
ಕರ್ನಾಟಕವು 2023 ರಿಂದ ಇಲ್ಲಿಯವರೆಗೆ ತೀವ್ರವಾದ ಬರಗಾಲವನ್ನು ಎದುರಿಸುತ್ತಿದ್ದು,ಅದರಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ಅದರಲ್ಲೂ 196 ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿವೆ. ರೈತರ ಬೆಳೆ ನಷ್ಟದಿಂದ ವಾರ್ಷಿಕ ಜೀವನ ಮತ್ತು ಆರ್ಥಿಕ ನಷ್ಟದಲ್ಲಿ ಒದ್ದಾಡುತ್ತಿದ್ದಾರೆ. ನೀರಿನ ಅಭಾವವನ್ನು ಎದುರಿಸುತ್ತಿರುವ ಇವರಿಗೆ ಕುಡಿಯುವ ನೀರಿಗೂ ಪರಿಸ್ಥಿತಿ ಗಂಭೀರವಾಗಿದೆ.ಜಾನುವಾರಗಳ ಮೇವು ಅಭಾವ ಹಾಗೂ ರೋಗಗಳು ಬಾಧೆಯಿಂದ ಜಾನುವಾರಗಳು ಸಂಕಷ್ಟದಲ್ಲಿವೆ. ಇದ್ದರಿಂದ ಪಾರಾಗಲು ನಮ್ಮನ್ನು ಕಾಪಾಡಿ ಎಂದು ಎಷ್ಟು ಅಂಗಲಾಚಿದರೂ ಪ್ರಯೋಜನವಾಗಿಲ್ಲ. ಅಗಸ್ಟ್-ನವೆಂಬರ್ ಕಳೆದ 2023 ರ ಮಳೆ ವೈಪ್ಯಲವಾದಾಗ ಬೆಳೆಗಳು ನಷ್ಟಕ್ಕೆ ತುತ್ತಾದವು. ಆಗ ಕರ್ನಾಟಕದ ಕಾಂಗ್ರೆಸ್ಸಿಗರು ತೆಲಂಗಾಣ ರಾಜ್ಯದ ಚುನಾವಣೆ ಜವಾಬ್ದಾರಿಯನ್ನು ವಹಿಸಿಕೊಂಡು ಮಧ್ಯಪ್ರದೇಶ, ರಾಜಸ್ಥಾನ ಚುನಾವಣೆಗಳಲ್ಲಿ ತಲ್ಲೀನರಾಗಿ ರಾಜ್ಯದ ಬರಪೀಡಿತ ರೈತರನ್ನು ಮರೆತರು. ಆದರೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು. ರೈತರ ಬೆಳೆ ಬರಲಿಲ್ಲ.ಆದರೆ ನಮ್ಮ ಸುಮಾರು ಇದರ ಮೌಲ್ಯ 35,162.05 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂಬುದಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಿದರು. ಕೇಂದ್ರವು ಇದರ ಮನವಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡಲಿಲ್ಲ.ಆದರೆ ರಾಜ್ಯ ಸರ್ಕಾರವು ಮಾಡಿದ ಒಳ್ಳೆ ಕೆಲಸವೇನೆಂದರೆ ತಾವು ಕೂಡ ಈ ಬರಗಾಲ ನಿಭಾಯಿಸುವಲ್ಲಿ ವಿಫಲರಾಗಿರುವ ಕಾರಣಕ್ಕೆ ಕೇಂದ್ರದ ಕಡೆ ಬಟ್ಟು ಮಾಡಿ ತೋರಿಸುತ್ತಾ, ಸರ್ವೋಚ್ಛ ನ್ಯಾಯಲಯದಲ್ಲಿ ಮಾರ್ಚ್ 23/2024 ರಂದು ಅರ್ಜಿ ಸಲ್ಲಿಸಿದರು.
