
ಲವ್ ಜಿಹಾದಿನಲ್ಲಿ ಸಿಲುಕಿರುವ ಮತ್ತು ಮುಂದೊಂದು ದಿನ ಸಿಲುಕಬಹುದಾದ ಸನಾತನ ಹಿಂದೂ ಧರ್ಮದ ಸಹೋದರಿಯರ ರಕ್ಷಣೆಗಾಗಿ ಶ್ರೀರಾಮ ಸೇನೆ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭಿಸುತ್ತಿದೆ.
ಸನಾತನ ಹಿಂದೂ ಸಮಾಜದ ಸಹೋದರಿಯರ ಮೇಲೆ ನಮ್ಮ ರಾಜ್ಯದ ಅನೇಕ ಕಡೆ ಲವ್ ಜಿಹಾದಿನ ಕಾರ್ಯಾಚರಣೆಯನ್ನು ಮುಸ್ಲಿಂ ಸಮುದಾಯದ ಯುವಕರು ಪ್ರತಿನಿತ್ಯ ನಡೆಸುತ್ತಿದ್ದಾರೆ!
ಇಡೀ ಭಾರತವನ್ನು ಇಸ್ಲಾಮೀಕರಣ ಮಾಡಬೇಕೆನ್ನುವ ಹುನ್ನಾರಕ್ಕೆ ಸಂಬಂಧಿಸಿದ ಹಾಗೆ ಮುಸ್ಲಿಂ ಸಮುದಾಯದ ಅನೇಕ ಯುವಕರು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ನಂತರ ಮದುವೆಗೆ ಮುನ್ನ ಇಸ್ಲಾಂ ಮತಕ್ಕೆ ಬಲವಂತವಾಗಿ ಮತಾಂತರ ಮಾಡುವುದೇ ಲವ್ ಜಿಹಾದ್. ಈ ಲವ್ ಜಿಹಾದ್ ಗೆ ಕನ್ನಡದಲ್ಲಿ ಮೋಸದ ಪ್ರೇಮಜಾಲ ಅಥವಾ ಮೋಸದ ಪ್ರೇಮ ಪಾಷ ಎಂದು ವಿವರಣೆ ನೀಡಬಹುದು.
ಪ್ರತಿ ದಿನ ಲವ್ ಜಿಹಾದ್ ಕಾರ್ಯಾಚರಣೆಗೆ ಇಳಿಯುವ ಮುಸ್ಲಿಂ ಯುವಕರು ಶಾಲೆಗಳ ಮುಂಭಾಗದಲ್ಲಿ ಮತ್ತು ಕಾಲೇಜುಗಳ ಮುಂಭಾಗದಲ್ಲಿ ಬಂದು ನಿಲ್ಲುವುದು, ಹೆಣ್ಣು ಮಕ್ಕಳ ಜೊತೆ ಅತ್ಯಂತ ವಿನಯದಿಂದ ಮಾತನಾಡುವುದು, ತಮಾಷೆ ಮಾಡುವುದು, ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು, ಬೈಕ್ ಗಳನ್ನು ತೆಗೆದುಕೊಂಡು ಬಂದು ವೀಲಿಂಗ್ ಮಾಡುವುದು, ಹೀಗೆ ಅನೇಕ ಮಾದರಿಗಳಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮೋಸದ ಲವ್ ಜಿಹಾದಿಗೆ ಸಿಲುಕಿಸುತ್ತಿದ್ದಾರೆ.
