
ರಾಷ್ಟ್ರದ್ಯಂತ ಮೇ 5 ರಂದು ನಡೆದ ವೈದ್ಯಕೀಯ ಕೋರ್ಸಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಇಡೀ ದೇಶಾದ್ಯಂತ ಸೋರಿಕೆಯಾಗಿವೆ ಇದರಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ವ್ಯಕ್ತವಾಗುತ್ತದೆ.
ದೇಶದ ಪ್ರಧಾನ ಮಂತ್ರಿ ತವರು ರಾಜ್ಯ ಗುಜರಾತ, ಬಿಹಾರ, ರಾಜಸ್ತಾನ, ಹರಿಯಾಣ, ಜಾರ್ಖಂಡ, ಉತ್ತರ ಪ್ರದೇಶ, ಮಹಾರಾಷ್ಟವರೆಗೆ ಹಗರಣ ವ್ಯಾಪಿಸಿದ್ದು ಪ್ರಶ್ನೆ ಪತ್ರಿಕೆ ಸೋರಿಕೆಯ ಅಕ್ರಮದಲ್ಲಿ ಭಾಗಿಯಾದ ಹಲವಾರು ಜನರನ್ನು ಇಗಾಗಲೇ ಬಂಧಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಸಾಬೀತಾಗಿದೆ ಪರೀಕ್ಷೆಯ ಪಾವಿತ್ರೆಕ್ಕೆ ದಕ್ಕೆ ಬಂದಿದ್ದೆ. ಈ ಹಿನ್ನಲೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಅಂತಹ ಪ್ರಕರಣದೊಂದಿಗೆ ರಾಜೀ ಮಾಡಿಕೊಂಡು ಮರು ಪರೀಕ್ಷೆ ನಡೆಸದಿರುವುದ ರಿಂದ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ಗಂಡಾಂತರದಲ್ಲಿ ಸಿಲುಕಿಸುದಂತಾಗುವದರಿಂದ ಮರು ಪರೀಕ್ಷೆಗೆ ಆದೇಶಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ದೇಶದ ಸುಪ್ರೀಂ ಕೋರ್ಟಿಗೆ ಮನವಿ ಮಾಡುತ್ತದೆ.
ವೈದ್ಯಕೀಯ ಕೋರ್ಸುಗಳ ಪ್ರವೇಶ ಪರೀಕ್ಷೆ (NEET) ನಡೆಸುವ ಕೇಂದ್ರ ಸರಕಾರ ರಾಜ್ಯ ಸರ್ಕಾರಗಳ ಹಕ್ಕುನ್ನು ದಮನಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಪ್ರತಿಶತ 15% ಅಖಿಲ ಭಾರತ ಸೀಟುಗಳನ್ನು ಹೊರತುಪಡಿಸಿ ಶೇಕಡಾ 85% ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ಆಯಾ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು. ದೇಶದಲ್ಲಿ ನೀಟ್ ವ್ಯವಸ್ಥೆ ಜಾರಿಯಾದಗಿನಿಂದ ತಮಿಳು ನಾಡು ಸರ್ಕಾರ ಇದನ್ನು ವಿರೋದಿಸಿ ವಿಧಾನ ಸಭೆಯಲ್ಲಿ ಠರಾವು ಪಾಸ್‌ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಿದೆ. ಕೇಂದ್ರ ಸರ್ಕಾರ ಇನ್ನೂವರೆಗು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬಾನರ್ಜಿರವರು ರಾಷ್ಟ್ರ ಮಟ್ಟದಲ್ಲಿ ನಡೆಯುವ ನೀಟ್ ಪರೀಕ್ಷೆಯನ್ನು ವಿರೋದಿಸಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಈಗಾಗಲೇ ನೀಟ್ ಪರೀಕ್ಷೆಯ ಅಕ್ರಮ ಕುರಿತು ವಿದ್ಯಾರ್ಥಿಗಳಿಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ ಅದರಂತೆ ಜುಲೈ 15 ರಿಂದ ಆರಂಭವಾಗುವ ವಿಧಾನ ಸಭೆಯ ಅಧಿವೇಶನದಲ್ಲಿ ತಮಿಳನಾಡು ಸರ್ಕಾರದಂದೆ ನೀಟ್ ವ್ಯಾಪ್ತಿಯಿಂದ ಕರ್ನಾಟಕವನ್ನು ಬೇರ್ಪಡಿಸುವ ಠರಾವು ಪಾಸ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ದಲಿತ ಸಂರ್ಘಷ ಸಮಿತಿ (ಅಂಬೇಡ್ಕರ್ ವಾದಿ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತದೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಎಸ್.ಆರ್.ಕೊಲ್ಲೂರು, ರಾಜ್ಯ ಸಂಚಾಲಕ, ದ.ಸಂ.ಸ. (ಅಂಬೇಡ್ಕರ ವಾದಿ) ರಾಜ್ಯ ಸಮಿತಿ ಬೆಂಗಳೂರು. ತಿಳಿಸಿದರು.
City Today News 9341997936
