ನ್ಯಾಯಾಲಯದ ಆದೇಶಗಳಿದ್ದರೂ ಮುಜರಾಯಿ ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ದಲಿತರ ಬೇಡಿಕೆಗಳ ಬಗ್ಗೆ ತುರ್ತು ಕ್ರಮಕ್ಕಾಗಿ ಒತ್ತಾಯ

ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯಲ್ಲಿ ನಡೆಯುತ್ತಿರುವ ದಲಿತ ವಿರೋಧ ನೀತಿಯ ಬಗ್ಗೆ ಹಾಗೂ ಘನ ಉಚ್ಚನ್ಯಾಯಾಲಯದ ಆದೇಶವನ್ನು ಕಡೆಗಣಿಸುತ್ತಿರುವ ಸಚಿವರು ಇಲಾಖೆಯ ಎಲ್ಲಾ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ.

1) ಸರ್ಕಾರದ ಆದೇಶದ ಸಂಖ್ಯೆ.ಕಂ.ಇ.54 ಮೂ.ಸೇ.ವಿ.2017 ದಿನಾಂಕ:17-07-2019ರ ಆದೇಶದ ಕ್ರಮವೇನೆಂದರೆ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು 5 ವರ್ಷ ತುಂಬಿದ ನಂತರ ಅಂತಹವರನ್ನು ವೇತನ ಶ್ರೇಣಿ ನೀಡಿ ಖಾಯಂಗೊಳಿಸಬೇಕೆಂದು ಇರುತ್ತದೆ. ಆದರೆ ಇಲಾಖೆಯ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕಾನೂನುಗಳನ್ನು ಗಾಳಿಗೆ ತೂರಿ ತಮ್ಮ ಇಚ್ಛಾನುಸಾರ ನಡೆದುಕೊಂಡು ಇಲಾಖೆಯು ದಲಿತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುತ್ತಾರೆ.

2) ವಂಶಪಾರಂಪರವಾಗಿ ಸೌಬೀನ ಸುಬ್ಬರಾವ್ ಚಾರಿಟೀಸ್‌ನ ವಹಿವಾಟುದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಮತಿ.ಬಿ.ವಿ.ಶಶಿಕಲಾ ರವರನ್ನು ಶ್ರೀರಾಮೇಶ್ವರ ದೇವಸ್ಥಾನದ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಿಕೊಂಡಿರುವುದು ಸರ್ಕಾರದ ಯಾವುದೇ ಆದೇಶದಲ್ಲಿ ಅನ್ವಯ ಆಗದೆ ಇರುವ ಹುದ್ದೆ ನೀಡಲು ಇಲಾಖೆಯ ಎಲ್ಲಾ ಆದೇಶಗಳನ್ನು ಗಾಳಿಗೆ ತೂರಿದೆ.

3) ಇಲಾಖೆಯಲ್ಲಿ ನೌಕರರು 5 ವರ್ಷದ ಮೇಲ್ಪಟ್ಟು ಸೇವ ಸಲ್ಲಿಸಿದೆ. ಅಂದರೆ ಸಂಚಿತವೋಚರ್ ১৯.৯০.৬. ದಿನಗೂಳಿ ಹಂಗಾಮಿ ನಿಗಧಿತ ವೇತನ ಪಡೆದಿರುವಂತಹ ನೌಕರರನ್ನು ವೇತನ ಶ್ರೇಣಿ ನಿಗಧಿಪಡಿಸಿ ಖಾಯಂಗೊಳಿಸಲು ಅವಕಾಶವಿದ್ದರೂ ಕೂಡ ದಲಿತರು ಎಂಬ ಒಂದೇ ಕಾರಣಕ್ಕೆ 1) ಗೀತಾ ಪ್ರಸನ್ನ ವಿರಾಂಜನೇಯ ಸ್ವಾಮಿ ದೇವಾಲಯದಲ್ಲಿ ಟ್ರಸ್ಟಿ ಕಾಲದಿಂದಲೂ ಸುಮಾರು 20 ರಿಂದ 25 ವರ್ಷಗಳಿಂದ ಸ್ವಚ್ಛಗಾರರಾಗಿ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದರೂ ಇವರಿಗೆ ವೇತನ ಶ್ರೇಣಿ ನೀಡಿ ಖಾಯಂಗೊಳಿಸಿ ಇಲಾಖೆಯ ಆದೇಶಗಳಲ್ಲಿ ಅವಕಾಶವಿದ್ದರೂ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

