ಜೆ.ಸಿ.ಐ ಗೋಕಾಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ

ಪ್ರತಿ ವರ್ಷದಂತೆ ಈ ವರ್ಷವೂ ಸಹ ಜೆ.ಸಿ.ಐ ಗೋಕಾಕ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ 90% ಮತ್ತು ಹೆಚ್ಚಿನ ಅಂಕ ಪಡೆದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಪುರಸ್ಕಾರ ಮತ್ತು ಪ್ರಮಾಣ ಪತ್ರ ನೀಡಿ, ನಾಡಿನ ಪೂಜ್ಯರು, ಗುರು ಹಿರಿಯರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸಲಾಗುವುದು, ಕಾರಣ 90% ಮತ್ತು ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿ/ನಿಯರು ತಮ್ಮ ಝರಾಕ್ಸ್ ಅಂಕಪಟ್ಟಿಯೊಂದಿಗೆ ತಮ್ಮ ಭಾವಚಿತ್ರ (ಫೋಟೊ) ಅಂಟಿಸಿ ಸಂಪೂರ್ಣ ವಿಳಾಸದೊಂದಿಗೆ ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2024, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸ್ಥಳ ಮತ್ತು ದಿನಾಂಕ ಮುಂದಿನ ಪ್ರಕಟಣೆಯಲ್ಲಿ ತಿಳಿಸಲಾಗುವುದು. ವಾಟ್ಸಪ್ ಅಪ್ಲಿಕೇಷನ್ ಪರಿಗಣಿಸಲಾಗುವದಿಲ್ಲ. ಕಾರಣ ನೇರವಾಗಿ ನಮ್ಮ ಕಛೇರಿಗೆ ಬಂದು ಖುದ್ದಾಗಿ ಅರ್ಜಿ ಸಲ್ಲಿಸಬೇಕು ಅಥವಾ ಅಂಚೆ ಮೂಲಕ ಅರ್ಜಿ ಕಳುಹಿಸಬಹುದು.

ಅರ್ಜಿ ಸಲ್ಲಿಸುವ ಸಮಯ ಬೆಳಗ್ಗೆ 10:00 ಘಂಟೆಯಿಂದ ಸಾಯಂಕಾಲ 05:00 ವರೆಗೆ

ಅರ್ಜಿ ಸಲ್ಲಿಸುವ ವಿಳಾಸ:

ಶ್ರೀ ರಾಮ್ ಫೌಂಡೆಷನ್, ಲಾತೂರ ಕಂಪ್ಯೂಟರ್ ಟೈಪಿಂಗ್ ಸೆಂಟರ್ ಕೋರ್ಟ ಸರ್ಕಲ್, ಕೆನರಾ ಬ್ಯಾಂಕ ಕೆಳಗೆ, ಗೋಕಾಕ, ಜಿ.ಬೆಳಗಾವಿ.

City Today News 9341997836

Leave a comment

This site uses Akismet to reduce spam. Learn how your comment data is processed.