ಲವ್ ಜಿಹಾದ್ ಗೆ ಸಿಲುಕಿದ ಹಿಂದು ಹೆಣ್ಣು ಮಕ್ಕಳನ್ನು ಭಯೋತ್ಪಾದನೆಗೆ ಬಳಸಿಕೊಳ್ಳುವುದು, ಮಕ್ಕಳನ್ನು ಮಾತ್ರವೇ ಹೆರುವ ಯಂತ್ರಗಳನ್ನಾಗಿ ಬಳಸಿಕೊಳ್ಳುವುದು ಹಾಗೂ ಮಾದಕ ವಸ್ತುಗಳ ವ್ಯಸನಿಗಳನ್ನಾಗಿ ಮಾಡುತ್ತಾರೆ. ಲವ್ ಜಿಹಾದ್ ಗೆ ಬಲಿಯಾದ ಹೆಣ್ಣು ಮಕ್ಕಳ ಸಾವಿನ ವಿವರಗಳನ್ನು ಇಲ್ಲಿ ಪ್ರಕಟಿಸಿದ್ದೇವೆ. ಬೆಚ್ಚಿ ಬೀಳಿಸುವ ಲವ್ ಜಿಹಾದ್ ಹೆಸರಲ್ಲಿ ನಡೆದ ಹತ್ಯೆಗಳ ಅಂಕೆ ಸಂಖ್ಯೆಗಳು.
ಉತ್ತರ ಭಾರತದಲ್ಲಿ 2022- 2023 ರಲ್ಲಿ ಒಟ್ಟು 153 ಹಿಂದೂ ಯುವತಿಯರ ಬರ್ಬರ ಕೊಲೆಗಳು. ಇದರಲ್ಲಿ ಉತ್ತರ ಪ್ರದೇಶ -69, ಮಧ್ಯ ಪ್ರದೇಶ -22, ಗುಜರಾತ್ -12, ಉತ್ತರಾಖಂಡ 11, ಮಹಾರಾಷ್ಟ್ರ -9 ಇತ್ಯಾದಿ. ಇದರಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯರು 27.5%, ಯುವತಿಯರು 72.5%, ದಲಿತ ಯುವತಿಯರು 15%, ಇತರ ಜಾತಿಗಳು 85%. ಮುಸ್ಲಿಂ ಎಂಬುವುದನ್ನು ಮರೆಮಾಚಿ ನಡೆಸಿದ ಲವ್ ಜಿಹಾದ್ ಕೇಸುಗಳು 62.1%. ಮುಸ್ಲಿಂ ಅಂತ ಬಹಿರಂಗಪಡಿಸಿದ್ದು 37.9%.

ಬುರ್ಖಾ,ಗೋಮಾಂಸ, ಅನೈತಿಕಮತ್ತು ಅನೈಸರ್ಗಿಕ ಕಾಮ,ಅಶ್ಲೀಲ ವಿಡಿಯೋ,ಫೋಟೋ ಮೂಲಕ ಬೆದರಿಸಿ ಅತ್ಯಾಚಾರ ಮಾಡುವುದು, ಇಸ್ಲಾಂ ಮತವನ್ನು ಸ್ವೀಕರಿಸಲು ಒತ್ತಡ ಹೇರಿ ನಡೆದಂತಹ ಕೊಲೆಗಳು-81%. ದೇಶದಲ್ಲಿ ಪ್ರತಿನಿತ್ಯ 172 ಯುವತಿಯರು ನಾಪತ್ತೆ,173 ಯುವತಿಯರ ಅಪಹರಣ,5 ಯುವತಿಯರು ವೈಶ್ಯವಾಟಿಕೆ ದೂಡುವುದು.
