ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ “ಅವಕಾಶ ವಂಚಿತ ಸಮುದಾಯಗಳ ಧ್ವನಿ”

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಲ್ಲಿ ಅವಕಾಶ ವಂಚಿತ ಸಮುದಾಯಗಳ ಧ್ವನಿಯಾಗಿ ಇಡೀ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹಿಂದುಳಿದ ಸಮುದಾಯಗಳ ಧ್ವನಿಯಾಗಿ ಅವಕಾಶ ವಂಚಿತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.

ಪ್ರಮುಖವಾಗಿ ಈ ವೇದಿಕೆಯು 2018ರ ರಾಜ್ಯವು ಅತೀ ಖಾತುರದಿಂದ ನಿರೀಕ್ಷಿಸುತ್ತಿದ್ದ ಹೆಚ್.ಕಾಂತರಾಜುರವರ ಜಾತಿವಾರು ಸಮೀಕ್ಷೆಯ ವರದಿಯ ಬಿಡುಗಡೆಗಾಗಿ ಉಗ್ರಹೋರಾಟ ನಡೆಸುವ ಮೂಲಕ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಸಹ ಹೂಡಿದ್ದೆವು. ಹಾಗೆಯೇ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-3ಬಿ ಯಿಂದ ಪ್ರವರ್ಗ-2ಎಗೆ ವರ್ಗಾಯಿಸದಂತೆ ಒತ್ತಾಯ ಮತ್ತು ಹೋರಾಟ ನಡೆಸಿದ್ದು, ಹಾಗೇಯೇ ಉನ್ನತ ಮಟ್ಟದ ಸುಭಾಷ್ ಆಡಿ ಸಮಿತಿಯನ್ನು ರದ್ದುಗೊಳಿಸಲು ಸಹ ಕೋರಿದ್ದೆವು. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿದ್ದು, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೈಬಿಟ್ಟಿರುವ ಸುಮಾರು 73 ಜಾತಿಗಳನ್ನು ಕೇಂದ್ರ ಹಿಂದುಳಿದ ಪಟ್ಟಿಗೆ ಸೇರಿಸುವ ವಿಚಾರವಾಗಿ ಹೋರಾಟ ಮಾಡಿದ್ದೇವೆ. ಹಾಗೆಯೇ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವಿಚಾರವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಹೋರಾಟ ಹಾಗೂ ವಿಧಾನ ಪರಿಷತ್ತಿನಲ್ಲಿ ಅತೀ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸಿಕೊಡುವ ಬಗ್ಗೆ ಮತ್ತು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಅವಕಾಶವನ್ನು ಮಾಡಿಕೊಡಬೇಕೆಂದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ .

ಈಗ ಪ್ರಸ್ತುತ ಜೂನ್ ತಿಂಗಳಿನಲ್ಲಿ 11 ಜನರ ವಿಧಾನ ಪರಿಷತ್ ಸದಸ್ಯರ ನಿವೃತ್ತಿಯಾಗುತ್ತಿದ್ದು, ಕಾಂಗ್ರೆಸ್ ಪಕ್ಷಕ್ಕೆ 7 ಸ್ಥಾನ ಖಚಿತವಾಗಿದ್ದು, ಅದರಲ್ಲಿ ಪ್ರಮುಖವಾಗಿ ಮುಂದುವರಿದ ಸಮುದಾಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗದಲ್ಲಿ ಮುಂದುವರೆದ ಈಡಿಗ, ತಿಗಳ,ಉಪ್ಪಾರ, ಬಲಿಜ, ರೆಡ್ಡಿ, ಕ್ಷತ್ರಿಯ ಹೀಗೆ ಹಿಂದುಳಿದ ವರ್ಗಗಳ ಅತಿ ಹಿಂದುಳಿದ ವರ್ಗಗಳಲ್ಲಿ ಈಗಾಗಲೇ ಅವಕಾಶ ಪಡೆದವರು ಮತ್ತು ಮುಂದುವರಿದವರೇ ಹೆಚ್ಚಿನ ಸಂಖ್ಯೆಯಲ್ಲಿ ವಿಧಾನ ಪರಿಷತ್ ಸ್ಥಾನ ಪಡೆಯಲು ಯತ್ನಿಸುತ್ತಿದ್ದಾರೆ.

ಸಂವಿಧಾನದ ಆಶಯವೇ ಬುಡಮೇಲಾದಂತೆ ಯಾವ ಸಮುದಾಯಗಳು ಸಾರ್ವಜನಿಕ ಚುನಾವಣೆಗಳ ಮೂಲಕ ರಾಜಕೀಯವಾಗಿ ಸ್ಪರ್ಧಿಸಲು ಸಾಧ್ಯವಿಲ್ಲವೋ ಅಂತಹ ಸಮುದಾಯಗಳ ಮುಖಂಡರನ್ನು ವಿಧಾನಪರಿಷತ್ ಗೆ ನಾಮನಿರ್ದೇಶನ ಮಾಡುವ ಮೂಲಕ ಅಂತಹ ಸಮುದಾಯಗಳಿಗೆ ಸಂವಿಧಾನದ ಆಶಯದಂತೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಾಯವಾಗುತ್ತದೆ ಎಂಬ ಧೋರಣೆಯನ್ನು ಈಗ ಅರ್ಥವಿಲ್ಲದಂತೆ ಮಾಡಿದ್ದಾರೆ.