4) ಸುಮಾರು 12 ವರ್ಷಗಳಿಂದ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಸ್ವಾವಂಜರ್ ಆಗಿ 1) ರೇವತಿ, 2) ಮಹಾಲಕ್ಷ್ಮೀ, 3) ಗಂಗಾಧರ್, ಇವರುಗಳು ಕೋವಿಡ್-19 ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿರುತ್ತಾರೆ. ಇವರುಗಳನ್ನು ಏಕಾಏಕೀ ಯಾವುದೇ ನೋಟಿಸು ನೀಡದೆ ದಲಿತರೆಂದು ಒಂದೇ ಕಾರಣವನ್ನು ಇಟ್ಟುಕೊಂಡು ಕೆಲಸದಿಂದ ತೆಗೆದಿರುತ್ತಾರೆ. ಅವರು ಕೂಡಲೆ ಆಯುಕ್ತರಿಗೆ ಮನವಿ ಮಾಡಿಕೊಳ್ಳಲಾಗಿ ಇಲಾಖೆಯು ಯಾವುದೇ ಕ್ರಮಕೈಗೊಳ್ಳದಿದ್ದಾಗ ವಿಧಿಯಿಲ್ಲದೆ ಘನ ಉಚ್ಛನ್ಯಾಯಾಲಯಕ್ಕೆ ಮೊರೆಹೋಗಲಾಯಿತು. ನ್ಯಾಯಲಯವು W.P.8873/ 2021/(S-RES) ರಂತೆ ಇವರುಗಳನ್ನು ಕೆಲಸದಿಂದ ತೆಗೆದ ದಿನಾಂಕದಿಂದ ಎಲ್ಲಾ ಸವಲತ್ತುಗಳನ್ನು ನೀಡಿ ಬಾಕಿ ಸಂಬಳವನ್ನು ನೀಡಿ ವೇತನ ನಿಗದಿ ಮಾಡಿ ಖಾಯಂಗೊಳಿಸುವವರೆಗೆ ಇವರನ್ನು ಕೆಲಸದಲ್ಲಿ ಮುಂದುವರಿಸಬೇಕೆಂದು ಆದೇಶವಿದ್ದರೂ ನ್ಯಾಯಾಲಯದ ಆದೇಶವನ್ನು ತಿರಸ್ಕರಿಸಿ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ.

5) ಪರಿಶಿಷ್ಟ ಜಾತಿಯ ಆಂಜನೇಯಲು ಎಂಬುವವರು ಕಳೆದ 20 ವರ್ಷಗಳಿಂದ ಶ್ರೀರಾಮೇಶ್ವರ ಕಲ್ಯಾಣ ಮಂಟಪ ಇಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದ 01-07-2021 ರಂದು ವೇತನ ಶ್ರೇಣಿ ನೀಡಲಾಗಿತ್ತು. ದಿನಾಂಕ: 25-12-2021 ರಂದು ಅಕಾಲ ಮರಣಕ್ಕೆಯಿಡಾದರು. ನಮ್ಮ ಬಡ ದಲಿತ ಕುಟುಂಬಕ್ಕೆ ಇವರೆ ಮುಖ್ಯವಾಗಿದ್ದರು. ಇವರ ಮರಣದ ನಂತರ ಅವರ ಕುಟುಂಬದ ಜೀವನಕ್ಕೆ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ತೊಂದರೆಯಾಗಿ ಅನಾಥರಾಗಿರುತ್ತಾರೆ. ಇವರ ಸರಳ ಜೀವನಕ್ಕೆ ಆಂಜನೇಯಲುರವರ ನಂತರ ಇವರ ಶ್ರೀಮತಿ.ನಲ್ಲಮ್ಮನವರು ತನ್ನ ಮಗನಾದ ಮಂಜುನಾಥ್.ಎಂ ರವರಿಗೆ ಅನುಕಂಪದ ಆಧಾರದ ಮೇಲೆ ಆಂಜನೇಯಲುರವರ ತೆರವಾದ ಸ್ಥಾನಕ್ಕೆ ನೌಕರಿಕೊಟ್ಟು, ವೇತನದಲ್ಲಿ ಕಡಿತಗೊಳಿಸುತ್ತಿದ್ದ ಪಿ.ಎಫ್.ಹಣವನ್ನು ಅವರ ಧರ್ಮಪತ್ನಿಯಾದ ಶ್ರೀಮತಿ.ನಲ್ಲಮ್ಮರವರಿಗೆ ನೀಡಿ, ಅವರ ಬಡ ಕುಟುಂಬವನ್ನು ಸರಳ ಜೀವನಕ್ಕೆ ಅವಕಾಶ ಕಲ್ಪಿಸಿಕೊಡಲು ಅನೇಕ ಮನವಿಗಳನ್ನು ನೀಡಿ ಹಂಗಾಲಾಚಿದರೂ ಕೂಡ ಇಲಾಖೆಯ ಯಾವುದೇ ಅಧಿಕಾರಿ ಗಮನ ಹರಿಸದಿರುವುದು ದಲಿತ ವಿರೋಧಿ ನೀತಿಯಲ್ಲವೇ ಆದರೆ ರಾಜ್ಯದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ ಎಲ್ಲಾ ದೇವಾಲಯಗಳ ಹಂಗಾಮಿ ನೌಕರರುಗಳಿಗೆ ವೇತನ ಶ್ರೇಣಿ ನೀಡಿ ಖಾಯಂಗೊಳಿಸಲು ಒತ್ತಾಯಿಸಿದೆ.

6) ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಕೋರ ಹೋಬಳಿ, ಎಂ.ಗೊಲ್ಲಹಳ್ಳಿಯ ಕಾಂಗ್ರೇಸ್ ಕಾರ್ಯಕರ್ತರ ಹಾಗೂ ಎಂ.ಗೊಲ್ಲಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಾಲಯದ ಕಾರ್ಯದರ್ಶಿಯಾದ ಜಿ.ಹನುಮಂತರಾಯಪ್ಪನವರ ಮೇಲೆ ದಿನಾಂಕ:

21-03-2024 ರಂದು ದೌರ್ಜನ್ಯ ನಡೆಸಿ ಪಬ್ಲಿಕ್ ರಸ್ತೆಯಲ್ಲಿ ಜಾತಿ ನಿಂದನೆ ಮಾಡಿ ದೇವಾಲಯದ ದಾಸೋಹದಲ್ಲಿ ಹಾಗೂ ದೇವಾಲಯದಲ್ಲಿ ಸೇರಿಸದೆ ಅಶ್ರುಷ್ಯತೆ ಆಚರಣೆ ಮಾಡಿರುವ ಬಗ್ಗೆ ದಿನಾಂಕ: 05-04-2024 ರಂದು ಹನುಮಂತರಾಯಪ್ಪನವರ ಅಡಿಕೆ ತೆಂಗಿನ ತೋಟಕ್ಕೆ ಬೆಂಕಿ ಇಟ್ಟಿರುವ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದಿನಾಂಕ: 06-04-2024 ರಂದು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಈ ವಿಚಾರದಲ್ಲಿ ದಿನಾಂಕ: 27-04-2024 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು 30-04-2024 ರಂದು ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೇಂದ್ರ ವಲಯರವರಿಗೆ 30-04-2024 ರಂದು ದೂರು ನೀಡಿದ್ದು, ಇನ್ಸ್‌ಪೆಕ್ಟ‌ರ್ ಜನರಲ್‌ ಆಫ್ ಪೊಲೀಸ್ ನಾಗರೀಕ ಹಕ್ಕು ಜಾರಿದಳದವರಿಗೆ ದೂರು ನೀಡಿ ಆದೇಶ ನೀಡಿದ್ದರೂ ಡಿ.ವೈ.ಎಸ್.ಪಿ ತುಮಕೂರು ಉಪವಿಭಾಗ ಮತ್ತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯವರು ಯಾವುದೇ ಕ್ರಮಕೈಗೊಳ್ಳದೇ ಅಪರಾಧಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರ ನಡೆಸಿರುತ್ತಾರೆ. ಗೃಹ ಮಂತ್ರಿಗಳ ಕ್ಷೇತ್ರದಲ್ಲಿ ಈ ರೀತಿ ಅನ್ಯಾಯ ಆದರೆ ಇನ್ನು ಈ ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಸಿಗಲು ಸಾಧ್ಯವೇ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಗಮನಹರಿಸಿ ಅಪರಾಧಿಗಳನ್ನು ಬಂಧಿಸಿ ಕಾನೂನು ರೀತ್ಯಾ ಕೇಸು ದಾಖಲು ಮಾಡಿ ಜಿ.ಹನುಮಂತರಾಯಪ್ಪನವರಿಗೆ ನ್ಯಾಯಾ ದೊರೆಕಿಸಿಕೊಡಬೇಕು. ಇಲ್ಲವಾದರೆ ನಮ್ಮ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ತಮಟೆ ಚಳುವಳಿ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಖಿಲ ಭಾರತ ದಲಿತ ಮಹಾಸಭಾ ವತಿತಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ ಡಾ॥ ಭೀಮರಾಜ್ -ರಾಜ್ಯಾಧ್ಯಕ್ಷರು,ಅಮರನಾರಾಯಣ.ಎನ್- ರಾಜ್ಯ ಕಾರ್ಯದರ್ಶಿ ಮತ್ತು ಮೂರ್ತಿ.ಎನ್- ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.

City Today News 9341997936

Leave a comment

This site uses Akismet to reduce spam. Learn how your comment data is processed.