” ರಘುವೀರ್ 3 ಇನ್ 1 ಉತ್ಸವ “



ರಘುವೀರ್ 3 ಇನ್ 1 ಉತ್ಸವ

ನಾಯಕ ನಟರಾಗಿ
ಚಲನಚಿತ್ರ ನಿರ್ಮಾಪಕರಾಗಿ ಚಿತ್ರೋದ್ಯಮ ಮತ್ತು ಪ್ರೇಕ್ಷಕರಿಗೆ ಪರಿಚಯವಿದ್ದ  ರಘುವೀರ್ ರವರು

ತಮ್ಮ ಸಂಗೀತ ಪ್ರತಿಭೆ ಅನಾವರಣಕ್ಕೆ ಆಯ್ಕೆ ಮಾಡಿಕೊಂಡ ಚಿತ್ರ
*ಮೋಡ ಕವಿದ ಮಂಜು*
 
ಹೌದು ನಟ ರಘುವೀರ್  ರವರು ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿ ತಮ್ಮದೆ ಸಂಸ್ಥೆ
ಎಂ. ಸಿ. ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ದೇಶನಕ್ಕೂ  ತಯಾರಿ ನಡೆಸಿದ್ದ    ಚಿತ್ರ *ಮೋಡ ಕವಿದ ಮಂಜು* ಕನ್ನಡ ಚಲನಚಿತ್ರ

ಹಾಡುಗಳನ್ನು ಸಿದ್ಧಗೊಳಿಸಿ ಸುಮಾರು 20 ದಿನಗಳ ಕಾಲ  ಮನಾಲಿ  ಯಲ್ಲಿ ಚಿತ್ರೀಕರಣ ಕೂಡ ಮಾಡಿದ್ದರು ಕಾರಣಾಂತರದಿಂದ ಚಿತ್ರಕ್ಕೆ ಬ್ರೇಕ್ ನೀಡಿದರು.
ನಂತರದ ಬೆಳವಣಿಗೆಯಲ್ಲಿ  ಅವರು ತಮ್ಮ ಜೀವನ ಯಾತ್ರೆ ಮುಗಿಸಿದರು
 
ಅವರ ನಂತರ ಈ ಚಿತ್ರದ ಬಗ್ಗೆ ಯಾರೂ ಕೂಡಾ ಗಮನ ನೀಡಿರಲಿಲ್ಲ 

ಇತ್ತೀಚಿಗೆ ರಘುವೀರ್ ಶಿಷ್ಯ.
ಹ್ಯಾಟ್ರಿಕ್ ಸೂರ್ಯ ಪಿ. ಎನ್,
ರವರು ಹಾಡುಗಳನ್ನು ಹುಡುಕಿ ಲಹರಿ ಆಡಿಯೋ ಕಂಪನಿಯ ಮಾಲೀಕರಾದ
ಶ್ರೀ ಲಹರಿ ವೇಲು ರವರಿಗೆ ಒಪ್ಪಿಸಿದ್ದಾರೆ. 
ಯಾಕಂದ್ರೆ ರಘುವೀರ್ ರವರು ಹಾಡುಗಳನ್ನು ಧ್ವನಿ ಮುದ್ರಣ ಮಾಡುವಾಗಲೆ ಲಹರಿ ಕಂಪನಿ ಜೊತೆ ಒಪ್ಪಂದ  ಮಾಡಿಕೊಂಡಿದ್ದರು..

*ಶ್ರೀ ರಘುವೀರ್ ಕಲಾ ಸೇವಾ ಟ್ರಸ್ಟ್* (ರಿ) ಬೆಂಗಳೂರು
ಇವರು

ರಘುವೀರ್ ರವರ
58ನೇ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದೆ  17ನೇ ಮೇ 2024 ರಂದು
*ನಯನ ಸಭಾಂಗಣ* (ರವೀಂದ್ರಕಲಾಕ್ಷೇತ್ರ ಆವರಣ)
ಬೆಂಗಳೂರು
ಈ  ಕಾರ್ಯಕ್ರಮದಲ್ಲಿ

