
ಕರ್ನಾಟಕ ರಾಜ್ಯ ಸರ್ಕಾರದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ LKG ಮತ್ತು UKG ಆರಂಭಿಸುವುದನ್ನು ಖಂಡಿಸಿ, ನಮ್ಮ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರಸಂಘದಿಂದ ದಿನಾಂಕ:26-6-2024 ರಿಂದ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಅನಿರ್ಧಿಷ್ಟವಾದಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಕಾರಣ ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಸಲುವಾಗಿ ಶಿಕ್ಷಣ ಹಾಗೂ ಸಚಿವರ ಈ ನಿರ್ಧಾರ ಅವೈಜ್ಞಾನಿಕ ನಮ್ಮ ಅಂಗನವಾಡಿಗೆ ಬರುವ ಮಕ್ಕಳನ್ನು LKG ಮತ್ತು UKG ತರಗತಿಗೆ ತೆಗೆದುಕೊಂಡರೆ, ರಾಜ್ಯದ ಎಲ್ಲಾ ಅಂಗನವಾಡಿಗೆ ಮಕ್ಕಳಿಲ್ಲದೆ ಹಂತ-ಹಂತವಾಗಿ ಮುಚ್ಚುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಮೊದಲು ಜಿಲ್ಲೆಯ ಪಬ್ಲಿಕ್ ಶಾಲೆಯಲ್ಲಿ ಮಾತ್ರ ಎಂದು ಹೇಳಿಕೆ ನೀಡಿ ಈಗ ಎಲ್ಲಾ ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳಲ್ಲಿ ದಿನಾಂಕ:20-6-2024ರಂದು ಪ್ರಾರಂಭಿಸಿರುವುದನ್ನು ತಕ್ಷಣ ನಿಲ್ಲಿಸಿ, ಸರ್ಕಾರದ ಆದೇಶವನ್ನು ವಾಪಾಸುತೆಗೆದುಕೊಳ್ಳಬೇಕು, ಇಲ್ಲವಾದರೆ ರಾಜ್ಯದ ಎಲ್ಲಾ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಅನ್ಯಾಯವಾಗುತ್ತಿರುವುದನ್ನು ಸಹಿಸಲು ಆಗದೇ, ನಾವುಗಳು ನಮ್ಮ ಅಂಗನವಾಡಿಗಳನ್ನು ಉಳಿಸಿಕೊಳ್ಳಲು ಈ ಹೋರಾಟವನ್ನು ಉಗ್ರವಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮತ್ತು ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ. ಹೋರಾಟದಲ್ಲಿ ಸುಮಾರು 10 ಸಾವಿರ ಕಾರ್ಯಕರ್ತೆಯರು ಬಾಗವಹಿತ್ತಿದ್ದೇವೆಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸ್ವತಂತ್ರಸಂಘದ ವತಿಯಿಂದ ಬಿ.ಪ್ರೇಮ-ರಾಜಾಧ್ಯಕ್ಷರು, ಜಯಲಕ್ಷ್ಮಿ ಬಿ.ಆರ್-ಗೌರವ ಅಧ್ಯಕ್ಷರು, ಉಮಾಮಣಿ-ರಾಜ್ಯ ಕಾರ್ಯದರ್ಶಿ, ವಿಶಾಲಾಕ್ಷಿ-ರಾಜ್ಯ ಖಂಜಾಚಿ,ನಿರ್ಮಲ ಬಿ,ಎಸ್-ರಾಜ್ಯಉಪಾಧ್ಯಕ್ಷರು, ಶಾಂತ-ರಾಜ್ಯ ಸಹ ಕಾರ್ಯದರ್ಶಿ ಮತ್ತು ಭಾರತಿ ಎನ್.ಪಿ-ರಾಜ್ಯ ಸಲಹೆಗಾರರು ತಿಳಿಸಿದರು.
City Today News 9341997936
