
ಈ ಕೆಳಕಂಡಂತೆ ಅವರ 10ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಕಪ್ಪು ಚುಕ್ಕೆಯಿಲ್ಲದೇ ಅಧಿಕಾರ ಮಾಡಿರುವುದು, ಮಹತ್ವದ ಕೆಲಸಗಳಾದ ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮಾಡಿರುವುದು, ಒಂದೇ ಕಾನೂನು ಅಡಿಯಲ್ಲಿ ಆರ್ಟಿಕಲ್ 370 ರದ್ದು ಮಾಡಿರುವುದು, ಹಾಗೂ ದೇಶದ ಆರ್ಥಿಕ ಸ್ಥಿತಿ 5ರಿಂದ 3ನೇ ಸ್ಥಾನಕ್ಕೆ ತರುವುದು ನಮಗೆಲ್ಲಾ ಸಂತೋಷದ ವಿಷಯ.
ದೇಶದಲ್ಲಿ 2014ರಿಂದ 2024ರ ಅವಧಿಯಲ್ಲಿ ಹಿಂದೆ ಇದ್ದ 74 ಏರ್ಪೋರ್ಟಗಳ ಸಂಖ್ಯೆಯನ್ನು 149 ಏರ್‌ಫೋರ್ಟಗಳನ್ನು ಅಭಿವೃದ್ಧಿ ಪಡಿಸಿರುವುದು
ನೇಕಾರ ವೃತ್ತಿಯನ್ನು ಗುರುತಿಸಿ 2015ರ ಆಗಸ್ಟ್-7 ರಂದು ಕೈಮಗ್ಗ ದಿನಾಚರಣೆಯನ್ನು ಘೋಷಣೆ ಮಾಡಿ ಉದ್ಘಾಟನೆಯನ್ನು ಮಾಡಿರುತ್ತಾರೆ. ಇನ್ನೂ ಅನೇಕ ನೇಕಾರ ವೃತ್ತಿಯು ಅಭಿವೃದ್ಧಿ ಪತದತ್ತ ಸಾಗಲು ಮಹತ್ತರ ಪಾತ್ರವನ್ನು ವಹಿಸಿರುತ್ತಾರೆ.
ಹಿಂದೆ ಇದ್ದ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪ ನವರು ನೇಕಾರ ಸಾಲ ಮನ್ನಾ ಮತ್ತು ಸಮ್ಮಾನ್ ಯೋಜನೆ ಅಡಿಯಲ್ಲಿ ಹಾಗೂ ದೇವರ ದಾಸಿಮಯ್ಯ ಜಯಂತಿಯನ್ನು ಘೋಷಣೆ ಮಾಡಿರುತ್ತಾರೆ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ರವರು ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿರುತ್ತಾರೆ. ಹಾಗೂ ಪ್ರತಿ ಜಿಲ್ಲೆಯಲ್ಲು ಟೆಕ್ಸ್ ಟೈಲ್ ಪಾರ್ಕಗಳನ್ನು ತೆರೆಯಲು ಆದೇಶ ಮಾಡಿರುತ್ತಾರೆ.
ಮತ್ತೊಮ್ಮೆ ಪ್ರಧಾನಿ ಆಗಲು ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರಿಗೆ ಬೆಂಬಲವಾಗಿ BJP ಮತ್ತು NDAಯಿಂದ 28 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಿಗೆ ನೇಕಾರರು ಬೆಂಬಲ ಸೂಚಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಬಿ.ಎಸ್.ಸೋಮಶೇಖರ್ – ರಾಜ್ಯ ಸಂಚಾಲಕರು. ನೇಕಾರ ಪ್ರಕೋಷ್ಠ ಬಿಜೆಪಿ ಯವರು ತಿಳಿಸಿದರು..
City Today News 9341997936
