ಜೆಇಇ ಅಡ್ವಾನ್ಸ್ಡ್ 2024 ರಲ್ಲಿ ಬೆಂಗಳೂರಿನ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) 4 ವಿದ್ಯಾರ್ಥಿಗಳಿಗೆ ಟಾಪ್ RANK

ಬೆಂಗಳೂರು, ಜೂನ್ 09, 2024: ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳ ಕ್ಷೇತ್ರದಲ್ಲಿ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಬೆಂಗಳೂರು ಶಾಖೆಯ ನಾಲ್ವರು ವಿದ್ಯಾರ್ಥಿಗಳು ಪ್ರತಿಷ್ಠಿತ ಜೆಇಇ ಅಡ್ವಾನ್ಸ್ಡ್ 2024 ಪರೀಕ್ಷೆಯಲ್ಲಿ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದು ಮಹತ್ಸಾಧನೆ ಮಾಡಿದ್ದಾರೆ. ಈ ಗಮನಾರ್ಹ ಸಾಧನೆಯು ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು AESL ಒದಗಿಸಿದ ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ಈ ಪ್ರತಿಷ್ಠಿತ ಫಲಿತಾಂಶವನ್ನು ಇಂದು ಐಐಟಿ ಮದ್ರಾಸ್ ಪ್ರಕಟಿಸಿದೆ.
ಸಂಸ್ಥೆಯ ಕೃಷ್ಣ ಸಾಯಿ ಶಿಶಿರ್ ಅವರು ರಾಷ್ಟ್ರೀಯ ಮಟ್ಟದಲ್ಲಿ (AIR) 67 ನೇ ಸ್ಥಾನ ಪಡೆದಿದ್ದರೆ, ಅಭಿಷೇಕ್ ಜೈನ್ 78 ನೇ ಸ್ಥಾನ, ಸಾನ್ವಿ ಜೈನ್ 421 ನೇ ಸ್ಥಾನ ಮತ್ತು ಮೇಘಾರಾವ್ ಅವರು 896 ನೇ ಸ್ಥಾನ ಗಳಿಸಿ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈ ವಿದ್ಯಾರ್ಥಿಗಳು ಜಾಗತಿಕವಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ಜೆಇಇ ಅಡ್ವಾನ್ಸ್ಡ್ ಗೆ ಸಿದ್ಧತೆ ನಡೆಸುವ ಸಲುವಾಗಿ ಎಇಎಸ್ಎಲ್ ನ ತರಗತಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿದ್ದರು. ಇವರು ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನ ವೇಳಾಪಟ್ಟಿಯನ್ನು ಪಾಲಿಸುವ ಮೂಲಕ ಈ ಯಶಸ್ಸು ಸಾಧಿಸಿದ್ದಾರೆ. “ಆಕಾಶ್ ಸಂಸ್ಥೆಯು ನಮಗೆ ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಆದರೆ, AESL ನೀಡಿರುವ ವಿಷಯ ಮತ್ತು ತರಬೇತಿ ಇಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾವು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಈ ಅಸಾಧಾರಣ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL) ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು, “ಅತ್ಯುತ್ತಮ ಸಾಧನೆ ತೋರಿರುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲು ಬಯಸುತ್ತೇನೆ. ಅವರ ಈ ಸಾಧನೆಯು ಅವರ ಪರಿಶ್ರಮ ಮತ್ತು ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಅದೇ ರೀತಿ ಈ ಸಾಧನೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಪಾತ್ರವೂ ಸಾಕಷ್ಟಿದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ” ಎಂದರು.
ಪ್ರತಿವರ್ಷ ಐಐಟಿಗಳು ಜೆಇಇ ಮೇನ್ಸ್ ಅರ್ಹತೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಆಯೋಜಿಸುತ್ತವೆ. ಜೆಇಇ ಮೇನ್ ಅನ್ನು ದೇಶಾದ್ಯಂತ ಇರುವ ವಿವಿಧ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜೀಸ್ (ಎನ್ಐಟಿಗಳು) ಮತ್ತು ಇತರ ಕೇಂದ್ರ ಅನುದಾನಿತ ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗುತ್ತದೆ. ಇನ್ನು ಜೆಇಇ ಅಡ್ವಾನ್ಸ್ಡ್ ಅನ್ನು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ (ಐಐಟಿ)ಗಳ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿಗಳು ಜೆಇಇ ಮೇನ್ ಮತ್ತು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳೆರಡನ್ನೂ ತೆಗೆದುಕೊಳ್ಳುತ್ತಾರೆ. 2024 ನೇ ಸಾಲಿನ ಜೆಇಇ (ಅಡ್ವಾನ್ಸ್ಡ್) ಪೇಪರ್ 1 ಮತ್ತು ಪೇಪರ್ 2 ರ ಪರೀಕ್ಷೆಗೆ 1,80,200 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 48,248 ವಿದ್ಯಾರ್ಥಿಗಳು ಜೆಇಇ (ಅಡ್ವಾನ್ಸ್ಡ್) 2024 ಅರ್ಹತೆ ಪಡೆದಿದ್ದಾರೆ.
ಆಕಾಶ್ ಪ್ರೌಢಶಾಲೆ ಮತ್ತು ಪದವಿಪೂರ್ವ ಶಾಲೆ ವಿದ್ಯಾರ್ಥಿಗಳಿಗಾಗಿ ವಿವಿಧ ಕೋರ್ಸ್ ಗಳ ಮಾದರಿಗಳನ್ನು ವಿನ್ಯಾಸಗೊಳಿಸಿ ಅವರಿಗೆ ಸಮಗ್ರ ಐಐಟಿ-ಜೆಇಇ ತರಬೇತಿಯನ್ನು ನೀಡುತ್ತಿದೆ. ಇತ್ತೀಚೆಗೆ ಆಕಾಶ್ ಕಂಪ್ಯೂಟರ್ ಆಧಾರಿತ ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ತನ್ನ iTutor  ಪ್ಲಾಟ್ ಫಾರ್ಮ್ ಮೂಲಕ ಧ್ವನಿಮುದ್ರಿತ ವಿಡಿಯೋ ಬೋಧನೆಗಳನ್ನು ಪೂರೈಸುತ್ತಿದೆ. ಇದರ ಮೂಲಕ ವಿದ್ಯಾರ್ಥಿಗಳು ಸ್ವಯಂ ಆಧಾರದಲ್ಲಿ ಕಲಿಯಬಹುದು ಮತ್ತು ಯಾವುದೇ ತಪ್ಪಿ ಹೋದ ಅಭ್ಯಾಸಗಳನ್ನು ಪಡೆದುಕೊಳ್ಳಬಹುದಾಗಿದೆ. ಅದೇರೀತಿ, ನೈಜ ಪರೀಕ್ಷೆ ರೂಪದಲ್ಲಿಯೇ ಅಣಕು ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಪರೀಕ್ಷೆಯನ್ನು ಎದುರಿಸಲು ಸಿದ್ಧಪಡಿಸಲಾಗುತ್ತದೆ.

City Today News 9341997936

Leave a comment

This site uses Akismet to reduce spam. Learn how your comment data is processed.