
ಶ್ರೀ ಆಂಜನೇಯ ಯುವಕ ಮಂಡಳಿ ಎಂಬ ಸಂಸ್ಥೆಯನ್ನು ಪರಮಪೂಜ್ಯರಾದ ಶ್ರೀ 1008 ಶ್ರೀ ವಿಶ್ವೇಶ ತೀರ್ಥ
ಶ್ರೀಪಾದಂಗಳವರು ಸ್ಥಾಪಿಸಿದರು. ಶ್ರೀ ಅಂಜನೇಯ ಯುವಕ ಮಂಡಳಿಯು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಮಾರ್ಗದರ್ಶನದಲ್ಲಿ ಧಾರ್ಮಿಕ ಸಾಮಾಜಿಕ ಹಾಗು ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಕೊಡುಗೆಯನ್ನು ನೀಡುತ್ತಿದೆ.

ಅಂಜನೇಯ ಯುವಕ ಮಂಡಳಿಯು ಅಸ್ತಿತ್ವಕ್ಕೆ ಬಂದು 2024ಕ್ಕೆ 25 ವರ್ಷಗಳು ತುಂಬಿತು. ಈ ಇಪ್ಪತ್ತೈದು ವರ್ಷಗಳಲ್ಲಿ ಮಾಡಿದ ಸೇವೆಯನ್ನು ಶ್ರೀ 1008 ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಸ್ಮರಣೆಯನ್ನು ಮಾಡುತ್ತಾ, ಶ್ರೀಹರಿ ವಾಯು ಗುರುಗಳಿಗೆ ಸಮರ್ಪಣೆ ಮಾಡುವ ರಜತಮಹೋತ್ಸವದ ಸಂಭ್ರಮಾಚರಣೆಯನ್ನು ಶ್ರೀ ರಾಘವೇಂದ್ರ ಸೇವಾ ಸಮಿತಿಯ ಸಹಕಾರದೊಂದಿಗೆ ಶ್ರೀ ಕ್ರೋಧಿನಾಮ ಸಂವತ್ಸರ ಜೇಷ್ಠ ಮಾಸ ಕೃಷ್ಣಪಕ್ಷ ಷಷ್ಠಿ ಗುರುವಾರದಿಂದ ನವಮಿ ಭಾನುವಾರ, 2024 ಜೂನ್ 26 ರಿಂದ 30 ವರೆಗೆ ವಿಜೃಂಭಣೆಯಿಂದ ಆಚರಿಸಲು ಶ್ರೀಹರಿಯ ವಾಯು ಗುರುಗಳ ಪ್ರೇರಣಾನುಸಾರ, ನಿರ್ಧರಿಸಲಾಗಿದೆ. ನಾಲ್ಕು ದಿನಗಳ ವೈಭವದ ಉತ್ಸವದಲ್ಲಿ ತಾವು ಕುಟುಂಬ ಪರಿವಾರ ಸಮೇತರಾಗಿ ಭಾಗವಹಿಸಿ ಶ್ರೀ ಅಂಜನೇಯನ ಉಪಾಸ್ಯಮೂರ್ತಿ ಪಟ್ಟಾಭಿರಾಮದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತಿದ್ದೇವೆ.
27 ಜೂನ್ 2024 ಗುರುವಾರ
ಬೆಳಿಗ್ಗೆ 9.00 ಕ್ಕೆ
* ಸತ್ಯನಾರಾಯಣ ಪೂಜೆ
* ಧನ್ವಂತರಿ ಹೋಮ ಹಾಗೂ ಭಜನೆ – ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿಯಿಂದ
ಸಂಜೆ 5.00 ರಿಂದ
* ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಸೋದೆ ಶ್ರೀವಾದಿರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ಆಗಮನ, ಪೂರ್ಣಕುಂಭ ಸ್ವಾಗತ.
• ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ರಜತ ಪಲ್ಲಕ್ಕಿ ಪ್ರಾಕಾರೋತ್ಸವ
ಸಭಾ ಕಾರ್ಯಕ್ರಮ 6.00 ರಿಂದ
ಅಧ್ಯಕ್ಷತೆ : ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರು, ಸೊಂದ ಶ್ರೀವಾದಿರಾಜ ಮಠಾಧೀಶರು
ಮುಖ್ಯ ಅತಿಥಿ : ವಿದ್ವಾನ್ ಶ್ರೀ ಸತ್ಯಧ್ಯಾನ ಆಚಾರ್ ಕಟ್ಟಿ, ಪ್ರಾಂಶುಪಾಲರು, ಜಯತೀರ್ಥ ವಿದ್ಯಾಪೀಠ, ಉತ್ತರಾದಿಮಠ ಮುಖ್ಯ ಅತಿಥಿ : ಸನ್ಮಾನ್ಯ ಕು. ಶೋಭಾ ಕರಂದ್ಲಾಜೆ, ಮಾನ್ಯ ಕೇಂದ್ರ ಸಚಿವರು, ಭಾರತ ಸರ್ಕಾರ
ಮುಖ್ಯ ಅತಿಥಿ : ಶ್ರೀ ಜೆ.ಕೆ. ಸುಧಾಕರ್, ಅಧ್ಯಕ್ಷರು, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)
ಮುಖ್ಯ ಅತಿಥಿ : ಶ್ರೀ ರವೀಂದ್ರ ಹೆಚ್. ದೇಸಾಯಿ, ಕಾರ್ಯದರ್ಶಿ, ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ.)
ದೀಪ ಪ್ರಜ್ವಾಲನೆ – ರಜತ ಮಹೋತ್ಸವ ಸಮಾರಂಭದ ಉದ್ಘಾಟನೆ, ಶ್ರೀಪಾದಂಗಳವರ ಅಶೀರ್ವಚನ •
ಶ್ರೀಗಳವರಿಂದ ತೊಟ್ಟಿಲು ಪೂಜೆ, ಭೂತರಾಜರ ಪೂಜೆ, ಮಹಾಮಂಗಳಾರತಿ
28 ಜೂನ್ 2024 ಶುಕ್ರವಾರ
ಬೆಳಿಗ್ಗೆ 7.00 ಕ್ಕೆ
• ಶ್ರೀ 1008 ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ
• ಶ್ರೀ ಪಟ್ಟಾಭಿರಾಮ ದೇವರು, ಶ್ರೀ ಮುಖ್ಯ ಪ್ರಾಣದೇವರು, ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನ, ಶ್ರೀ ಧನ್ವಂತರಿ, ಶ್ರೀ ಮಹಾಗಣಪತಿ ದೇವರುಗಳಿಗೆ ವಿಶೇಷ ಬೆಣ್ಣೆ ಅಲಂಕಾರ.
