
8-1-2024 ರಿಂದ 20-01-2024 ರ ವರೆಗೆ ಕೋಲಾರ ಜಿಲ್ಲೆ, ಮಾಲೂರು ವಿಧಾನ ಸಭಾ ಸದಸ್ಯರಾದ ಶ್ರೀ.ಕೆ.ವೈ. ನಂಜೇಗೌಡ, ರವರು ಅಧ್ಯಕ್ಷರಾಗಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನಿಗಮದಲ್ಲಿ 2023 ನೇ ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಿದ ನೇಮಕಾತಿಯಲ್ಲಿ ಅಧ್ಯಕ್ಷರು ಮತ್ತು ಅವರ ಜೊತೆಯಲ್ಲಿ ನೇಮಕಾತಿಯಲ್ಲಿ ತೊಡಗಿಸಿಕೊಂಡಿದ್ದ ಸದಸ್ಯರು ಮತ್ತು ಅಧಿಕಾರಿಗಳು ಲಂಚ ಪಡೆದು ಅಕ್ರಮವಾಗಿ ನೇಮಕಾತಿಯನ್ನು ನಡೆಸಿರುವುದಾಗಿ ಜಾರಿ ನಿರ್ದೇಶನಾಲಯದ ವರದಿಯಿಂದ ಕಂಡು ಬಂದು ಮಾನ್ಯ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗಿ ಲೋಕಾಯುಕ್ತ ಪ್ರಥಮ ತನಿಖೆಯಲ್ಲಿಯೂ ಮೇಲ್ನೋಟಕ್ಕೆ ಹಾಲು ಒಕ್ಕೂಟದ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಸದ್ಯ ಮಾನ್ಯ ಪೋಲೀಸ್ ಅಧಿಕ್ಷಕರು ಕರ್ನಾಟಕ ಲೋಕಾಯುಕ್ತ ಕೋಲಾರ ರವರು ಅರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರಗಳಿಂದ ಕಲಂ:17(A) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ ಕಾಯ್ದೆ-2018) ರೀತ್ಯಾ ಪೂರ್ವಾನುನತಿ ಕೊಡಿಸಲು ಸದರಿ ವರದಿಯನ್ನು ಮಾನ್ಯ ಪೋಲಿಸ್ ಮಹಾ ನಿರ್ದೇಶಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಅವರಿಗೆ ವರದಿ ಸಲ್ಲಿಸಿ ಮನವಿ ಮಾಡಿದ್ದು, ತ್ವರಿತವಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ನೀಡಬೇಕು. ಹಾಗೂ ಕೋಚಿಮೂಲ್ ನ ಅಧ್ಯಕ್ಷರು ಮಾನ್ಯ ನಂಜೇಗೌಡ ಶಾಸಕರು ಮಾಲೂರು ವಿಧಾನಸಭಾ ಕ್ಷೇತ್ರ ಇವರು ಅಡಳಿತ ಪಕ್ಷದ ಸದ್ಯಸ್ಯರು ಆಗಿದ್ದು ಯಾವುದೇ ಕಾರಣಕ್ಕು ಅಧಿಕಾರಿಗಳ ಮೇಲೆ ಒತ್ತಡ ತರುವುದು ಅಥವ ತನಿಖೆ ನಿಧಾನವಾಗಿ ನಡೆಯುವಂತೆ ಮಾಡುವುದು, ಅಥವ ಅರೋಪಿಗಳನ್ನು ರಕ್ಷಿಸುವ ಕೆಲಸವಾಗಲಿ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿ ಬೆಂಗಳೂರು ನಗರದ ಪ್ರೇಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರು, ಆನಂದ್ ಕುಮಾರ್ ಎಸ್.ಜಿ ಹಾಗೂ ಖಜಾಂಚಿ ಆನಂದ್ ಕುಮಾರ್ ಎಚ್.ಆರ್ “ಪ್ರಜಾ ಜಾಗೃತಿ ವೇದಿಕೆ (ರಿ.) (Citizens’ Awareness Forum (R.)ವತಿಯಿಂದ ಹೇಳಿಕೆ ನೀಡಿದರು.
City Today News 9341997936
