
ಈ ಹಿಂದೆ ಲೋಕಸಭಾ ಚುನಾವಣೆ-2024 ದೃಷ್ಟಿಯಿಂದ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ವು ಚುನಾವಣೆ ಪೂರ್ವದಲ್ಲಿ ಮಾನ್ಯ ಶ್ರೀ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದೀಜಿರವರು ನಮ್ಮ ವಿಶ್ವಕರ್ಮ ಸಮಾಜಕ್ಕೆ ನೀಡಿದಂತ ವಿಶ್ವಕರ್ಮ ಸಮ್ಮಾನ್ ಯೋಜನೆ ಹಾಗೂ ಅಯೋಧ್ಯೆಯ ಶ್ರೀರಾಮ ಮೂರ್ತಿಯನ್ನು ಕೆತ್ತನೆ ಮಾಡಲು ವಿಶ್ವಕರ್ಮ ಸಮಾಜದವರೇ ಆದ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ರವರಿಗೆ ಅವಕಾಶ ಕಲ್ಪಿಸಿಕೊಟ್ಟು ಮಹತ್ತರವಾದ ಕಾರ್ಯವನ್ನು ನಮ್ಮ ವಿಶ್ವಕರ್ಮ ಸಮಾಜಕ್ಕೆ ನೀಡಿರುತ್ತಾರೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆ-2024 ಕ್ಕೆ ಬಿ.ಜೆ.ಪಿ / ಎನ್.ಡಿ.ಎ. ಮೈತ್ರಿಕೂಟಕ್ಕೆ ಅಖಿಲ ಭಾರತ ವಿಶ್ವಕರ್ಮ ಮಹಾಸಂಘವು ಬೆಂಬಲ ಸೂಚಿಸಿತ್ತು. ಅದರಂತೆ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟ ಬಹುಮತವನ್ನು ಪಡೆದು ಕೇಂದ್ರದಲ್ಲಿ ಸರ್ಕಾರವನ್ನು ಸ್ಥಾಪಿಸಿದೆ. ಈ ಬಹುಮತ ಪಡೆಯುವಲ್ಲಿ ವಿಶ್ವಕರ್ಮರ ಪಾಲೂ ಇದೆ. ಇದಕ್ಕಾಗಿ ಶ್ರಮಿಸಿದ ಭಾರತ ದೇಶದಲ್ಲಿರುವ ಎಲ್ಲಾ ವಿಶ್ವಕರ್ಮ ಸಮಾಜದವರಿಗೆ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜಯಂತ್ ಕೆ.ಎಂ. ಆದ ನಾನು ಮತ್ತು ಸಂಘದ ಪ.ದಾಧಿಕಾರಿಗಳು ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ. ಹಾಗೂ ಮುಂಬರುವ ರಾಷ್ಟ್ರ ಮತ್ತು ರಾಜ್ಯದ ಚುನಾವಣೆಗಳಲ್ಲಿ ಅಂದರೆ ರಾಜ್ಯಸಭಾ, ವಿಧಾನಸಭೆ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಮಹಾನಗರ ಪಾಲಿಕೆಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವಕರ್ಮರಿಗೆ ಸೂಕ್ತ ರಾಜಕೀಯ ಸ್ಥಾನಮಾನ ಹಾಗೂ ಸಮಾಜದ ಶೈಕ್ಷಣಿಕ ಹಾಗೂ ಆರ್ಥಿಕ ಸದೃಢತೆಗಾಗಿ ಸರ್ಕಾರದ ಯೋಜನೆಗಳನ್ನು ರೂಪಿಸುವ ಮುಖಾಂತರ ಸಮಾಜದ ಏಳಿಗೆಗಾಗಿ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟವು ಬೆಂಬಲಿಸಬೇಕಾಗಿ ಮನವಿ ಮಾಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ರವರ ನೇತೃತ್ವದಲ್ಲಿ ಬಿ.ಜೆ.ಪಿ. / ಎನ್.ಡಿ.ಎ. ಮೈತ್ರಿಕೂಟವು ಅತ್ಯುತ್ತಮವಾದ ಫಲಿತಾಂಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು, ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ರವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವಿಶ್ವಕರ್ಮ ಮಹಾಸಂಘ (ರಿ) ದ ವತಿಯಿಂದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಜಯಂತ್ ಕೆ.ಎಂ. ತಿಳಿಸಿದರು.
City Today News 9341997936