ಅದು ಒಂದು ತಿಂಗಳ ನಂತರ ವಿಚಾರಣೆಗೆ ಬಂದಿತು. ಶ್ರೀ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸಂದೀಪ ಮೆಹತಾ ಅವರಗಳಿದ್ದ ನ್ಯಾಯ ಪೀಠರ ಮುಂದೆ ಚರ್ಚೆ ನಡೆಯಿತು. ರಾಜ್ಯದ ಪರವಾಗಿ ಹಿರಿಯ ವಕೀಲ ಕಪೀಲ್ ಸಿಬಲ್ ಅವರು ವಾದ ಮಂಡಿಸಿದರು. ಇದೆಲ್ಲದರ ಪರಿಣಾಮ ಈ ಸಂದರ್ಭದಲ್ಲಿ ಚುನಾವಣೆ ಆಯೋಗವನ್ನು ಪ್ರಶ್ನಿಸಲಾಗಿ ಆಯೋಗವು ತುರ್ತು ಕಾರ್ಯಕ್ರಮಗಳಿಗೆ ತನ್ನ ಅಭ್ಯಂತರವಿಲ್ಲವೆಂದು ತನ್ನ
ಕೇಂದ್ರ ಸರ್ಕಾರಕ್ಕೆ 181,71.44 ಕೋಟಿ ಹಣವನ್ನು ಬಿಡುಗಡೆ ಮಾಡುವುದಾಗಿ ಅಡ್ಡಾಕೆಟ್ ಜನರಲ್ ಭರವಸೆಯನ್ನು ನೀಡಿದ್ದಾರೆ. ಇದು ರಾಷ್ಟ್ರೀಯ ವಿಪತ್ತು ನೀತಿಯ ಕೆಳಗಡೆ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಕಾಲದಲ್ಲಿ ನೀಡಬೇಕಿತ್ತು. ಆದರೆ 6 ತಿಂಗಳಾದರೂ 2 ಸರ್ಕಾರಗಳೂ ನೀಡದೇ ಇರುವುದರಿಂದ ರೈತರು ಕಂಗೆಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರ ನೀಡಬೇಕಾ ಬಾಬತ್ತು 18.171.44 ಕೋಟಿ ಹಣ ಇದನ್ನೇ ನೀಡಿ ಕೈ ತೊಳೆದುಕೊಳ್ಳುವ ಜಾಣತನವನ್ನು ರಾಜ್ಯ ಸರ್ಕಾರ ಮಾಡಬಾರದು. ಈ ಹಣ ರಾಜ್ಯದ %50 ಸೇರಿಸಿ 18.171.44+18.171.44= 36.342.288 ಇಷ್ಟು ಹಣವನ್ನು ರಾಜ್ಯದ ರೈತರ ಹಿತಾ ಮತ್ತು ಬೆಳೆ ನಷ್ಟಕ್ಕೆ ನೆರವು ನೀಡುವ ಕಾರ್ಯಕ್ರಮದ ಕೆಳಗಡೆ ತುರ್ತಾಗಿ ವಿನಿಯೋಗ ಆಗಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ವಿಚಾರಣೆಯು ಇದೇ 29 ರಂದು ನ್ಯಾಯಲಯದ ಮುಂದೆ ಬರಲಿದೆ. ರಾಜ್ಯ ಸರ್ಕಾರವು ಉಳಿದ ಹಣ ಪೂರ್ವ ಸಿದ್ಧತೆಗೆ ತಾವು ಮುಂದಾಗಬೇಕೆಂದು ಮತ್ತು ಕೇಂದ್ರ ಸರ್ಕಾರವು ಪದೇ ಪದೇ ಇಂತಹ ಕಂಗಲಾಗಿರುವ ರೈತರ ನಡುವೆ ತಾತ್ಸಾರ ಮನೋಭಾವ ತೋರದೆ ಕೇಂದ್ರವೂ, ರಾಜ್ಯಕ್ಕೆ ಚಂಬು ತೋರಿಸೋದು ಬೇಡ, ರಾಜ್ಯ ಸರ್ಕಾರ ರೈತರಿಗೆ ಚಂಬು ಕೊಡೋದು ಬೇಡ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಸರಿಯಾದ ಎಚ್ಚರಿಕೆ ನೀಡಿ ತಪ್ಪು ಸರಿಪಡಿಸಿಕೊಂಡು ರೈತರಿಗೆ ಅನ್ಯಾಯ ಆಗದ ರೀತಿ ಸೂಚನೆಯನ್ನು ಸುಪ್ರೀಂಕೋರ್ಟ್ ನೀಡಬಹುದೆಂದು ನಾಡಿನ ರೈತರು ನೀರಿಕ್ಷಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಕೋಡಿಹಳ್ಳಿ ಚಂದ್ರಶೇಖರ್,ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸುದರು, ಗೋಷ್ಠಿ ಯಲ್ಲಿಸುರೇಶ್ ಹುನ್ನೂರು,ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
City Today News 9341997936
