
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶ್ರೀ ನರೇಂದ್ರ ಮೋದಿಜಿಯವರು ಭಾರತದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ಸಂದರ್ಭದಲ್ಲಿ ಇಡೀ ಭಾರತದ ಮಾದಿಗ ಸಮುದಾಯದ ಪರವಾಗಿ ಅವರಿಗೆ ಮತ್ತು ಕರ್ನಾಟಕದಿಂದ ಆಯ್ಕೆಯಾದ ಮಂತ್ರಿಗಳಿಗೆ ಹಾಗೂ ಮಾದಿಗ ಸಮುದಾಯದ ಲೋಕಸಭಾ ಸದಸ್ಯರಾಗಿ ಕರ್ನಾಟಕದಿಂದ ಆಯ್ಕೆಯಾಗಿರುವ ಶ್ರೀ ರಮೇಶ್ ಜಿಗಜಿಣಿಗಿ ಮತ್ತು ಶ್ರೀ ಗೋವಿಂದ ಕಾರಜೋಳ ರವರಿಗೆ ಅಭಿನಂದನೆಗಳು.
ಮಾದಿಗ ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದ್ದು ಸ್ವಾತಂತ್ರ ಬಂದಾಗಿನಿಂದಲೂ ನಿರಂತರವಾಗಿ ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿದೆ. 1984 ರ ನಂತರ ಶ್ರೀ ರಮೇಶ ಜಿಗಜಿಣಗಿ ಮತ್ತು ಶ್ರೀ ಗೋವಿಂದ ಕಾರಜೋಳರವರು ಶ್ರೀ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಜನತಾ ಪಕ್ಷವನ್ನು ಬೆಳೆಸಿದರು ಇದರ ಪರಿಣಾಮ ಕರ್ನಾಟಕದಲ್ಲಿ ಜನತಾ ಪಕ್ಷ 44 ಶಾಸಕರಿಂದ 84 ಶಾಸಕರು ಗೆದ್ದು ಬಂದರು. ಈ ಮಾತನ್ನು ಬೆಂಗಳೂರಿನ ಸಭೆಯೊಂದರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ಲಾಲಕೃಷ್ಣ ಅಡ್ವಾಣಿಯವರು ತುಂಬು ಮನಸ್ಸಿನಿಂದ ಶ್ರೀ ರಮೇಶ ಜಿಗಜಿಣಗಿ ಮತ್ತು ಶ್ರೀ ಗೋವಿಂದ ಕಾರಜೋಳ ಅವರನ್ನು ಅಭಿನಂದಿಸಿದರು.

ನಂತರದ ದಿನಗಳಲ್ಲಿ 1984 ರಿಂದ ಇದುವರೆವಿಗೆ ಮಾದಿಗ ಸಮುದಾಯದ ನಾಯಕರು ಮತ್ತು ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು ಬಿಜೆಪಿಯ ಭಾಗವಾಗಿ ಇಂದು ಮಾದಿಗ ಸಮುದಾಯ ನಿಂತಿದೆ. ಈ ಸಮುದಾಯ ಬಿಜೆಪಿ ಪರವಾಗಿ ನಿಂತಿದೆ ಎಂದು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿವೆ.
ಆದರೆ ಇತ್ತೀಚಿನ 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮಾದಿಗ ಸಮಾಜ ಬಿಜೆಪಿ ಪರವಾಗಿ ನಿಂತಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಬಿಜೆಪಿ ದಲಿತ ವಿರೋಧಿ ಮತ್ತು ಬಿಜೆಪಿ ಗೆದ್ದರೆ ಮೀಸಲಾತಿಯನ್ನು ತೆಗೆದು ಹಾಕುತ್ತಾರೆ. ಸಂವಿಧಾನ ವಿರೋಧಿ, ದಲಿತರಿಗೆ ಅವಕಾಶಗಳನ್ನು ಕೊಡುವುದಿಲ್ಲ ಎಂದು ನಿರಂತರವಾಗಿ ದಾಳಿ ಮಾಡಿದಾಗ, ಬಿಜೆಪಿ ಪರವಾಗಿ ನಿಂತು ಪಕ್ಷದ ಪರ ಕೆಲಸ ಮಾಡಿದವರು ಮಾದಿಗ ಸಮುದಾಯದವರು,
ಭಾರತದಲ್ಲಿ ಅತಿದೊಡ್ಡ ಸಮುದಾಯವಿರುವ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸರ್ಕಾರ ರಚನೆ ಸಮಯದಲ್ಲಿ ಮಂತ್ರಿ ಮಂಡಲದಲ್ಲಿ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯವನ್ನು ಕೊಡದೆ ಇರುವುದು ಮಾದಿಗ ಸಮಾಜ ದಿಗ್ದಮೆಗೊಂಡಿದೆ. ವಿಶೇಷವಾಗಿ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿರುವ ಅಪಾರ ಸಂಖ್ಯೆಯ ಮಾದಿಗ ಸಮುದಾಯಕ್ಕೆ ಆಘಾತಗೊಂಡಿದೆ.
ಯಾವ ಮಾದಿಗ ಸಮುದಾಯ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳನ್ನು ಎದುರು ಹಾಕಿಕೊಂಡು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣೀಬೂತವಾಗಿತ್ತು ಆ ಬಿಜೆಪಿ ಇಂದು ಮಾದಿಗ ಸಮುದಾಯಕ್ಕೆ ನೋವು, ಅವಮಾನ ಮತ್ತು ತಿರಸ್ಕಾರವನ್ನು ಮಾಡಿದೆ. ಸಮುದಾಯ ಆಕ್ರೋಶಗೊಂಡಿದೆ. ಆದ್ದರಿಂದ ಈ ಪತ್ರಿಕಾಗೋಷ್ಠಿಯ ಮೂಲಕ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿಯವರನ್ನು ಮತ್ತು ಬಿಜೆಪಿ ಮುಖಂಡರನ್ನು ಕರ್ನಾಟಕದ ಮಾದಿಗ ಸಮುದಾಯಕ್ಕೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ನೀಡಬೇಕೆಂದು ಶ್ರೀ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿಯವರ ನೇತೃತ್ವದಲ್ಲಿ ಆಗ್ರಹಿಸುತ್ತೇವೆ. ಒತ್ತಾಯಿಸುತ್ತೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಸೂಕ್ತ ನಿರ್ಧಾರ ಮತ್ತು ಉತ್ತರ ಕೊಡಲಿದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಷಡಕ್ಷರಿ ಮುನಿದೇಶಿಕೇಂದ್ರ ಸ್ವಾಮೀಜಿ ಆದಿಜಾಂಬವ ಬೃಹನ್ಮಠ ಕೋಡಿಹಳ್ಳಿ,ಬಿ.ಆರ್. ಮುನಿರಾಜ್- ರಾಜ್ಯಾಧ್ಯಕ್ಷರು ಜೈ ಮಾದಿಗರ ಬೌದ್ಧಿಕ ವೇದಿಕೆ,ಮುತ್ತುರಾಜು-ಅಧ್ಯಕ್ಷರು ಅಹಿಂದ ಹೋರಾಟ ಸಮಿತಿ ಮತ್ತು ಸಿದ್ಧರಾಜು-ರಾಜ್ಯಾಧ್ಯಕ್ಷರು ಆದಿ ಜಾಂಬವ ಸಂಘದ ವತಿಯಿಂದ ಉಪಸ್ಥಿತರಿದ್ದರು.
City Today News 9341997936