ನಿರಂತರ ಭಾರತನಾಟ್ಯಮ್ ಅಕಾಡೆಮಿ, ಬೆಂಗಳೂರು
ಶುಭಾ ಹೆಗ್ದೆ.
ನೃತ್ಯ ಕಲಾ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಆರ್ಟ್, ಬೆಂಗಳೂರು.
ಕುಮಾರಿ ಪ್ರೇಕ್ಷಾ ಎನ್. ರಾಜ್.
ವಿವಾನ್  ಡ್ಯಾನ್ಸ್ ಫ್ಲೋರ್.
ಹೊಸಕೆರೆ ಗುಬ್ಬಿ  ತಾಲೂಕು.
ಮೂಡಲಗಿರಿ  ಎಂ.
ಶ್ರೀ ಶಾರದಾ ನಾಟ್ಯಾಲಯ, ಬೆಂಗಳೂರು.
ಸುರಕ್ಷಾ ಎಂ. ಹೊಳ್ಳ.
ನೃತ್ಯ ಸ್ಟುಡಿಯೋ ಬೆಂಗಳೂರು.
ಪ್ರೀತಿ ತಿಮ್ಮೇಗೌಡ.
ಕಲಾ ಭೈರವಿ ಡ್ಯಾನ್ಸ್ ಅಕಾಡೆಮಿ.
ಪ್ರಭು.ಆರ್.
ಕ್ವೀನ್ಸ್  ಡ್ಯಾನ್ಸ್ ಫಿಟ್ನೆಸ್ ಸ್ಟುಡಿಯೋ
ಪ್ರಭು. ಆರ್.
ನಾಗರಾಜ್ ನೃತ್ಯ ಅಕಾಡೆಮಿ. ಬೆಂಗಳೂರು.
ನಾಗರಾಜ್. ಬಿ. ಜಿ.
ಕ್ರಿಯೇಟಿವ್ ಇಂಡಿಯನ್ ಒಲಂಪಿಯಾಡ್. ಬೆಂಗಳೂರು.
ನೃತ್ಯ ಸೌರಭ ಅಕಾಡೆಮಿ. ಯಾದಗಿರಿ ಶಾಪುರ್.
ತತ್ತ್ವಾ ಅಕಾಡೆಮಿ
ಧನಲಕ್ಷ್ಮಿ. ಕೆ.
ಮೇಲ್ಕಂಡ ಸಂಸ್ಥೆಗಳ ಯುವ ಪ್ರತಿಭೆಗಳು ತಮ್ಮ ಪ್ರತಿಭೆ ಪ್ರದರ್ಶನ ನೀಡಲಿದ್ದಾರೆ.
ವಿಶೇಷ ಅತಿಥಿಗಳಾಗಿ
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಶ್ರೀ ಸಂತೋಷ್ ಹೆಗಡೆ. ಲಹರಿ ಆಡಿಯೋ ಕಂಪನಿಯ ಮಾಲೀಕರಾದ ಶ್ರೀ ಲಹರಿ ವೇಲು.
ನಿರ್ದೇಶಕರಾದ ರಾಘವ ಲೋಕಿ.
ಛಾಯಾಗ್ರಾಹಕರಾದ  ಶ್ರೀ ಪಿ. ಕೆ. ಹೆಚ್. ದಾಸ್.
ನಿರ್ಮಾಪಕರಾದ ಪಲ್ಲವಿ ಪ್ರಕಾಶ್.
ಗಾಯಕರಾದ  ರಮೇಶ್ ಚಂದ್ರ
ಇವರುಗಳ ಜೊತೆ
ಮುಖ್ಯ ಅತಿಥಿಯಾಗಿ
ಐಟಿಬಿಪಿ ಫೋರ್ಸ್ ಇಂಡಿಯನ್ ಆರ್ಮಿ  ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ  ಶ್ರೀ ಎ. ವಿಜಯ್ ಕುಮಾರ್ ರೆಡ್ಡಿ ಭಾಗವಹಿಸಲಿದ್ದಾರೆ

1) ಪ್ರತಿಭೋತ್ಸವ
2) ಮೋಡ ಕವಿದ ಮಂಜು ಕನ್ನಡ ಚಲನಚಿತ್ರ ಹಾಡುಗಳ ಬಿಡುಗಡೆ
3) ರಘುವೀರ್ ರವರ ಹುಟ್ಟು  ಹಬ್ಬ
ಅದಕ್ಕೆ ಹೇಳಿದ್ದು
ರಘುವೀರ್ 3 ಇನ್ 1  ಉತ್ಸವ ಅಂತಾ…!

City Today News 9341997936

Leave a comment

This site uses Akismet to reduce spam. Learn how your comment data is processed.