
ಮೇಲ್ಕಂಡಂತೆ ತಮ್ಮಲ್ಲಿ ಪ್ರಸ್ತುತ ಪಡಿಸುತ್ತಾ ರಾಜ್ಯದಲ್ಲಿ ವಿಶ್ವಕರ್ಮ ಸಮಾಜವು ಸರಿಸುಮಾರು 45 ಲಕ್ಷ ಜನಸಂಖ್ಯೆ ಇದ್ದು ನಮ್ಮ ಪಂಚಕಸುಬುಗಳ ಮೂಲಕ ನಾಡಿಗೆ ಮತ್ತು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿರುವುದನ್ನು ಬಿಟ್ಟರೆ ನಮ್ಮ ಬದುಕು ಹಸನಾಗಲಿಲ್ಲ. ಕಾರಣ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸರ್ಕಾರಗಳಿಂದ సామాజిక ನ್ಯಾಯವನ್ನು ಪಡೆದುಕೊಳ್ಳಲು ನಾವುಗಳು ವಿಫಲವಾಗಿರುವುದೇ ಕಾರಣ. ತಮ್ಮಗಳ ಸಹಕಾರದಿಂದ ನಾವು ಕಳೆದ ಹತ್ತಾರು ವರ್ಷಗಳಿಂದ ಸಮಾಜದ ಸ್ವಾಮೀಜಿಗಳ ಸಾರಥ್ಯದಲ್ಲಿ ಮುಖಂಡರುಗಳು ನಡೆಸಿದಂತಹ ಹೋರಾಟಗಳು, ಕಾರ್ಯಕ್ರಮಗಳು, ಪಾದಯಾತ್ರೆಗಳ ಫಲವಾಗಿ ಸಮಾಜಕ್ಕೆ ಸರ್ಕಾರಗಳಿಂದ ಗೌರವ ಸಿಕ್ಕಿದೆಯೇ ಹೊರತು ನಮ್ಮ ಸಮಾಜದ ಮಕ್ಕಳ ಬಿವಿಷ್ಯಕ್ಕೆ ಅತೀ ಮುಖ್ಯವಾಗಿರುವ ಶಿಕ್ಷಣ, ಉದ್ಯೋಗ, ಅರ್ಥಿಕ, ಸಾಮಾಜಿಕವಾಗಿ ಸವಲತ್ತುಗಳು ಸಾಮಾಜಿಕ ನ್ಯಾಯದಡಿ ನಮಗೆ ಸಿಕ್ಕಿಲ್ಲ. ಇವೆಲ್ಲವನ್ನೂ ಮನಗಂದಂತಹ ಸಮಾಜದ ಸ್ವಾಮಿಜಿಗಳು ಎಲ್ಲರೂ ಒಂದೆಡೆ ಸೇರಿ ಸಮಾಜದ ಹಿರಿಯ ಮುಖಂಡರು ಮತ್ತು ಯುವ ಮುಖಂಡರುಗಳ ಸಮಾಗಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆಯನ್ನು ಕಳೆದ ವರ್ಷ ಸ್ಟಾಪಿಸಿ ಸಮಾಜಕ್ಕಾಗಿ ಹಲವಾರ ಹೋರಾಟಗಳನ್ನು ರೂಪಿಸಿ ಸರ್ಕಾರದ ಗಮನಕ್ಕೆ ತರಲಾಗಿದೆ. ನಮ್ಮ ಸಮಾಜದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ಇನ್ನಷ್ಟು ಪರಿಣಾಮಕಾರಿಯಾಗಿ ತರಬೇಕೆಂಬ ನಿಟ್ಟಿನಲ್ಲಿ ತೀರ್ಮಾನಿಸಿ, ದಿನಾಂಕ 20.06.20240 ಗುರುವಾರದಂದು ಮದ್ಯಾಹ್ನ 12.00 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾಜದ ಸಮಸ್ತ ಸ್ವಾಮೀಜಿಗಳ ಸಾರಥ್ಯದಲ್ಲಿ ರಾಜ್ಯಮಟ್ಟದ ಮುಖಂಡರುಗಳ ಸಮಾವೇಶವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಮುಖ್ಯಮಂತ್ರಿಯವರಾದ ಸನ್ಮಾನ್ಯಶ್ರೀ ಸಿದ್ದರಾಮಯ್ಯರವರು ವಹಿಸಲಿದ್ದಾರೆ. ಉದ್ಘಾಟನೆಯನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್‌ರವರು ಮಾಡಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರದ ಗೃಹಸಚಿವರು, ಮುಜರಾಯಿ ಇಲಾಖೆ ಸಚಿವರು, ಹಿಂದುಳಿದ ವರ್ಗಗಳ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಇನ್ನೂ ಅನೇಕ ಸಚಿವರುಗಳು ‘ಹಾಗೂ ಶಾಸಕರುಗಳು, ಅಯೋಧ್ಯೆ ಬಾಲರಾಮಮೂರ್ತಿ ಕಿತ್ತನೆಯ ಶಿಲ್ಲಿ ಅರುಣ್ ಯೋಗಿರಾಜ್, ಪದ್ಮಶ್ರೀ ಪುರಸ್ಕೃತರಾದ ಕೆ.ಎನ್.ರಾಜಣ್ಣ, ಡಾ: ಸಿ.ಆರ್.ಚಂದ್ರಶೇಖರ ಹಾಗೂ ಇನ್ನೂ ಮುಂತಾದ ಗಣ್ಯ ವ್ಯಕ್ತಿಗಳನ್ನು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಈ
ಸಮಾವೇಶದಲ್ಲಿ ಸರ್ಕಾರಕ್ಕೆ ಸಮಾಜದ ಪ್ರಮುಖ ಬೇಡಿಕೆಗಳಾದ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 100 ಕೋಟಿ ರೂ.ಅನುದಾನ ಮೀಸಲಿಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮದಲ್ಲಿ ಬಾಕಿ ಇರುವ ಸಾಲ ಮನ್ನಾ ಮಾಡಿಸುವುದು, ವಿಧಾನಸೌಧ/ವಿಕಾಸಸೌಧ/ಶಾಸಕರ ಭವನದ ಆವರಣದಲ್ಲಿ ಅಮರ ಶಿಲ್ಪಿ ಜಕಣಾಚಾರಿ ರವರ ಪ್ರತಿಮೆಯನ್ನು ಸ್ಥಾಪಿಸುವುದು, ವಿಶ್ವಕರ್ಮ ಅಭಿವೃದಿ ನಿಗಮದ ನಿರ್ವಹಣೆಯಲ್ಲಿ ಕೆ.ಪಿ.ಎಸ್.ಸಿ ಮತ್ತು ಯ.ಪಿ.ಎಸ್.ಸಿ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು, ಈಗಾಗಲೇ ಮಂಜೂರಾಗಿರುವಂತೆ ಗುಲ್ಬರ್ಗಾ ಮತ್ತು ಮೈಸೂರಿನಲ್ಲಿ ವಿಶ್ವಕರ್ಮ ವಸತಿ ನಿಲಯವನ್ನು ಶೀಘ್ರವಾಗಿ ಪ್ರಾರಂಭಿಸುವುದು, ರಾಜ್ಯದಲ್ಲಿರುವ ಮುಜರಾಯಿ ಇಲಾಖೆ ಮತ್ತು ಖಾಸಗಿ ವಲಯದ ದೇವಾಲಯಗಳು ಮತ್ತು ಮುಂದೆ ಕಟ್ಟಲ್ಪಡುವಂತಹ ದೇವಾಲಯಗಳಲ್ಲಿ ಕಡ್ಡಾಯವಾಗಿ ದೇವಾಲಯ ನಿರ್ಮಾಣ ಮತ್ತು ಗರ್ಭಗುಡಿ ಮೂರ್ತಿ ಕೆತ್ತಿರುವ ಶಿಲ್ಪಿಯ ಹೆಸರುಗಳನ್ನು ಶಿಲಾಶಾಸನದಲ್ಲಿ ಕೆತ್ತಿಸಿ ದೇವಾಲಯದ ಆವರಣದಲ್ಲಿ ಅಳವಡಿಸುವಂತೆ ಸರ್ಕಾರ ಆದೇಶಿಸಬೇಕೆಂದು ಒತ್ತಾಯಿಸಲಾಗುವುದು, ಮತ್ತು ಇನ್ನೂ ಅನೇಕ ಬೇಡಿಕೆಗಳನ್ನು ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಿದ್ದೇವೆ.
ಈ ಸಮಾವೇಶದಲ್ಲಿ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಷಿ ಶರೀಕ್ಷೆಗಳಲ್ಲಿ ಶೇಕಡಾ 75ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿರುವ ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ 1101 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಘಟನೆ ಅರಿವು ಮೂಡಿಸಲು ಈ ಸಮಾವೇಶದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಿರುತ್ತೇವೆ.
ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯದಡಿ ಶಿಕ್ಷಣ, ಉದ್ಯೋಗ, ಸಾಮಾಜಿಕ, ಆರ್ಥಿಕ ಸೌಲಭ್ಯಗಳನ್ನು ಪಡೆಯಲು ರಾಜ್ಯ ಮಟ್ಟದಲ್ಲಿ ಮುಖಂಡರುಗಳು ನಡೆಸುತ್ತಿರುವ ಈ ಸಮಾವೇಶಕ್ಕೆ ರಾಜ್ಯದ ಸಮಸ್ತ ವಿಶ್ವಕರ್ಮ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಆಗಮಿಸಬೇಕೆಂದು ಈ ಮೂಲಕ ಮನವಿ ಮಾಡುತ್ತಾ ಸಮಾಜದ ಕಷ್ಟಗಳನ್ನು ಸರ್ಕಾರದ ಗಮನಕ್ಕೆ ತಂದು ನಮಗೆ ನ್ಯಾಯ ಕೊಡಿಸಲು ಕಳೆದ 20 ವಷಗಳಿಂದ ಪ್ರೋತ್ಸಾಹ ನೀಡುತ್ತಿರುವ ಗೌರವಾನ್ವಿತ ಮಾಧ್ಯಮ ಬಂಧುಗಳಿಗೂ ಸಹಾ ಈ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜದ ವತಿಯಿಂದ ತಿಳಿಸಲಾಯಿತು.
City Today News 9341997936
