
ಬೆಂಗಳೂರು, ಜೂ, 19; ಸಿನರ್ಜಿ ಎಕ್ಕೊಶರ್ಸ್ ಅಂಡ್ ಈವೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ಕೊಯಮತ್ತೂರಿನ ಪ್ರತಿಷ್ಠಿತ ಕೊಡಿಸ್ನಿಯಾ ವ್ಯಾಪಾರ ಮೇಳದ ಸಂಕಿರ್ಣದಲ್ಲಿ ಜುಲೈ 3 ರಿಂದ 5 ರ ವರೆಗೆ ಸಾಟಿಯಿಲ್ಲದ ಸಮಗ್ರ ಆಹಾರ, ಉತ್ಪಾದನೆ ಮತ್ತು ಆತಿಥ್ಯ ವಲಯದ ನಾವೀನ್ಯತೆಯ ಬಿ2ಬಿ ಅಂತರರಾಷ್ಟ್ರೀಯ ಎಕ್ಸ್ ಪೋ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಭಾರತ ಚೆಫ್ ಸಂಘದ ಉಪಾಧ್ಯಕ್ಷ ಚಫ್ ಕಾಶಿ ವಿಶ್ವನಾಥನ್, ನೇಪಾಳ, ಶ್ರೀಲಂಕಾ, ಮಾಲೀವ್, ಬಾಂಗ್ಲಾದೇಶ ಮತ್ತು ಕೊಲ್ಲಿ ದೇಶಗಳು, ಸ್ಪೇನ್, ಇಟಲಿ, ಜರ್ಮನಿ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖ ಬ್ರಾಂಡ್ ಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ. 300ಕ್ಕೂ ಅಧಿಕ ಬ್ಯಾಂಡ್ ಗಳು, ಪೂರೈಕೆದಾರರು, ಆಹಾರ, ಪಾನೀಯ ಉತ್ಪಾದಕರು, ಆತಿಥ್ಯ ವಲಯದ ಗಣ್ಯರು, ಕೈಗಾರಿಕೆಗಳಿಗೆ ಸಂಬಂಧಪಟ್ಟ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.

ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ (ಎಂ.ಎಸ್.ಎಂ.ಇ] ಅಖಿಲ ಭಾರತ ಆಹಾರ ಸಂಸ್ಕರಣಾ ಸಂಘಟನೆ (ಎಐಎಫ್ ಪಿಎ] ಭಾರತೀಯ ಬ್ಯಾಂಕರ್ ಗಳ ಸಂಘ [ಎಸ್.ಐ.ಬಿ] ದಕ್ಷಿಣ ಭಾರತ ಹೊಟೆಲ್ಸ್ ಮತ್ತು ರೆಸ್ಟೋರೆಂಟ್ ಗಳ ಸಂಘ [2.0.2.4.2], [ ]. ದಕ್ಷಿಣ ಭಾರತ ಅಡುಗೆ ತಯಾರಕರ ಸಂಘ [ಎಸ್‌ಐಸಿಎ]ಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.
ಎಕ್ಸ್ ಪೋನಲ್ಲಿ 15 ನೇ ಆವೃತ್ತಿಯ ಬ್ಯಾಂಕಿಂಗ್ ತಂತ್ರಜ್ಞಾನ ಮೇಳ, 9 ನೇ ಆವೃತ್ತಿಯ ಆತಿಥ್ಯ. ಆಹಾರ ವಲಯದ ಮೇಳ 3 ನೇ ಆವೃತ್ತಿಯ ಆಹಾರ ಮತ್ತು ಪಾನೀಯ ಸಂಸ್ಕರಣಾ ಮೇಳ, 3 ನೇ ಆವೃತ್ತಿಯ ಭಾರತೀಯ ಆಹಾರ ಮೇಳ, ಡೈರಿ ಉದ್ಯಮದ ವಿಶೇಷ ಮೇಳಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ “ಹಾಸ್ಪಿ ಸೋರ್ಸ್ ಇನೋವೇಷನ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಕಾಶಿ ವಿಶ್ವನಾಥನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಹೋಟೆಲ್ ಸಂಘದ ಅಧ್ಯಕ್ಷ ಸಿ.ಪಿ. ರಾವ್. ಆಹಾರ ಸೇವೆಗಳ ಸಮಾಲೋಚಕರ ಸಂಘದ ಸಂಸ್ಥಾಪಕ ಸದಸ್ಯ ರಾಜೇಶ್ ಚೌಧರಿ, ಸಿನರ್ಜಿ ಎಕ್ಸೆಶರ್ಸ್ ಅಂಡ್ ಈವೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಸದಸ್ಯ ಶಶಿ ಕುಮಾರ್ ಮತ್ತಿತತರು ಉಪಸ್ಥಿತರಿದ್ದರು.
City Today News 9341997936
