ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ರಾಜ್ಯದ ಜನತೆಯ ಆರೋಗ್ಯ ಕಾಪಾಡುವಲ್ಲಿ ವಿಶೇಷ ಪಾತ್ರವಹಿಸಿದ್ದು, ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ವಿಶ್ವ ಕನ್ನಡ ಕಲಾ ಕೂಟ (ರಿ) ಹಾಗೂ ಸಮಾನ ಮನಸ್ಕರರ ವೇದಿಕೆಯಿಂದ ಮನವಿ

ಡಾ.ಸಿ.ಎನ್.ಮಂಜುನಾಥ್ ದೇಶ ಸೇವೆಗೆ ಬಹುಮತಗಳಿಂದ ಗೆಲ್ಲಿಸಲು ಮನವಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ರಾಜ್ಯದ ಜನತೆಯ ಆರೋಗ್ಯ ಕಾಪಾಡುವಲ್ಲಿ ವಿಶೇಷ ಪಾತ್ರವಹಿಸಿದ್ದು, ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು ಎಂದು ವಿಶ್ವ ಕನ್ನಡ ಕಲಾ ಕೂಟ (ರಿ) ಹಾಗೂ ಸಮಾನ ಮನಸ್ಕರರ ವೇದಿಕೆ ಮನವಿ ಮಾಡಿದೆ.

ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕೂಟದ ಮುಖ್ಯಸ್ಥ ಹಲ್ಲೇಗೆರೆ ಕೃಷ್ಣ ಮಾತನಾಡಿ, ಬಡ ರೋಗಿಗಳ ಪಾಲಿಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿಯೆಂದೇ ಚಿರಪರಿಚಿತರಾದ ಡಾ.ಸಿ.ಎನ್.ಮಂಜುನಾಥ್ ಅವರ ಸಾಧನೆ ಎಂದರೂ ಸ್ಫೂರ್ತಿ ದಾಯಕ. ಆರೋಗ್ಯ ಕ್ಷೇತ್ರದಲ್ಲಿ ಇವರ ಸೇವೆ ಪರಿಗಣಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡಿ, ನೊಂದವರ ಕಣ್ಣಿರು ಒರೆಸುವ ಕಾಯಕದಲ್ಲಿ ಮಾತಾಗಿರುವ ಹೃದಯವಂತ ಹೃದ್ರೋಗ ತಜ್ಞರು. ಜಯದೇವ ಆಸ್ಪತ್ರೆ ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಇವರು ಪಟ್ಟಂತಹ ಶ್ರಮ ಅಗಾಧವಾದುದು. ಇವರು ಸೇವೆ ನಡೀ ದೇಶಕ್ಕೆ ಅಗತ್ಯವಾಗಿದ್ದು, ಇವರನ್ನು ಸಂಸದರನ್ನಾಗಿ ಆಯ್ಕೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರು ಸಂಕಲ್ಪ ಮಾಡಬೇಕು ಕೋರಿದ್ದಾರೆ. ಎಂದು

ಡಾ. ಸಿ.ಎನ್. ಮಂಜುನಾಥ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ನಾಡಿನ ಖ್ಯಾತ ಹೃದಯ ತಜ್ಞರಲ್ಲಿ ಒಬ್ಬರಾದ ಡಾ. ಮಂಜುನಾಥ್, ತಮ್ಮ ಸರಳ ಸೌಮ್ಯ ಸ್ವಭಾವದಿಂದಲೇ ಜನಪ್ರಿಯ.

ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಅಳಿಯನಾಗಿದ್ದರೂ, ಅವರ ಪ್ರಭಾವ ಬಳಸದೇ ವೈದ್ಯಕೀಯ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ. ಸಿ.ಎನ್. ಮಂಜುನಾಥ್ ಕಿರೀಟಕ್ಕೆ ಈಗಾಗಲೇ ಪದ್ಮಶ್ರೀ ಗೌರವ ಸೇರಿದೆ. ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಡಾ. ಸಿ.ಎನ್. ಮಂಜುನಾಥ್ ಅವರಿಗೆ ಸಲ್ಲುತ್ತದೆ. ರೋಗಿಗಳ ಬಾಳಿಗೆ ಭರವಸೆಯ ಬೆಳಕಾಗಿ, ಲಕ್ಷಾಂತರ ರೋಗಿಗಳ ಪ್ರಾಣ ಉಳಿಸಿ, ಅನೇಕ ಕುಟುಂಬಗಳಿಗೆ ಮರು ಜೀವ ನೀಡಿದ್ದಾರೆ. ಸಹಸ್ರಾರು ರೋಗಿಗಳಿಗೆ ಜೀವದಾತ ಹಾಗೂ ಹೃದಯವಂತ ಡಾ.ಸಿ.ಎನ್.ಮಂಜುನಾಥ್ ಅವರಂತ ಮಹನೀಯರನ್ನು ಪಡೆದ ಜನ ಪುಣ್ಯವಂತರು. ನಮ್ಮ ಭಾರತ ದೇಶದ ಅಮೂಲ್ಯ ರತ್ನ ಅವರು. ಈ ದೇಶದ ಆರೋಗ್ಯ ವಲಯ ಸುಧಾರಣೆಗೆ ಡಾ.ಸಿ.ಎನ್.ಮಂಜುನಾಥ್ ಅವರದ್ದು ಪ್ರಮುಖಪಾತ್ರವಿದೆ. ಆದ್ದರಿಂದ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಲೀಡ್‌ನಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೂಟದ ಉಪಾಧ್ಯಕ್ಷ ಬಿ.ಎನ್.ಸುರೇಶ್ ಬಾಬು ಅವರು ಮಾತನಾಡಿ, ಬಡವರು, ಮಧ್ಯಮ ವರ್ಗದ ಜನರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಆರೋಗ್ಯ ಸೌಲಭ್ಯಗಳು ಎಲ್ಲರಿಗೂ ಕೈಗೆಟಕುವಂತಿರಬೇಕು ಎನ್ನುವುದು ನಮ್ಮ ಆಶಯ. ಈ ಗುರಿಯೊಂದಿಗೆ ಸಾಗುತ್ತಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕಳೆದ 10 ವರ್ಷದ ಅವಧಿಯಲ್ಲಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಆಗಿರುವ ಬದಲಾವಣೆಯ ಬಗ್ಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಅನೇಕ ಆರೋಗ್ಯ ಸೌಲಭ್ಯಗಳು, ಜನೌಷಧದಂತಹ ಉಪಕ್ರಮಗಳು ಬಡ, ಮಧ್ಯಮ ವರ್ಗದ ಜನರಿಗೆ ಅತ್ಯಂತ ಉಪಕಾರಿಯಾಗಿದೆ ಅಂತ ಡಾ. ಮಂಜುನಾಥ್ ಶ್ಲಾಘಿಸಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದ್ದಾರೆ.

2024ನೇ ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದ ಸೇವೆಗೆ ಅನುಕೂಲ ಮಾಡಿಕೊಡಬೇಕು. ಆರೋಗ್ಯ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಹಾಗೂ ಸುಧಾರಣೆಗೆ ಡಾ.ಸಿ.ಎನ್.ಮಂಜುನಾಥ್ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕಾದ ಹೊಣೆಗಾರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾರರ ಮೇಲಿದೆ. ಈ ಬಾರಿ ಅವರನ್ನು ಬಹುಮತಗಳಿಂದ ಗೆಲ್ಲಿಸಬೇಕು. ಈಗಾಗಲೇ ಕ್ಷೇತ್ರದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಾನ ಮನಸ್ಕರರ ವೇದಿಕೆಯ ಹಾಲೂರು ನಾಗಪ್ಪ, ನಿವೃತ್ತ ಕುಲಪತಿ ನಾರಾಯಣಗೌಡ, ರಾಜಣ್ಣಸೇರಿ ಕೆಲ ಸಮಾನ ಮನಸ್ಕರರು ಭಾಗವಹಿಸಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.