
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಶ್ರೀ ಜಯದೇವನಾಯ್ಕ ರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿರವರಾದ ಶ್ರೀ ಡಿ.ಕೆ.ಶಿವಕುಮಾರ್ ರವರಿಗೆ ಧನ್ಯವಾದಗಳು.
> ಕರ್ನಾಟಕ ಬಂಜಾರ ತಾಂಡಾಗಳ ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದು, ಇದಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಅಂದಾಜು ರೂ.500.00 ಕೋಟಿಗಳನ್ನು ನೀಡಬೇಕೆಂದು ಮುಖ್ಯಮಂತ್ರಿ ರವರಿಗೆ ಒತ್ತಾಯಿಸಲಾಗಿದೆ.
ಬಂಜಾರ(ಲಂಬಾಣಿ) ಜನಾಂಗದ ಒಬ್ಬರ/ವಿಧಾನಸಭಾ ಸದಸ್ಯರಿದ್ದು ಅವರಿಗೆ ಮಂತ್ರಿ ಪದವಿ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿ ರವರಿಗೆ ಮನವಿ ಮಾಡಿಕೊಂಡಿರುತ್ತೇವೆ.
> ಬೆಂಗಳೂರಿನ ಬಂಜಾರ ಭವನದ ಉದ್ಘಾಟನಾ ಕಾರ್ಯಕ್ರಮದಂದು ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ಘೋಷಿಸಿದಂತೆ ಬಂಜಾರ ಭವನ ಮುಂದುವರೆದ ಕಾಮಗಾರಿಗೆ ರೂ.8.00 ಕೋಟಿ ಹಣ ಕೂಡಲೇ ಬಿಡುಗಡೆಗೊಳಿಸಲು ಕೋರುತ್ತೇವೆ.
ಈ ಎಲ್ಲಾ ನಮ್ಮ ಬೇಡಿಕೆಗಳನ್ನು ಪೂರೈಸಲು ಕರ್ನಾಟಕದ ಬಂಜಾರ ಸಮುದಾಯ ಹಾಗೂ ಮೇಲ್ಕಂಡ ನಮ್ಮ ಸಂಘವು ಆಗ್ರಹಿಸುತ್ತದೆ ಎಂದು ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ(ರಿ) ಬೆಂಗಳೂರು ಇವರ ವತಿಯಿಂದ ಎನ್.ಆರ್.ನಾಯಕ್-ಅಧ್ಯಕ್ಷರು,ಹೆಚ್.ಬಿ.ಸಿದ್ಯಾನಾಯಕ್ -ಪ್ರಧಾನ ಕಾರ್ಯದರ್ಶಿ ಹಾಗೂ ಸಂಘದ ಮುಖಂಡರು ಉಪಸ್ಥಿತರಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪಕಟಿಸಲಾಯಿತು.
City Today News 9341997936
