿಯಾಗಿದೆ. ದೆಶದ ಹಲವಾರು ರಾಜ್ಯಗಳಲ್ಲಿ ತನ್ನದೇ ಹಾಸಿಗೆ ಉತ್ಪಾದನೆ ಮಾಡುವ ಕಾರ್ಖಾನೆಗಳಿವೆ. ಕರ್ನಾಟಕದಲ್ಲಿ ಯಶವಂತಪುರ, ಪೀಣ್ಯ, ದಾಬಸ್‌ಪೇಟೆಯಲ್ಲಿ 6 ಕಾರ್ಖಾನೆಗಳನ್ನು ಹೊಂದಿದೆ. ನಂ.49, 3ನೇ ಹಂತ, ಪೀಣ್ಯ ಕೈಗಾರಿಕಾವಲಯದಲ್ಲಿರುವ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ನಲ್ಲಿ 110ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ದೇಶದ ಹಾಗೂ ಬೆಂಗಳೂರಿನ ಎಲ್ಲಾ ಕಾರ್ಖಾನೆಗಳ ಮೂಲ ಮಾಲೀಕರು ಟಿ.ಸುಧಾಕರ್ ಪೈ ಆಗಿರುತ್ತಾರೆ. ಬೆಂಗಳೂರಿನ ಎಲ್ಲಾ ಕಾರ್ಖಾನೆಗಳಲ್ಲಿ 1300 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಟಿ.ಸುಧಾಕರ್ ಪೈ ರವರು ಯಾವುದೇ ಕಾಯಿದೆಗಳನ್ನು ಅನುಷ್ಠಾನ ಮಾಡದೇ ಕಾರ್ಮಿಕರನ್ನು ಜೀವಂತ ಶೋಷಣೆ ಮಾಡುತ್ತಿದ್ದಾರೆ.
1999ರಿಂದ ಪೀಣ್ಯ ಕೈಗಾರಿಕಾ ವಲಯದಲ್ಲಿ ಟಿ.ಸುಧಾಕರ್ ಪೈ ರವರು ಸ್ಥಾಪಿಸಿದ ಹಾಗೂ ಮಾಲೀಕತ್ವ ಹೊಂದಿರುವ ಕಾರ್ಖಾನೆಯಲ್ಲಿ 110 ಜನ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಏಕಾಏಕಿ 26-02-2024ರಂದು ಪೀಣ್ಯ ಕೈಗಾರಿಕಾವಲಯದಿಂದ ಆಂದ್ರಪ್ರದೇಶದ ಚಿತ್ತೂರಿನ ಕೈಗಾರಿಕಾ ಪ್ರದೇಶಕ್ಕೆ ವರ್ಗಾವಣೆ ಮಾಡಿದ್ದಾರೆ. ಇಲ್ಲಿ ಯಾವುದೇ ಕೈಗಾರಿಕೆಯಾಗಲೀ, ಉತ್ಪಾದನಾ ಘಟಕವಾಗಲೀ ಇಲ್ಲ. ಈ ಕಾರ್ಮಿಕರು ಕಾರ್ಮಿಕ ಸಂಘದ ಸದಸ್ಯರಾದ ಒಂದೇ ಕಾರಣದಿಂದ ಆಡಳಿತ ವರ್ಗ ಸ್ಥಾಯಿ ಆದೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾವಣೆ ಮಾಡಲು ಅವಕಾಶವಿಲ್ಲದಿದ್ದರು ವರ್ಗಾವಣೆ ಮಾಡಲಾಗಿದೆ. ಇದು ಕಾನೂನುಬಾಹಿರ.
ಇದಲ್ಲದೇ ಕಾರ್ಖಾನೆಯಲ್ಲಿ ಈ ಕೆಳಕಂಡ ರೀತಿ ಕಾರ್ಮಿಕ ಅನುಚಿತ ನೀತಿ ಅನುಸರಿಸಿ 110 ಜನ ಕಾರ್ಮಿಕರನ್ನು ಬೀದಿ ಪಾಲು ಮಾಡಿದ್ದಾರೆ.
1) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಖಾನೆ ಕಳೆದ 20 ವರ್ಷಗಳಿಂದ ಪೀಣ್ಯ ಕೈಗಾರಿಕಾವಲಯದಲ್ಲಿ ಕೆಲಸ ನಿರ್ವಹಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಇಲಾಖೆ ವತಿಯಿಂದ ಪರವಾನಿಗೆ ಹಾಗೂ ಕಾರ್ಮಿಕ ಇಲಾಖೆಗೂ ತಿಳಿದ ವಿಷಯ.
2) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಮಿಕರು ತಮಗೆ ಅರ್ಹ ಸವಲತ್ತುಗಳನ್ನು ನೀಡದಿರುವ ಬಗ್ಗೆ ಈಗಾಗಲೇ ಈ ಹಿಂದೆ ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ವಿಭಾಗ-01 ಇವರಲ್ಲಿ 2018ರಲ್ಲಿ ವೇತನ ಹಾಗೂ ಇತರೆ ಸವಲತ್ತುಗಳ ಬಗ್ಗೆ ವಿವಾದ ನಡೆಯುತ್ತಿದ್ದು ಸದರಿ ವಿವಾದ ಇಂದು ಕಾರ್ಮಿಕ ನ್ಯಾಯಾಲಯದಲ್ಲಿದೆ.
3) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಖಾನೆ ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಯಾವುದೇ ಮುನ್ಸೂಚನೆಯಿಲ್ಲದೇ ಆಡಳಿತ ವರ್ಗ ಏಕಾಏಕಿ ಈ ಕಾರ್ಖಾನೆಯಲ್ಲಿ ಗುರುದೇವ ಟ್ರೇಡಿಂಗ್ ಅಂಡ್ ಸರ್ವಿಸಸ್ ಲಿ., ಲೋಚನಾ ಟ್ರೇಡಿಂಗ್ ಅಂಡ್ ಸರ್ವಿಸಸ್ ಪಿ. ಎಂಬ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಎಲ್ಲಾ ಕಾರ್ಮಿಕರನ್ನು ನೇಮಿಸಿರುವುದು ಕೈಗಾರಿಕಾ ವಿವಾದ ಕಾಯಿದೆ 1947ರ ಷೆಡ್ಯೂಲ್ 05ರ ಪ್ರಕಾರ ಶಿಕ್ಷಾರ್ಹಕ್ಕೆ ಗುರಿಯಾಗಿದೆ.
4) ಪೀಣ್ಯ ಕೈಗಾರಿಕಾವಲಯದ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಕಾರ್ಮಿಕರ ಖಾಯಂ ವಿಷಯದ ಬಗ್ಗೆ ಈಗಾಗಲೇ ಕೈಗಾರಿಕಾ ಟ್ರಿಬ್ಯೂನಲ್ 56/2020ರಲ್ಲಿ ವಿವಾದ ನಡೆಯುತ್ತಿದೆ. ಇದು ಆಡಳಿತ ವರ್ಗಕ್ಕೂ ತಿಳಿದ ವಿಷಯ. ಇದರ ಸಂಪೂರ್ಣ ದಾಖಲೆಗಳನ್ನು ನೀಡಲಾಗಿದೆ/
5) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ನಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರು ಪ್ರಾರಂಭದಿಂದ ಅವರ ಇ.ಎಸ್.ಐ., ಭವಿಷ್ಯನಿಧಿ ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಸಂಸ್ಥೆಯ ಹೆಸರಿನಲ್ಲಿದೆ.
6) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಕಾರ್ಮಿಕರಿಗೆ ಕೆಲವು ಸವಲತ್ತುಗಳನ್ನು ವಿಸ್ತರಿಸಲು ಸದರಿ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ 12(3) ವೇತನ ಒಪ್ಪಂದಕ್ಕೆ 30-03-2022ರಂದು ಉಪ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ಇವಭಾಗ-01ರಲ್ಲಿ ಸಹಿ ಮಾಡಿಸಿರುವುದು ಸಾಮಾಜಿಕ ನ್ಯಾಯದ ಉಲ್ಲಂಘನೆ, ಕಾರ್ಮಿಕ ಅನುಚಿತ ನೀತಿ ಅನುಸರಿಸಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ.
7) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಹಾಗೂ ಬೇನಾಮಿ ಗುತ್ತಿಗೆದಾರರು ಕಾರ್ಮಿಕರು ಸಂಘ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸಹಿಸದೇ ಕಾರ್ಮಿಕ ಅನುಚಿತ ನೀತಿ ಅನುಸರಿಸಿ ಪೀಣ್ಯ ಕೈಗಾರಿಕಾವಲಯದಿಂದ ಯಾವುದೇ ಕಾರ್ಖಾನೆಯಿಲ್ಲದ ಹಾಗೂ ಕಾಯಿದೆಯಲ್ಲಿ ಅವಕಾಶವಿಲ್ಲದಿದ್ದರೂ ಎಪಿಐಐಸಿ ಕೈಗಾರಿಕಾ ಪಾರ್ಕ್ (ಯುಡಿಎಲ್-1), ಗಂಧರಾಜುಪಲ್ಲೆ, ಚಿತ್ತೂರು ಜಿಲ್ಲೆ-517432ಕ್ಕೆ ವರ್ಗಾವಣೆ ಮಾಡುವುದಾಗಿ ಪತ್ರ ನೀಡಿರುವುದು ಕಾನೂನುಬಾಹಿರವಾಗಿದೆ ಹಾಗೂ ಕೈಗಾರಿಕಾ ವಿವಾದ ಕಾಯಿದೆಯ ಉಲ್ಲಂಘನೆಯಾಗಿರುವುದರಿಂದ ಶಿಕ್ಷಾರ್ಹಕ್ಕೆ ಗುರಿಯಾಗಿದೆ.
8) ಕರ್ಲಾನ್ ಎಂಟರ್‌ಪ್ರೈಸಸ್ ಲಿ. ಆಡಳಿತ ವರ್ಗ ಹಾಗೂ ಬೇನಾಮಿ ಗುತ್ತಿಗೆದಾರರು ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಬೆದರಿಕೆ ಹಾಕಿ ಅನುಸರಿಸುತ್ತಿರುವ ಒಂದೊಂದು ಕಾರ್ಮಿಕ ಅನುಚಿತ ನೀತಿಯಾಗಿದೆ.
9) ಈಗಾಗಲೇ ಕರ್ಲಾನ್ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸನ್ಮಾನ್ಯ ಕಾರ್ಮಿಕ ಸಚಿವರ ಸಮ್ಮುಖದಲ್ಲಿ ಸಭೆ ನಡೆದು ಮಾನ್ಯ ಕಾರ್ಮಿಕ ಸಚಿವರು ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಆಡಳಿತ ವರ್ಗದವರು, ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಸಂಘದ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಆಡಳಿತ ವರ್ಗ ಮಾಡಿರುವ ಮೋಸದ ಬಗಗೆ ಮನಗೊಂಡು ಆಡಳಿತ ವರ್ಗಕ್ಕೆ ಪೀಣ್ಯದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಕಾರ್ಮಿಕರನ್ನು ಯಶವಂತಪುರ ಹಾಗೂ ದಾಬಸ್‌ಪೇಟೆಗೆ ವರ್ಗಾವಣೆ ಮಾಡಬೇಕು ಹಾಗೂ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಆದರೆ ಕರ್ಲಾನ್ ಆಡಳಿತ ವರ್ಗ ಇದಕ್ಕೆ ಮಾನ್ಯತೆ ನೀಡದೇ ಕಾರ್ಮಿಕ ಅಧಿಕಾರಿಗಳ ಮುಂದೆಯೇ ಸಚಿವರ ಸೂಚನೆ ಮಾಡಿದ್ದಾರೆ.
ಕಾರ್ಮಿಕ ಇಲಾಖೆ ಹಾಗೂ ಸರ್ಕಾರ ಕೂಡಲೇ ಕಾರ್ಮಿಕ ಅನುಚಿತ ನೀತಿ ಅನುಸರಿಸುತ್ತಿರುವ ಆಡಳಿತ ವರ್ಗದ ಮೇಲೆ ಶಿಸ್ತಿನ ಕ್ರಮ ಜರುಗಿಸಲು ಈ ಮೂಲಕ ನಮ್ಮ ಸಂಘ ಮನವಿ ಮಾಡುತ್ತದೆ. ಇದನ್ನು ತಮ್ಮ ಪತ್ರಿಕೆ / ನಿಲಯದ ವತಿಯಿಂದ ಪ್ರಕಟಿಸಲು ಈ ಮೂಲಕ ನಮ್ಮ ಸಂಘ ಮತ್ತೊಮ್ಮೆ ಮನವಿ ಮಾಡುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಧ್ಯಕ್ಷರಾದ ಜಿ.ಆರ್.ಶಿವಶಂಕರ್ ರವರು ತಿಳಿಸಿದರು.
City Today News 9341997936