ಈಗಾಗಲೇ ಗೊಲ್ಲ, ಯಾದವ, ತಿಗಳ, ಈಡಿಗ, ಕುರುಬ, ಉಪ್ಪಾರ ಹೀಗೆ ಹಲವಾರು ಸಮುದಾಯಗಳು ಅವಕಾಶ ಪಡೆದಿದ್ದು ಈಗಲೂ ಅವರೇ ಪ್ರಯತ್ನ ನಡೆಸುತ್ತಿದ್ದಾರೆ.

ಆದರೆ ಮಾನ್ಯ ಮುಖ್ಯಮಂತ್ರಿಗಳ ಪುತ್ರರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ರವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಾದಂತಹ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ ಕ್ಷೇತ್ರ ಬಿಟ್ಟುಕೊಟ್ಟ ಕಾರಣ ಎಐಸಿಸಿ ವರಿಷ್ಠರು ನೀಡಿದ ವಾಗ್ದಾನದಂತೆ ಅವರನ್ನ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಲು ವೇದಿಕೆಯು ಒಕ್ಕೊರಲಿನಿಂದ ಒತ್ತಾಯಿಸುತ್ತದೆ.

ಮುಂದುವರೆದು ಹೆಳವ, ಶಿಳ್ಳೆಖ್ಯಾತ, ದೊಂಬಿದಾಸ, ಮಡಿವಾಳ, ಸವಿತಾ ಸಮಾಜ ,ಅಕ್ಕಿಪಿಕ್ಕಿ, ಗೋದಳಿ, ಕಾಡುಸಿದ್ದ ಇನ್ನೂ ಅನೇಕ ಅತಿ ಹಿಂದುಳಿದ ಹಾಗೂ ಅವಕಾಶ ವಂಚಿತ ಮತ್ತು ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಇಂತಹ ಸಮುದಾಯಗಳು ಒಂದು ಗ್ರಾಮ ಪಂಚಾಯಿತಿಯ ಸದಸ್ಯರಾಗಿಯು ಆಯ್ಕೆಯಾಗಿರುವುದಿಲ್ಲ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ಈ ಬಾರಿ ಜೂನ್ ತಿಂಗಳಲ್ಲಿ ವಿಧಾನಪರಿಷತ್ತಿಗೆ ನಡೆಯುವ ಆಯ್ಕೆ ಸಂದರ್ಭದಲ್ಲಿ ಹೆಳವ, ಸವಿತಾಸಮಾಜ, ಮಡಿವಾಳ ಇಂತಹ ಅವಕಾಶ ವಂಚಿತ ಸಮುದಾಯಗಳನ್ನು ಪರಿಗಣಿಸಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿರುವ ಶೇಕಡ 60ಕ್ಕೂ ಹೆಚ್ಚು ಜನಸಂಖ್ಯೆ ಇರುವಂತಹ ಹಿಂದುಳಿದ ವರ್ಗಗಳ ಕಡಿಮೆ ಅವಕಾಶ ಇರುವ ಸಮುದಾಯವನ್ನು ಪರಿಗಣಿಸಿ ಉದಾಹರಣೆಗೆ ಸವಿತಾ ಸಮಾಜಕ್ಕೆ ಅತಿ ಕಡಿಮೆ ಅವಕಾಶ ಸಿಕ್ಕಂತಹ ಎಂ.ಸಿ.ವೇಣುಗೋಪಾಲ್ ರಂತವರನ್ನು ವಿಧಾನ ಪರಿಷತಿಗೆ ನಾಮನಿರ್ದೇಶನ ಮಾಡಲು ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವರ್ಗಗಳನ್ನು ಪರಿಗಣನೆಗೆ ತೆಗೆದುಕೊಳ್ಳಲು ಮತ್ತು ಇಂತಹ ತಳ ಸಮುದಾಯಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೂಕ್ತ ಸ್ಥಾನಮಾನ ನೀಡಿ ಪಕ್ಷಕ್ಕೆ ಸೆಳೆಯುವಂತೆ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದಾರೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ “ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಾಮಾಜಿಕ ನ್ಯಾಯದಡಿಯಲ್ಲಿ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮುಂದುವರಿದು ಸರ್ಕಾರದ ಮಹತ್ವಕಾಂಕ್ಷೆಯ ಪರಿಸ್ಕೃತ ಕಾಂತರಾಜು ವರದಿ ಪುನರ್ಪರಿಶೀಲಿಸಿ ಜಯಪ್ರಕಾಶ್ ಹೆಗಡೆಯರವರು ನೀಡಿರುವಂತಹ ವರದಿಯನ್ನ ಆದಷ್ಟು ಬೇಗ ಸಾರ್ವಜನಿಕವಾಗಿ ಅನುಷ್ಠಾನಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.

ರಾಜಕೀಯ ಪ್ರತಿನಿಧ್ಯವನ್ನು ಅತಿ ಹಿಂದುಳಿದವರ್ಗಗಳಿಗೆ ಅವಕಾಶ ಕಲ್ಪಿಸಬೇಕೆಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ, ಭಾರತೀಯ ಜನತಾ ಪಕ್ಷ ಮತ್ತು ಜಾತ್ಯತೀತ ಜನತಾ ದಳ ಮೂರು ಪಕ್ಷಗಳ ಅಧ್ಯಕ್ಷರು ಮತ್ತು ಮುಖಂಡರುಗಳು ಪರಿಗಣಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜು, ಖಜಾಂಚಿಗಳಾದ ಎಲ್.ಎ.ಮಂಜುನಾಥ್ ಹಾಗೂ ಸದಸ್ಯರಾದ ಮಂಜುನಾಥ್, ಶಿವಶಂಕರ್, ಚಂದ್ರಶೇಕರ್ ರಾಜು ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.