ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ರೈತರಿಗೆ ಪರಿಹಾರದ ನಿವೇಶನ ನೀಡಲು ಅನುಮತಿ ನೀಡಿ

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ

20 ವರ್ಷ ಕಳೆದರೂ ಬಿ.ಎಂ.ಐ.ಸಿ.ಯೋಜನೆಯಲ್ಲಿ ಭೂಮಿ ಕಳೆದುಕೊಂಡ 2000 ರೈತ ಕುಟುಂಬಗಳಿಗಿನ್ನೂ ಪರಿಹಾರದ ನಿವೇಶನ ನೀಡಲು ಅನುಮತಿ ನೀಡದ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತಮ್ಮ ಬಿಟ್ಟಿ ಗ್ಯಾರಂಟಿಗಳ ಹೊಟ್ಟೆ ತುಂಬಿಸಲು ನೈಸ್ ಯೋಜನೆಯ ಭೂಮಿ ಮೇಲೆ ಕಣ್ಣಾಕಿ ಸಂಪನ್ಮೂಲ ತುಂಬಿಸಿಕೊಳ್ಳಲು ಯಾವ ಹಕ್ಕಿದೆ..!? ಮೊದಲು ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ರೈತರಿಗೆ ಪರಿಹಾರದ ನಿವೇಶನ ನೀಡಲು ಅನುಮತಿ ನೀಡಿ,

ಕನ್ನಡ ನಾಡು- ನುಡಿ,ನೆಲ-ಜಲ ಹಾಗು ಕನ್ನಡ ರೈತಜನರ ಪರ ನಿರಂತರ ಹೋರಾಟ ಮಾಡುತ್ತಾ ಬಂದಿರುವ ‘ ಕರ್ನಾಟಕ ಸಂಘಟನೆಗಳ ಒಕ್ಕೂಟವು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕ್ಕೆ ಆಗ್ರಹ ಪಡಿಸುತ್ತಾ, ಈ ಪತ್ರಿಕಾ ಗೋಷ್ಠಿ ಕರೆದ ವಿವರ ಏನೆಂದರೆ,ಜುಲೈ 3 ನೇ ತಾರೀಖಿನ ವಿಜಯ ಕರ್ನಾಟಕ ಪತ್ರಿಕೆಯ ಮುಖಪುಟದ ಸುದ್ದಿ ಪ್ರಕಟವಾಗಿರುವ ಪ್ರಕಾರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಬಿಟ್ಟಿ ಗ್ಯಾರಂಟಿಗಳ ಹೊಟ್ಟೆ ತುಂಬಿಸಿಕೊಳ್ಳುವ ಭರದಲ್ಲಿ ಆ ಯೋಜನೆಗಳ ವೆಚ್ಚ ಸರಿದೂಗಿಸಲು ತುಮಕೂರು ರಸ್ತೆಯ ಮಾದಾವರ ದಿಂದ ಹೊಸೂರು ರಸ್ತೆಯ ಎಲೆಕ್ಟ್ರಾನಿಕ್ ಸಿಟಿ ಯವರೆಗಿನ ಬೆಂಗಳೂರು ಸಿಟಿ ಹೊರಗಿನ ಬೃಹತ್ ಹಾಗು ಶೀಘ್ರ ಸಂಚಾರದ ಬೆನ್ನೆಲುಬಾಗಿರುವ ನೈಸ್ ಕಂಪನಿ ನಿರ್ಹಿಸುತ್ತಿರುವ ಬಿ.ಎಂ.ಐ.ಸಿ. ಯೋಜನೆಯನ್ನು ಸ್ವಾಧೀನ ಪಡಿಸಿಕೊಂಡು ಅದರ ಮೂಲಕ ರಸ್ತೆಯ ಆಸುಪಾಸಿನ ಸಾವಿರಾರು ಎಕರೆ ಭೂಮಿಯನ್ನು ಸಂಪನ್ಮೂಲಕ್ಕೆ ಮಾರ್ಗವಾಗಿಸುವ ಲೆಕ್ಕಾಚಾರ ಹಾಕಿ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ ಎಂಬ ಸುದ್ದಿ ಓದಿ ನಿಜಕ್ಕೂ ಆಶ್ಚರ್ಯ ಉಂಟಾಯಿತು. ಇದೊಂದು ಅಪ್ರಬುದ್ಧ ಹಾಗು ದುರಾದೃಷ್ಟಕರ ನಡೆ ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸುತ್ತಿದೆ.

ಒಂದೆಡೆ ಸರ್ಕಾರ ಯುರೋಪ್ ಮತ್ತು ಜಪಾನ್..ನಂತಹ ರಾಷ್ಟ್ರಗಳ ಖಾಸಗೀ ಕಂಪನಿಗಳನ್ನು ಆಹ್ವಾನಿಸಿ, ಮೂಲಭೂತ ಸೌಕರ್ಯ ಕ್ಷೇತ್ರ ಹಾಗು ಕೈಗಾರಿಕಾ ಕ್ಷೇತ್ರಗಳಿಗಾಗಿ ಅಗತ್ಯ ಸಾವಿರಾರು ಎಕರೆ ಭೂಮಿ,ನೀರು ನೀಡುವ ಒಪ್ಪಂದ ಮಾಡಿಕೊಳ್ಳುತ್ತಾ ಬರುತ್ತಿದ್ದು,ಮತ್ತೊಂದೆಡೆ ಇನ್ನೂ ಅನೇಕ ಕಾನೂನು ಪ್ರಕರಣಗಳು ರೈತ ಪರಿಹಾರ ವ್ಯಾಜ್ಯಗಳು ಬಾಕಿ ಇರುವ ಬಿ.ಎಂ.ಐ.ಸಿ.ಯೋಜನೆ ವಶಕ್ಕೆ ಪಡೆಯುವ ಮಾತುಗಳು ಇವರ ದ್ವಂದ್ವ ನಿಲುವನ್ನು ಸಾದರಪಡಿಸುತ್ತಿವೆ.