ಸಭಾ ಕಾರ್ಯಕ್ರಮ ಬೆಳಿಗ್ಗೆ 10.30 ಕೆ
• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ
ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ, ಫಲ ಮಂತ್ರಾಕ್ಷತೆ ವಿತರಣೆ
ತೀರ್ಥ ಪ್ರಸಾದ
ಸಂಜೆ 5.00 ರಿಂದ
ಲೋಕ ಕಲ್ಯಾಣಾರ್ಥವಾಗಿ ಆಚರಿಸುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣದ ಅಂಗವಾಗಿ ಶ್ರೀನಿವಾಸ ದೇವರ ವರಪೂಜಾ ಸಮಾರಂಭ
29 ಜೂನ್ 2024 ಶನಿವಾರ
ಬೆಳಿಗ್ಗೆ 8.00 ಕ್ಕೆ
• ಶ್ರೀ ಶ್ರೀನಿವಾಸ ದೇವರ ಕಲ್ಯಾಣ ಮಹೋತ್ಸವ • ಮಹಾಮಂಗಳಾರತಿ • ತೀರ್ಥ ಪ್ರಸಾದ
ಸಂಜೆ: 5.00
• ಸಭಾ ಕಾರ್ಯಕ್ರಮ
ಮುಖ್ಯ ಅತಿಥಿಗಳು :-
ಶ್ರೀ ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರು
ಶ್ರೀ ಪ್ರತಾಪ ಸಿಂಹ, ಯುವ ನಾಯಕರು, ಮಾಜಿ ಲೋಕಸಭಾ ಸದಸ್ಯರು ಶ್ರೀ ಅಜಿತ್ ಹನುಮಕ್ಕನವರ್, ಮುಖ್ಯ ಸಂಹಾದಕರು – ಸುವರ್ಣ ನ್ಯೂಸ್
* ಸಾಂಸ್ಕೃತಿಕ ಕಾರ್ಯಕ್ರಮ : – “ನಮ್ಮ ಅಯೋಧ್ಯ ರಾಮ ಮಂದಿರ ಕನಸಲ್ಲ” – ನಾಟಕ ಶ್ರೀ ಆಂಜನೇಯ ಯುವಕ ಮಂಡಳಿ ಸದಸ್ಯರಿಂದ
30 ಜೂನ್ 2024 ಭಾನುವಾರ
ಬೆಳಿಗ್ಗೆ 8.00 ಕ್ಕೆ
* ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ
ಪೂರ್ಣಕುಂಭ ಸ್ವಾಗತ. • ಶ್ರೀಪಾದಂಗಳವರಿಗೆ ತುಲಾಭಾರ
• ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ
* ಸಭಾ ಕಾರ್ಯಕ್ರಮ ಮಧ್ಯಾಹ್ನ 12.00 ಕ್ಕೆ
ಅಧ್ಯಕ್ಷತೆ :- ಪರಮಪೂಜ್ಯ ಶ್ರೀ 1008 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು, ಮುಖ್ಯ ಅತಿಥಿಗಳು :- ಶ್ರೀ ಭೈರತಿ ಸುರೇಶ್, ಸಚಿವರು, ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ
• ಶ್ರೀಪಾದಂಗಳವರಿಂದ ಹಿತೋಪದೇಶ ಹಾಗೂ ಯುವಕ ಮಂಡಳಿ ಕಾರ್ಯಕರ್ತರಿಗೆ ಸನ್ಮಾನ,” ಫಲ ಮಂತ್ರಾಕ್ಷತ ವಿತರಣೆ • ತೀರ್ಥ ಪ್ರಸಾದ
ಸಂಜೆ 6.00 ಕ್ಕೆ
ಸಾಂಸ್ಕಂತಿಕ ಕಾರ್ಯಕ್ರಮ : ಪ್ರಬಾತ್ ಕಲಾವಿದರಿಂದ ನೃತ್ಯ ರೂಪಕ “ಕರುನಾಡ ವೈಭವ”
ಆಂಜನೇಯ ಯುವಕ ಮಂಡಳಿ ಹಾಗೂ ಶ್ರೀ ಲಕ್ಷ್ಮೀ ಶೋಭಾನೆ ಮಹಿಳಾ ಮಂಡಳಿ
ರಜತ ಮಹೋತ್ಸವಕ್ಕೆ ಶುಭ ಕೋರುವವರು : ಶ್ರೀ ರಾಘವೇಂದ್ರ ಸೇವಾ ಸಮಿತಿ (ನೋಂ)
ಮೇಲಿನ ಎಲ್ಲಾ ಮಹಿಗಳನ್ನು ಶ್ರೀ ಆಂಜನೇಯ ಯುವಕ ಮಂಡಳಿಯ ಪರವಾಗಿ ಅನಿಕೇತ್ ದೇಸಾಯಿ – ಅಧ್ಯಕ್ಷರು, ಜಯಂತ್ ಕುಮಾರ್ – ಕಾರ್ಯದರ್ಶಿಗಳು ಮತ್ತು ಮಂಡಳಿ ಯವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.
City Today News 9341997936