2019 ರಿಂದ 2021 ರ ವರೆಗೆ ಅಂದ್ರೆ 2 ವರ್ಷದಲ್ಲಿ 13 ಲಕ್ಷ 13 ಸಾವಿರ ಕೇಸ್ ಗಳು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,51,430 ಬಾಲಕಿಯರು ಹಾಗೂ 18 ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರು ನಾಪತ್ತೆ, ಇಂತಹ ಅಪಹರಣ, ವೇಶ್ಯಾವಾಟಿಕೆ, ಅತ್ಯಾಚಾರ, ಭಯೋತ್ಪಾದನೆಗೆ ನೇಮಕ,ಮಾರಾಟ, ದೇಶದ ರಕ್ಷಣಾ ಗೌಪ್ಯತೆ ಕಳವು, ಅಕ್ರಮ ಶಸ್ತ್ರಸ್ತ್ರ ಸಾಗಾಟ,ಕಾನೂನು ಬಾಹಿರ ಮಾದಕ ದ್ರವ್ಯ ಸಾಗಾಟ,ಮಾರಾಟ, ಭಯೋತ್ಪಾದಕರೊಂದಿಗೆ ನಂಟು ಮುಂತಾದವುದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗಳು ನಡೆಯುತ್ತಿವೆ. ನಮಗೆ ಕರ್ನಾಟಕದ ರಾಜ್ಯ ಸರ್ಕಾರದಿಂದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಗೃಹ ಇಲಾಖೆಯಿಂದ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾದಂತಹ ಸಹಕಾರ ಸಿಗುತ್ತಿಲ್ಲ.
ನಮ್ಮ ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ. ಆದುದರಿಂದಲೇ ಶ್ರೀರಾಮ ಸೇನೆಯು ಲವ್ ಜಿಹಾದಿಗೆ ಸಿಲುಕಿರುವ ಹಾಗೂ ಮುಂದೊಂದು ದಿನ ಸಿಲುಕಬಹುದಾದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಲವ್ ಜಿಹಾದಿಗೆ ವಿರುದ್ಧವಾಗಿ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭಿಸಿದೆ.
ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ 24*7 ಸಹಾಯವಾಣಿ ಸಂಖ್ಯೆ 9090443444
ಲವ್ ಜಿಹಾದ್ ಗೆ ಬಲಿಯಾದ ಯುವತಿಯರು, ಅವರುಗಳ ಪೋಷಕರು, ಅವರುಗಳ ಬಂಧು ಮಿತ್ರರು ಮತ್ತು ಎಲ್ಲಾ ಜನಸಾಮಾನ್ಯರು ಈ ಸಹಾಯವಾಣಿಯನ್ನು ಬಳಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಶ್ರೀರಾಮ ಸೇನೆಯು ನಿರಂತರವಾಗಿ ಹಿಂದೂ ಮಕ್ಕಳ ರಕ್ಷಣೆಗಾಗಿ ಸದಾ ಸಿದ್ಧವಿರುತ್ತದೆ ಎಂದು ಪ್ರೆಸ್ ಕ್ಲಬ್ ಎಸ್ ಆಫ್ ಬೆಂಗಳೂರ್ ನಲ್ಲಿ ಭಾಸ್ಕರನ್,ಅಧ್ಯಕ್ಷರು ಬೆಂಗಳೂರು ನಗರ ತಿಳಿಸಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ವೈ ಡಿ ಅಮರ್ನಾಥ್ – ವಿಭಾಗ ಅಧ್ಯಕ್ಷರು, ಶ್ರೀ ಸುಂದರೇಶ್ ನರ್ಗಲ್ – ಪ್ರಧಾನ ಕಾರ್ಯದರ್ಶಿ ಬೆಂಗಳೂರು ನಗರ, ಶ್ರೀ ರಮೇಶ್ ಗೌಡ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು, ಶ್ರೀ ನಾಗಾರ್ಜುನ ಗೌಡ ಸಿಎಂ – ರಾಮನಗರ ಜಿಲ್ಲೆಯ ಅಧ್ಯಕ್ಷರು, ಶ್ರೀ ರಮೇಶ್ ರಾಜ್ ವಿಭಾಗ ಅಧ್ಯಕ್ಷರು ಕೋಲಾರ ಜಿಲ್ಲೆ ಮತ್ತು ಶ್ರೀಮತಿ ಭವ್ಯ ಸಂತೋಪ್ ದುರ್ಗಾ ಸೇನೆ ಬೆಂಗಳೂರು ನಗರ ಪಾಲ್ಗೊಂಡರು.
City Today News 9341997936
