ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ / ಸಾಧಕರಿಗೆ /ಪರಿಣಿತರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಒತ್ತಾಯ

ಮಡಿವಾಳ ಸಮಾಜದ ಅರ್ಹ ವ್ಯಕ್ತಿಗೆ / ಸಾಧಕರಿಗೆ /ಪರಿಣಿತರನ್ನು ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡುವ ಬಗ್ಗೆ.

ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಹಾಗೂ ನಿರ್ಲಕ್ಷಿತ ಸಮುದಾಯವಾಗಿದೆ. ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಹಿಂದುಳಿದಿರುವಿಕೆ, ಆರ್ಥಿಕ ದುರ್ಬಲತೆ, ಕಡಿಮೆ ಪ್ರಮಾಣದ ಜನಸಂಖ್ಯೆ ಹಾಗೂ ರಾಜಕೀಯ ಪ್ರಾತಿನಿಧ್ಯ ಮತ್ತು ಸ್ಥಾನಮಾನ ಇಲ್ಲದಿರುವುದು ಈ ಸಮುದಾಯ ಹಿಂದುಳಿಯಲು ಪ್ರಮುಖ ಕಾರಣಗಳಾಗಿವೆ.

ಸ್ವಾತಂತ್ರ್ಯಾ ನಂತರದ 77 ವರ್ಷಗಳ ಬಳಿಕವೂ ಸಹ ಕರ್ನಾಟಕ ರಾಜ್ಯದಲ್ಲಿ ಮಡಿವಾಳ ಸಮುದಾಯಕ್ಕೆ ಯಾವುದೇ ರೀತಿಯ ರಾಜಕೀಯ ಪ್ರಾತೀನಿಧ್ಯ ಹಾಗೂ ಸ್ಥಾನಮಾನ ಲಭೀಸದಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ವರ್ತಮಾನದಲ್ಲಿನ ಚುನಾವಣೆ ವ್ಯವಸ್ಥೆಯಲ್ಲಿ ದೊಡ್ಡ ದೊಡ್ಡ ಹಾಗೂ ಬಲಾಡ್ಯ ಸಮುದಾಯಗಳ ನಡುವೆ ಸಣಸಾಡಿ ರಾಜಕೀಯ ಪ್ರಾತೀನಿಧ್ಯ ಪಡೆಯುವುದು ಅತ್ಯಂತ ಸಣ್ಣ ಸಮುದಾಯವಾದ ಮಡಿವಾಳ ಸಮಾಜಕ್ಕೆ ಸಾಧ್ಯವಿಲ್ಲದ ಸಂಗತಿಯಾಗಿದೆ.

ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಯಾದ ನಂತರ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತದ್ದು ಅತೀ ವಿರಳ ಹಾಗೂ ಅಲ್ಪ ಮಾತ್ರ 1980 ರಲ್ಲಿ ಜನತಾ ಪಕ್ಷದಿಂದ ಮಡಿವಾಳ ಸಮುದಾಯದ ವಿದ್ಯಾಧಾರ ಗುರುಜಿಯವರನ್ನು ಎಂ.ಎಲ್.ಸಿ. ಮಾಡಲಾಗಿತ್ತು. ತದನಂತರ 2008 ರಲ್ಲಿ ಶ್ರೀ ಎನ್. ಶಂಕರಪ್ಪ ರವರನ್ನು ಬಿಜೆಪಿ ಪಕ್ಷವು ಎಂ.ಎಲ್.ಸಿ. ಯಾಗಿ ಮಾಡಿತ್ತಾದರೂ ಕೇವಲ 2 ವರ್ಷಗಳಲ್ಲಿ ಅವರ ಸ್ಥಾನಪಲ್ಲಟ್ಟ ಮಾಡುವ ಮೂಲಕ ಮಡಿವಾಳ ಜನಾಂಗದ ರಾಜಕೀಯ ಪ್ರಾತೀನಿಧ್ಯವನ್ನು ಕಸಿದುಕೊಂಡಿತ್ತು. ತದನಂತರ ಮಡಿವಾಳ ಸಮುದಾಯಕ್ಕೆ ಯಾವುದೇ ರಾಜಕೀಯ ಸ್ಥಾನಮಾನ ಲಭ್ಯವಾಗಿರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದಿಂದ ಇದುವರೆವಿಗೂ ಮಡಿವಾಳ ಸಮುದಾಯಕ್ಕೆ ರಾಜಕೀಯ ಪ್ರಾತೀನಿಧ್ಯ ದೊರೆತಿರುವುದಿಲ್ಲ. ಈ ಜನಾಂಗದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಲು ಪ್ರಾತೀನಿಧ್ಯದ ಅವಶ್ಯಕತೆ ಇರುತ್ತದೆ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಎಂ.ಎಲ್.ಸಿ. ನಾಮ ನಿರ್ದೇಶನದಲ್ಲಿ ಮಡಿವಾಳ ಜನಾಂಗ ಅರ್ಹ ವ್ಯಕ್ತಿಯೊಬ್ಬರಿಗೆ ಪ್ರಾತೀನಿಧ್ಯ ನೀಡಬೇಕೆಂದು ಸಮಸ್ತ ಮಡಿವಾಳ ಜನಾಂಗದ ಪರವಾಗಿ ನಿವೇದಿಸಿಕೊಳ್ಳುತ್ತೇವೆ ಎಂದು ಸಿ. ನಂಜಪ್ಪ-ಅಧ್ಯಕ್ಷರು, ಬಿ.ಆರ್. ಪ್ರಕಾಶ್ – ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಘದ ಪ್ರಮುಖರುಗಳು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.