ಪ್ರತಿಷ್ಟಿತ ಜೆ.ಎಸ್.ಡಬ್ಲೂ ಸ್ಟೀಲ್ ಕಂಪನಿಗೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಹಾಗು ಕುರೇಕೊಪ್ಪ ಬಳಿ ಒಟ್ಟು 3666 ಎಕರೆ ಭೂಮಿಯನ್ನು ಸರ್ಕಾರ ಕಡಿಮೆ ಮೊತ್ತಕ್ಕೆ ಕೊಟ್ಟಿದೆ ಇದೂ ಸಹ ರಾಜಕೀಯ ನಾಯಕರ ಮಾತಿನ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿತ್ತು!.ಇದೇ ರೀತಿ ಟೊಯೋಟಾ ಕಂಪನಿಗೆ 1800 ಎಕರೆ ಕೆ.ಐ.ಡಿ.ಬಿ.ಮೂಲಕವೇ ರೈತರಿಂದ ನೀಡಿದ ಭೂಮಿ ಟಾಟಾ ಸ್ಟೀಲ್‌ ಬಯೋಕಾನ್,ವಿಪ್ರೋ,ಇನ್ಫೋಸಿಸ್…ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಖಾಸಗೀ ಕ್ಷೇತ್ರದಲ್ಲಿ ಸ್ಥಾಪನೆಯಾಗಿರುವ ಖಾಸಗೀ ಕಂಪನಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಹಲವು ಷರತ್ತುಗಳ ಮೇಲೆಯೇ ನೀಡಲಾಗಿದ್ದು, ಹಲವಾರು ಕಡೆ ಈ ಯೋಜನೆಗಳಲ್ಲಿ ಇಂತಹ ಯೋಜನೆಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ಇನ್ನೂ ಸರಿಯಾದ ಪರಿಹಾರವೇ ಸಿಕ್ಕಿಲ್ಲ ಎಂದು ಇವತ್ತಿಗೂ ಅನೇಕ ಜನಪರ ಸಂಘಟನೆಗಳು ಇಂತಹ ಸರ್ಕಾರದ ನೀತಿಯ ವಿರುದ್ಧ ರೈತರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಲೇ ಬರುತ್ತಿವೆ.

ಹೀಗಿರುವಾಗ ನೈಸ್ ಎಂಬ ಖಾಸಗೀ ಕಂಪನಿಯ ಮೂಲಕವೇ ಅನೇಕ ಷರತ್ತುಗಳು ಹಾಗು ಒಪ್ಪಂದಗಳ ಮೂಲಕವೇ ಆರಂಭವಾಗಿರುವ ಬಿ.ಎಂ.ಐ.ಸಿ. ಯೋಜನೆಗಾಗಿ ಭೂಮಿ ಕಳೆದುಕೊಂಡ III ರೈತ ಕುಟುಂಬಗಳಿಗೆ ಸರ್ಕಾರವೇ ಮಾಡಿರುವ ಒಪ್ಪಂದದ ಪ್ರಕಾರವೇ ಇನ್ನೂ ಸರಿಯಾಗಿ ಪರಿಹಾರಾರ್ಥ ನಿವೇಶನಗಳು ಹಂಚಿಕೆಯಾಗಲು ಸರ್ಕಾರವೇ ಅನುಮತಿ ನೀಡದೇ ನಾಟಕ ಆಡುತ್ತಾ, ರೈತರಿಗೆ ಕೊಡಬೇಕಾದ ಪರಿಹಾರ ಕೊಡದೇ ಇರುವಾಗ ತನ್ನ ಸಂಪನ್ಮೂಲ ಸಂಕಷ್ಟಕ್ಕೆ ಈ ಬಿ.ಎಂ.ಐ.ಸಿ.ಪಿ.ಯ ಬೆಲೆ ಬಾಳುವ ಭೂಮಿ ಮೇಲೆ ಕಣ್ಣಿಟ್ಟು ಸರ್ಕಾರದ ವಶಕ್ಕೆ ಪಡೆಯಲು ಸರ್ಕಾರಕ್ಕೆ ನೈತಿಕತೆ ಇದೆಯೇ..!? ಈ ನಡೆ ಅಪ್ರಬುದ್ಧ ಹಾಗು ಪರಿಪಕ್ಷವಲ್ಲದ್ದು ಎಂದು ಒಕ್ಕೂಟ ಆಕ್ರೋಶ ವ್ಯಕ್ತಪಡಿಸುತ್ತದೆ ಹಾಗು ಈ ಕೂಡಲೇ ಈ ಯೋಜನೆಗೆ ತಮ್ಮ ಅಮೂಲ್ಯ ಭೂಮಿ ನೀಡಿ ಅಕ್ಷರಶಃ ಬೀದಿಗೆ ಬಿದ್ದಿರುವ ರೈತರಿಗೆ ಕೂಡಲೇ ಕೊಡಬೇಕಾದ ನಿವೇಶನಗಳ ನೀಡಲು ಕಂಪನಿಗೆ ಅನುಮತಿ ನೀಡಿ ರೂತರ ನೆರವಿಗೆ ಬರಬೇಕೆಂದು ಕರ್ನಾಟಕ ಸಂಘಟನೆಗಳ ಒಕ್ಕೂಟ ಆಗ್ರಹಿಸುತ್ತದೆ ಎಂದು ಕೆ.ಎನ್.ಲಿಂಗೇಗೌಡ, ರಾಜ್ಯಾಧ್ಯಕ್ಷರು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.